ಮತ್ತೆ ಬೆಂಗಳೂರಿನ ಮೂರು ಕಡೆ ಸರಗಳ್ಳತನ
ಬೆಂಗಳೂರು, ಮೇ 13 : ಬೆಂಗಳೂರಿನಲ್ಲಿ ಸರಗಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿದರೂ ಸರಗಳ್ಳತನ ಕಡಿಮೆಯಾಗಿಲ್ಲ. ಬುಧವಾರ ಬೆಳಗ್ಗೆ ನಗರದ ಮೂರು ಸ್ಥಳಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಬಸವೇಶ್ವರ ನಗರ, ಸಂಜಯನಗರ ಮತ್ತು ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಸರಣಿ ಸರಗಳ್ಳತನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ 8.45 ನಡುವೆ ಈ ಪ್ರಕರಣಗಳು ನಡೆದಿವೆ. [ಇಂದಿನ ಚಿನ್ನದ ದರ ನೋಡಿ]

ಸಂಜಯನಗರದ ರೇವಾ ಕಾಲೇಜು ಬಳಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ವಾಯುವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯ 200 ಗ್ರಾಂ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ. [ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]
ಪ್ರಕರಣ 2 : ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಪಾರ್ಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ 100 ಗ್ರಾಂ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಸರಗಳ್ಳತನ ನಡೆದ ಬಗ್ಗೆ ಪ್ರಕರಣ ದಾಖಲಾಗಿದೆ.












Click it and Unblock the Notifications