ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಓಲಾ, ಉಬರ್ ಚಾಲಕರಿಗೆ ಬ್ಯಾಂಕ್ ಸಾಲ ಸ್ಥಗಿತ

ಬೆಂಗಳೂರಿನಲ್ಲಿ ವಾಹನ ಸಾಲ ತೆಗೆದು ಸುಸ್ತಿದಾರರಾಗುತ್ತಿರುವ ಓಲಾ ಮತ್ತು ಉಬರ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಲಕರಿಗೆ ಸಾಲ ನೀಡುವುದನ್ನು ನಿಲ್ಲಿಸಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಏಪ್ರಿಲ್ 25: ನೀವು ಓಲಾ, ಉಬರ್ ಚಾಲಕರಾ? ನಿಮಗೆ ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಾಹನ ಸಾಲ ಸಿಗುವುದಿಲ್ಲ.

ವಾಹನ ಸಾಲ ತೆಗೆದು ಸುಸ್ತಿದಾರರಾಗುತ್ತಿರುವ ಓಲಾ ಮತ್ತು ಉಬರ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಬ್ಯಾಂಕ್ ಈ ತೀರ್ಮಾನಕ್ಕೆ ಬಂದಿದೆ. ಎಕಾನಮಿಕ್ ಟೈಮ್ಸ್ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ವಾಹನ ಸಾಲ ಪಡೆದ ಐದು ಜನರಲ್ಲಿ ಒಬ್ಬರು ಚಾಲಕರು ಸುಸ್ತಿದಾರರಾಗಿದ್ದಾರೆ.[ಓಲಾ, ಉಬರ್ ಗೆ ಸಡ್ಡು ಹೊಡೆಯಲು ಬರ್ತಿದೆ 'ಎಚ್.ಡಿ.ಕೆ ಕ್ಯಾಬ್ಸ್'!]

Set back to Ola and Uber, No loans to drivers from SBI

"ಬೆಂಗಳೂರಿನಲ್ಲಿ ಸುಸ್ತಿದಾರರಾದ ಸಾಲ ಮೊತ್ತ 60 ಕೋಟಿ ತಲುಪಿದೆ. ಆದರೆ ಹೈದರಾಬಾದ್ ಮತ್ತು ಚೆನ್ನೈನಲ್ಲಿ ಓಲಾ ವಾಹನಗಳಿಗೆ ಸಾಲ ನೀಡಲಾಗುತ್ತಿದೆ. ಅಲ್ಲಿನ್ನೂ ಸುಸ್ತಿದಾರರ ಸಂಖ್ಯೆ ಶೇಕಡಾ 7 ಅಷ್ಟೇ ಇದೆ," ಎಂದು ಎಸ್.ಬಿ.ಐ ಸಾಲ ವಿಭಾಗದ ಅಧಿಕಾರಿ ಹೇಳಿಕೆ ನೀಡಿದ್ದಾರೆ.

ಚಾಲಕರ ಇನ್ಸೆಂಟಿವ್ ಗಳನ್ನು ಕಂಪೆನಿಗಳು ಕಟ್ ಮಾಡಿದ ನಂತರ ನಗರದ ಚಾಲಕರ ಆದಾಯ ಕುಸಿತವಾಗಿದೆ. ಉಬರ್ ನಿಂದ ಲೀಸಿಗೆ ಪಡೆದಿದ್ದ ಕಾರುಗಳನ್ನು ಹಲವರು ಮರಳಿಸಿದ್ದಾರೆ ಕೂಡಾ. ಇನ್ಸೆಂಟಿವ್ ಗಳನ್ನು ಕಡಿತ ಮಾಡಿದ ನಂತರವೇ ಸುಸ್ತಿದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.[ಓಲಾ ಸಂಸ್ಥೆಯಲ್ಲಿ ರತನ್ ಟಾಟಾ 650 ಕೋಟಿ ರು. ಹೂಡಿಕೆ?]

ಚೆನ್ನೈ, ಬೆಂಗಳೂರು, ಹೈದರಾಬಾದ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಚಾಲಕರು ಸುಸ್ತಿದಾರರಾಗಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಈ ಮೂರೂ ನಗರಗಳಲ್ಲಿ ಅತೀ ಹೆಚ್ಚಿನ ಚಾಲಕರು ಈ ಕಂಪೆನಿಗಳ ಜತೆ ಒಪ್ಪಂಧ ಮಾಡಿಕೊಂಡಿದ್ದಾರೆ.

ಇನ್ನು ಓಲಾದ ಚಾಲಕರು ಉಬರ್ ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸುಸ್ತಿದಾರರಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ದೇಶದಾದ್ಯಂತ 1300 ಉಬರ್ ಚಾಲಕರಿಗೆ ಸಾಲ ನೀಡಲಾಗಿದೆ. ಇವುಗಳ ಮೊತ್ತ 35 ಕೋಟಿ. ಇದರಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಸುಸ್ತಿದಾರರಿದ್ದಾರೆ. ಆದರೆ ಬೆಂಗಳೂರಿನಲ್ಲಿ ಈ ಸಂಖ್ಯೆ ಅಂದಾಜು ಶೇಕಡಾ 20ರಷ್ಟು ತಲುಪಿದೆ.

ಇನ್ನು ಕೆಲವು ಪ್ರಕರಣಗಳಲ್ಲಿ ಚಾಲಕರು ಸಾಲ ಕಟ್ಟದೆಯೂ ಕಾರು ಓಡಿಸುತ್ತಲೇ ಇರುತ್ತಾರೆ. ಇಂತಹ ಚಾಲಕರನ್ನು ಬೆನ್ನಟ್ಟುವುದೂ ಬ್ಯಾಂಕುಗಳಿಗೆ ಕಷ್ಟಕರವಾಗಿದೆ. ಹೀಗಾಗಿ ಬ್ಯಾಂಕುಗಳು ಓಲಾ ಮತ್ತು ಉಬರ್ ಚಾಲಕರಿಗೆ ಸಾಲ ನೀಡುವುದನ್ನು ನಿಲ್ಲಿಸಿವೆ.

English summary
Banks like State Bank of India (SBI) have stopped disbursing fresh vehicle loans to driver plying cars for Ola and Uber in Bengaluru after number of defaulters been rised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X