BBMP: ರಜೆ ಹಾಕಿದ ಮಹಿಳೆಗೆ HIV ಬಂದಿದ್ಯಾ, ದಂಧೆ ನಡೆಸ್ತಿದಿಯಾ? ಎಂದ ಬಿಬಿಎಂಪಿ ಅಧಿಕಾರಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ( ಬಿಬಿಎಂಪಿ) ಕರ್ಮಕಾಂಡವೊಂದು ಬಯಲಿಗೆ ಬಂದಿದೆ. ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬ ಮಹಿಳೆ ಮನಬಂದಂತೆ ನಿಂದಿಸಿರುವ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿ ರಜೆ ಮಾಡಿದ ವಿಚಾರಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ದೂರು ಕೂಡ ನೀಡಿದ್ದಾರೆ. ಬಿಬಿಎಂಪಿ ಸಹಾಯಕ ಆಯುಕ್ತ ಶ್ರೀನಿವಾಸ ಮೂರ್ತಿ ಮೇಲೆ ಈ ಆರೋಪ ಕೇಳಿಬಂದಿದ್ದು, ತನಗೆ ಏನೆಲ್ಲ ಅಂದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಸಿಬ್ಬಂದಿಯು ಐದು ದಿನ ರಜೆ ಹಾಕಿದ್ದಕ್ಕೆ ಸಿಟ್ಟಾಗಿ ಹಿರಿಯ ಅಧಿಕಾರಿ ಬಾಯಿಗೆ ಬಂದಂತೆ ನಿಂದಿಸಿದ್ದಾನೆ ಎನ್ನಲಾಗಿದೆ. ನೀನೇನು ದಂಧೆ ನಡೆಸುತ್ತಿದ್ದೀಯಾ? ಅದಕ್ಕೆ ಇಷ್ಟು ರಜೆ ತಗೊಂಡಾ? ನಿನಗೆ ಎಚ್‌ಐವಿ ಬಂದಿದ್ಯಾ? ಅಥವಾ ನಿನ್ನನ್ನ ಯಾರಾದ್ರೂ ಅತ್ಯಾಚಾರ ಮಾಡಿ ಬಿಸಾಕಿದ್ರಾ? ನಿಂಗೆ ಪಾಸಿಟಿವ್‌ ಇದ್ಯಾ? ಟೆಸ್ಟ್‌ ಮಾಡಿಸಿಕೊಂಡ್ಯಾ? ಎಂದೆಲ್ಲ ದರ್ಪದಿಂದ ನಿಂದಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ನೋವು ತೋಡಿಕೊಂಡಿದ್ದಾರೆ.

Senior BBMP Officer Accused Of Misbehaving With Female Staff Over Leave

ಬಿಬಿಎಂಪಿ ಕಚೇರಿಯಲ್ಲಿ ಉನ್ನತ ಅಧಿಕಾರಿಯೊಬ್ಬ ಈ ರೀತಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ನೊಂದ ಮಹಿಳೆ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ರಜೆ ಹಾಕಿದ ವಿಚಾರವನ್ನು ಒಬ್ಬ ಮಹಿಳೆಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಶ್ರೀನಿವಾಸ ಮೂರ್ತಿ ಇದೇ ರೀತಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಅವರ ಕೊಠಡಿಗೆ ಕರೆಸಿಕೊಂಡು ಲೈಂಗಿಕವಾಗಿ ನಿಂದಿಸುತ್ತಾರೆ. ಅಲ್ಲದೆ ಈ ಬಗ್ಗೆ ಆಯುಕ್ತರ ಗಮನಕ್ಕೆ ತಂದರೆ ನಮ್ಮ ಕೆಲಸಕ್ಕೆ ಕುತ್ತು ತರುವುದಾಗಿ ಎಚ್ಚರಿಕೆ ಕೊಡ್ತಾರೆ.

ಕಚೇರಿಯಲ್ಲಿ ಪ್ರತಿನಿತ್ಯವೂ ಮಹಿಳಾ ಸಿಬ್ಬಂದಿಯನ್ನು ತಮ್ಮ ಕೊಠಡಿಗೆ ಪದೇ ಪದೇ ಕರೆಸಿಕೊಳ್ಳುತ್ತಾರೆ. ಬೇಡದ ವಿಚಾರಗಳನ್ನು ಪ್ರಸ್ತಾಪಿಸಿ ನಿಂದನೆ ಮಾಡುತ್ತಾರೆ. ಕೆಲಸಕ್ಕೆ ಅಡ್ಡಿ ಮಾಡುತ್ತಾರೆ, ಅಲ್ಲದೆ ಜೋರು ಧ್ವನಿಯಲ್ಲಿ ಕೆಟ್ಟ ಪದಗಳಿಂದ ಬೈಯುತ್ತಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿಂದೆಯೂ ಈತನ ಕಿರುಕುಳಕ್ಕೆ ಬೇಸತ್ತು ಬಿಬಿಎಂಪಿ ನೌಕರರ ಸಂಘ ಈತನಿಗೆ ವಾರ್ನಿಂಗ್‌ ಕೂಡ ಕೊಟ್ಟಿತ್ತು ಎನ್ನಲಾಗಿದೆ. ಆದರೂ ಈತ ತನ್ನ ಆಟ ಮುಂದುವರಿಸಿದ್ದ. ಕೊನೆಗೆ ಕಿರುಕುಳದಿಂದ ಬೇಸತ್ತು ಸಿಬ್ಬಂದಿ ಇದೀಗ ಪಾಲಿಕೆ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ.

Senior BBMP Officer Accused Of Misbehaving With Female Staff Over Leave

ಈತನ ಕಿರುಕುಳದಿಂದ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದಿದ್ದಾರೆ. ಸಾರ್ವಜನಿಕರ ಮುಂದೆಯೇ ಈತ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಈ ಬಗ್ಗೆ ಶ್ರೀನಿವಾಸಮೂರ್ತಿ ಬಗ್ಗೆ ಹಲವು ಬಾರಿ ದೂರು ಕೊಟ್ಟರೂ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಈತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಆಯುಕ್ತರಿಗೆ ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲೇ ಈ ಆರೋಪ ಕೇಳಿಬಂದಿರುವುದು ಮಹಿಳೆಯರನ್ನು ಬೆಚ್ಚಿಬೀಳಿಸಿದೆ. ಕೆಲಸ ಮಾಡುವ ಸ್ಥಳದಲ್ಲೇ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಇಂತಹವರು ಬಿಬಿಎಂಪಿಯಲ್ಲಿ ಹೇಗಿದ್ದಾರೆ? ಎಂದು ಆಕ್ರೋಶ ಹೊರಹಾಕಿದ್ದಾರೆ. ಮಹಿಳಾ ಆಯೋಗ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆತ ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+