ಸರಣಿ ಲೈಂಗಿಕ ಕಿರುಕುಳ ನೀಡಿದ್ದ ಫುಡ್ ಡಿಲಿವರಿ ಬಾಯ್ ಅರೆಸ್ಟ್

ಬೆಂಗಳೂರು, ಜುಲೈ09:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಕಿಂಗ್ ಮತ್ತು ಸೈಕ್ಲಿಂಕ್‌ ಮಾಡುತ್ತಿದ್ದ ಕೆಲವು ಯುವತಿ/ಮಹಿಳೆಯರ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸದಾಶಿವನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಂಜಾನೆ 6 ರಿಂದ 7 ಸಮಯದಲ್ಲಿ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಯಾಂಕಿ ಕೆರೆ ಸಮೀಪದಲ್ಲಿಇಬ್ಬರು ಯುವತಿ ಸೇರಿದಂತೆ ಸರಣಿಯಾಗಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಗಂಗಾಧರನನ್ನು ಬಂಧಿಸಲಾಗಿದೆ.

ಒಂಟಿ ಮಹಿಳೆಯರೇ ಈತನ ಟಾರ್ಗೇಟ್

ಬೆಳಗಿನ ಜಾವ ವಾಕಿಂಗ್‌ಗೆ ಹೋಗುತ್ತಿದ್ದ ಒಂಟಿ ಯುವತಿಯರು ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದ. ಸೈಕೋ ರೀತಿಯಲ್ಲಿ ಯುವತಿಯರ ಅಂಗಾಗವನ್ನು ಮುಟ್ಟಿ ವಿಕೃತ ಸಂತೋಷವನ್ನು ಪಡುತ್ತಿದ್ದ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ಇದೀಗ ಯುವತಿಯರು ಕೊಟ್ಟ ಸುಳಿವಿನ ಆಧಾರದಲ್ಲಿ ಆರೋಪಿ ಗಂಗಾಧರನನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

Serial Sexual harassment case reported in Bengaluru, Accused Arrested by sadashivanagar police

ಈ ಹಿಂದೆಯೂ ಇಂಥದ್ದೇ ಕೃತ್ಯ

ಗಂಗಾಧರ ಈ ಹಿಂದೆಯು ಯುವತಿಯರಿಗೆ ಲೈಂಗಿಕ ದೌರ್ಜನ್ಯವನ್ನು ನೀಡಿ ಎಸ್ಕೇಪ್ ಆಗಿದ್ದ. ಆದರೆ ಮರ್ಯಾದೆಗೆ ಅಂಜಿ ಈತನ ವಿರುದ್ದ ಯುವತಿಯರು ದೂರನ್ನು ನೀಡಿರಲಿಲ್ಲ. ಇದೇ ಗಂಗಾಧರನಿಗೆ ಮತ್ತೊಮ್ಮೆ ದೌರ್ಜನ್ಯವನ್ನು ಎಸಗಲು ಕಾರಣವಾಗಿದೆ. ಒಬ್ಬಿಬ್ಬರಿಗಲ್ಲ ಒಂಟಿಯಾಗಿ ಸಾಗುತ್ತಿದ್ದ ಹಲವರಿಗೆ ಲೈಂಗಿಕ ದೌರ್ಜನ್ಯವನ್ನು ಗಂಗಾಧರ್ ಎಸಗಿದ್ದಾನೆ.

ಫುಡ್ ಡಿಲಿವರಿ ಬಾಯ್

ಗಂಗಾಧರ್ ಮೂಲತಃ ರಾಯಚೂರು ಜಿಲ್ಲೆಯವನಾಗಿದ್ದು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಫುಡ್ ಡಿಲಿವರಿ ಬಾಯ್ ಆಗಿ ಕೆಲಸವನ್ನು ಮಾಡುತ್ತಿದ್ದ ಗಂಗಾಧರ ಮತ್ತಷ್ಟು ಪೂರ್ವಾಪರವನ್ನು ಪೊಲೀಸರು ಕೆದಕುತ್ತಿದ್ದಾರೆ.

Serial Sexual harassment case reported in Bengaluru, Accused Arrested by sadashivanagar police

ಕೇಂದ್ರ ವಿಭಾಗದ ಡಿಸಿಪಿ ಹೇಳಿದ್ದೇನು

Recommended Video

      Modi ಆಪ್ತ ಗುಂಡೇಟಿಗೆ ಬಲಿಯಾಗಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ಚೀನಾ | *World | OneIndia Kannada

      ಜುಲೈ ಮೂರರಂದು ವಾಕಿಂಗ್‌ಗೆ ತೆರಳಿದ್ದ ಯುವತಿಯರಿಗೆ ಸರಣಿಯಾಗಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಆಸಾಮಿಯನ್ನು ಬಂಧಿಸಲಾಗಿದೆ. ಯುವತಿಯರು ಕೊಟ್ಟ ಮಾಹಿತಿ ಬೈಕ್ ನಂಬರ್ ಬೆನ್ನ ಹತ್ತಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಈ ಹಿಂದೆಯೂ ಇಂಥ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಆದರೆ ಯಾರೂ ದೂರನ್ನು ನೀಡಿರಲಿಲ್ಲ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸಾಗುತ್ತಿದೆ. ಫುಡ್ ಡಿಲಿವರಿ ಎಲ್ಲಿ ಮಾಡುತ್ತಿದ್ದ ಎಂಬುದನ್ನು ಪರಿಶೀಲನೆಯನ್ನು ಮಾಡುತ್ತೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+