ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ:ಆಟೋ ಚಾಲಕ ಸಾವು
ಬೆಂಗಳೂರು, ಜೂನ್ 13: ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಬಸ್, ಆಟೋ, ಕ್ಯಾಂಟರ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಬಸ್ ಮತ್ತು ಕ್ಯಾಂಟರ್ ವಾಹದ ನಡುವೆ ಸಿಲುಕಿದ್ದ ಆಟೋ ಸಂಪೂರ್ಣ ಜಖಂ ಆಗಿದೆ. ಆಟೋದಲ್ಲಿದ್ದ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಲೆೆಗೆೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಾಲಕ ಗಿರಿಸಾಗರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಬೆಳಗ್ಗೆ ಕ್ಯಾಂಟರ್ ನಂಬರ್ KA-53-C-4788 ರ ಚಾಲಕ ತನ್ನ ವಾಹನವನ್ನು, ಮೈಸೂರು ಮುಖ್ಯ ರಸ್ತೆಯಲ್ಲಿ ಹೊಸ ಗುಡ್ಡದಲ್ಲಿ ಜಂಕ್ಷನ್ ಕಡೆಯಿಂದ ಬಾಪೂಜಿನಗರ ಕಡೆಗೆ ಹೋಗುತ್ತಿದ್ದ. ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಯಾಟಲೈಟ್ ಬಸ್ ನಿಲ್ದಾಣದ ಹೊರದ್ವಾರದ ಹತ್ತಿರ ತನ್ನ ಮುಂದೆ ಹೋಗುತ್ತಿದ್ದ ಮಹೇಂದ್ರ ಗೂಡ್ಸ್ ವಾಹನ ನಂ- KA-51-6013 ಗೆ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಮಹೇಂದ್ರ ಗೂಡ್ಸ್ ವಾಹನದ ಮುಂದೆ ಹೋಗುತ್ತಿದ್ದ ಪ್ಯಾಸೆಂಜರ್ ಆಟೋ ನಂಬರ್ KA-03AF-9455 ಹಾಗೂ BMTC ಒಲ್ವೋ ಬಸ್ KA-57-F-1745 ಗೆ ಡಿಕ್ಕಿಯಾಗಿ ಪ್ಯಾಸೆಂಜರ್ ಆಟೋ ಒಲ್ವೋ ಬಸ್ ಮತ್ತು ಗೂಡ್ಸ್ ವಾಹನದ ಮದ್ಯ ಸಿಲುಕಿಕೊಂಡಿತ್ತು.
ಆಟೋ ಚಾಲಕ ಗಿರಿಸಾಗರ್ ಸಾವು
ಆಟೋ ಚಾಲಕನಾದ ಗಿರಿಸಾಗರ್ (34) ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ತೀರ್ವ ಸ್ವರೂಪದ ರಕ್ತಗಾಯ ಗಾಯವಾಗಿತ್ತು. ಗಾಯಾಳುವನ್ನು ಚಿಕಿತ್ಸೆಗಾಗಿ ಹತ್ತಿರದ ಪಿನಾಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಗಾಯಾಳುವು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಪಘಾತ ಮಾಡಿದ ಕ್ಯಾಂಟರ್ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು ಈ ಬಗ್ಗೆ ಠಾಣಾ ಮೊ ಸಂಖ್ಯೆ .99/2022 ಕಲಂ 279,304 (A)IPC 134(A&B) IMV act ರೀತ್ಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.

ಅಪಘಾತದಿಂದ ತೀವ್ರ ಟ್ರಾಫಿಕ್ ಜಾಮ್
Recommended Video
ನಾಲ್ಕು ವಾಹನಗಳ ನಡುವೆ ನಡೆದ ಭೀಕರ ಅಪಘಾತದಿಂದಾಗಿ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿಯಲ್ಲಿ ಸಾಕಷ್ಟು ಸಂಚಾರದ್ಟಣೆ ಉಂಟಾಗಿತ್ತು. ಬ್ಯಾಟರಾಯನಪುರ ಸಂಚಾರಿ ಪೊಲೀಸರು ವಾಹನಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಕ್ಯಾಂಟರ್ ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಆಟೋ ಚಾಲಕನ ಅಮೂಲ್ಯ ಜೀವ ಹೋಗಿರುವುದು ದುರಂತದ ಸಂಗತಿ.












Click it and Unblock the Notifications