ಸೈನ್ಸ್ ಒಲಿಂಪಿಯಾಡ್ : ಬೆಂಗಳೂರಿನ ಏಳು ವಿದ್ಯಾರ್ಥಿಗಳಿಗೆ 1st Rank

ಬೆಂಗಳೂರು, ಜೂನ್ 8: ನಮ್ಮ ಬೆಂಗಳೂರಿನ ಏಳು ವಿದ್ಯಾರ್ಥಿಗಳು ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್ 2017-18 ಸಾಲಿನಲ್ಲಿ ಏರ್ಪಡಿಸಿದ್ದ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ 1 Rank ಪಡೆಯುವ ಮೂಲಕ ತಂದೆ-ತಾಯಿ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಮೊದಲ Rank ಪಡೆಯುವ ಜೊತೆಗೆ ಸ್ವರ್ಣ ಪದಕ ಹಾಗೂ ತಲಾ 50 ಸಾವಿರ ನಗದನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಇಂಟರ್ ನ್ಯಾಷನಲ್ ಮ್ಯಾಥಮೆಟಿಕ್ಸ್ ಒಲಿಂಪಿಯಾಡ್‍ನಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ, 9ನೇ ತರಗತಿ ವಿದ್ಯಾರ್ಥಿ ಆರ್ನವ್ ಆದಿತ್ಯ ಸಿಂಗ್, ಮೊದಲ ಇಂಟರ್ ನ್ಯಾಷನಲ್ Rank ಪಡೆದಿದ್ದಾರೆ.

ಕ್ರೈಸ್ಟ್ ಅಕಾಡೆಮಿ ಐಸಿಎಸ್‍ಇ ಶಾಲೆಯ ಪಿ.ಪ್ರಣೀತ್ ಆಳ್ವ ಹಾಗೂ ಬ್ರಹ್ಮಗಿರಿ ವಿದ್ಯಾಮಂದಿರದ ಇ. ಮಾನ್ಯ - ನಾಲ್ಕನೇ ತರಗತಿ ಇಬ್ಬರೂ ರಾಷ್ಟ್ರೀಯ ಸೈಬರ್ ಒಲಿಂಪಿಯಾಡ್‍ನಲ್ಲಿ ಮೊದಲ ಇಂಟರ್ ನ್ಯಾಷನಲ್ Rank ಪಡೆದಿದ್ದಾರೆ.

Seven Bengaluru students bag top ranks in Science Olympiad 2017-18 Exam

ಇಂಟರ್ ನ್ಯಾಷನಲ್ ಇಂಗ್ಲಿಷ್ ಒಲಿಂಪಿಯಾಡ್‍ನಲ್ಲಿ ಮೊದಲ ಇಂಟರ್ ನ್ಯಾಷಷನಲ್ Rank ಪಡೆದಿರುವುದು ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ 4ನೇ ತರಗತಿ ವಿದ್ಯಾರ್ಥಿ ವಂಶಿ ಕೃಷ್ಣನ್ ರಾಜಗೋಪಾಲ್, ಗಿಯರ್ ಇನೊವೆಟಿವ್ ಅಂತಾರಾಷ್ಟ್ರೀಯ ಶಾಲೆಯ 8ನೇ ತರಗತಿಯ ರಿಷಿ ಆನಂದ ನಂಬಿಯಾರ್, ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯ 10ನೇ ತರಗತಿಯ ಎಸ್.ರಕ್ಷಿತ್ ಹಾಗೂ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂ-ಸಿಬಿಎಸ್‍ಇ 11ನೇ ತರಗತಿಯ ಕೌಸ್ತುಭ ಭಂಜ್.

2017-18ರ ಎಸ್‍ಒಎಫ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ 30 ರಾಷ್ಟ್ರದ 1,400 ನಗರಗಳ 45,000 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಒಟ್ಟು 45 ಲಕ್ಷ ವಿದ್ಯಾರ್ಥಿಗಳ ಪೈಕಿ ಬೆಂಗಳೂರಿನ ವಿದ್ಯಾರ್ಥಿಗಳ ಸಂಖ್ಯೆ 485429.

Seven Bengaluru students bag top ranks in Science Olympiad 2017-18 Exam

ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ 30 ರಾಷ್ಟ್ರಗಳ 25 ಮಂದಿ ಪ್ರಾಂಶುಪಾಲರು ಹಾಗೂ 50 ಶಿಕ್ಷಕರನ್ನೂ ಸಹ ಇದೇ ವೇಳೆ ಗೌರವಿಸಿ ನಗದು, ಸ್ಮರಣ ಫಲಕ ನೀಡಲಾಯಿತು.

ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್: ಶಾಲಾ ಮಟ್ಟ ಸೇರಿದಂತೆ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಮತ್ತು ಸಾಧನೆ ಗುರುತಿಸಿ, ಪ್ರೋತ್ಸಾಹಿಸುವ ಗುರಿ ಹೊಂದಿದೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಸ್ಪೂರ್ತಿ ಬೆಳೆಸಿ ತಮ್ಮ ಶಾಲಾ ಮಟ್ಟದ ಸ್ಪರ್ಧೆಗಳ ಜತೆಗೆ ಹೊರಗೆ ಸಹ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವುದಾಗಿದೆ. ಪ್ರತಿ ವಿದ್ಯಾರ್ಥಿಯ ಸಾಧನೆಯನ್ನು ವಿಮರ್ಶಿಸಲಾಗುವುದು.

ಶಾಲೆ, ನಗರ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಅವರನ್ನು ಸ್ಪರ್ಧೆಗೆ ಸಜ್ಜು ಮಾಡಲಾಗುವುದು. ಪ್ರತಿ ವಿದ್ಯಾರ್ಥಿಯ ವಿಮರ್ಶಾತ್ಮಕ ವರದಿ ಅವರ ಸಾಮಥ್ರ್ಯ/ ದೌರ್ಬಲ್ಯವನ್ನೂ ಒಳಗೊಂಡಿರುತ್ತದೆ. ಎಸ್‍ಒಎಫ್ ಆರು ಒಲಿಂಪಿಯಾಡ್ ಪರೀಕ್ಷೆ- ನ್ಯಾಷನಲ್ ಸೈಬರ್ ಒಲಿಂಪಿಯಾಡ್(ಎನ್‍ಸಿಒ), ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್ (ಎನ್‍ಎಸ್‍ಒ), ಅಂತಾರಾಷ್ಟ್ರೀಯ ಮ್ಯಾಥಮೆಟಿಕ್ಸ್ ಒಲಿಂಪಿಯಾಡ್(ಐಎಂಒ), ಅಂತಾರಾಷ್ಟ್ರೀಯ ಇಂಗ್ಲಿಷ್ ಒಲಿಂಪಿಯಾಡ್ (ಐಇಒ), ಅಂತರಾಷ್ಟ್ರೀಯ ಜನರಲ್ ನಾಲೆಡ್ಜ್ ಒಲಿಂಪಿಯಾಡ್(ಐಜಿಕೆಒ) ಹಾಗೂ ಅಂತಾರಾಷ್ಟ್ರೀಯ ಕಂಪನಿ ಸೆಕ್ರೆಟರಿಸ್ ಒಲಿಂಪಿಯಾಡ್(ಐಸಿಎಸ್‍ಒ) ನಡೆಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+