Semicon India 2023: ಬೆಂಗಳೂರಿನಲ್ಲಿ 5 ವರ್ಷದಲ್ಲಿ $ 400 ಮಿಲಿಯನ್ ಹೂಡಿಕೆ: 3000 ಇಂಜಿನಿಯರ್‌ಗಳ ನೇಮಕ
ಪ್ರಮುಖ ಟೆಕ್ ಕಂಪನಿಯಾದ ಎಎಂಡಿ ಬೆಂಗಳೂರಿನಲ್ಲಿ $ 400 ಮಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಮುಂದಿನ 5 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೂಡಿಕೆ ಜೊತೆಗೆ 3000 ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳುವುದಾಗಿ ಸೆಮಿಕಾನ್ ಇಂಡಿಯಾ 2023ರಲ್ಲಿ ಘೋಷಿಸಿದೆ.
"ಎಎಮ್‌ಡಿ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಸರಿಸುಮಾರು $400 ಮಿಲಿಯನ್ ಹೂಡಿಕೆ ಮಾಡಲಿದೆ. ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಆರ್ & ಡಿ ಕೇಂದ್ರವನ್ನು ಸ್ಥಾಪಿಸಲಿದೆ, ಇದು ಈ 2023ರ ಅಂತ್ಯದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. 2028 ಅಂತ್ಯದ ವೇಳೆಗೆ 300 ಹೆಚ್ಚುವರಿ ಎಂಜಿನಿಯರ್‌ಗಳನ್ನು ನೇಮಕ ಮಾಡುವ ನಿರೀಕ್ಷೆಯಿದೆ," ಎಂದು ಎಎಮ್‌ಡಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಮಾರ್ಕ್ ಪೇಪರ್‌ಮಾಸ್ಟರ್ ಹೇಳಿದರು.

ಭಾರತದಲ್ಲಿ ಎಎಂಡಿಯ ಕಾರ್ಯಾಚರಣೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ವಿಸ್ತರಿಸಿದೆ, 2001 ರಲ್ಲಿ ಕೆಲವೇ ಉದ್ಯೋಗಿಗಳಿಂದ ಪ್ರಾರಂಭದ ಕಂಪನಿ ಪ್ರಸ್ತುತ 6,500 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಎಂದು ಮಾರ್ಕ್ ಪೇಪರ್‌ಮಾಸ್ಟರ್ ಹೇಳಿದರು. ಸ್ಥಳೀಯ ನಾಯಕರು ಹಾಕಿಕೊಟ್ಟ ಭದ್ರ ಬುನಾದಿ ಮತ್ತು ದೇಶದಲ್ಲಿ ಲಭ್ಯವಿರುವ ವೃತ್ತಿಪರರು ಕಾರಣ ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆ, ನೆಟ್‌ವರ್ಕಿಂಗ್ ಮತ್ತು 6G ಸಂವಹನಗಳಲ್ಲಿನ ಉತ್ಪನ್ನಗಳನ್ನು ಉತ್ಪಾದನೆ ಮಾಡುವ ಮೂಲಕ ಬೆಳವಣಿಗೆ ಹೊಂದಿದೆ. ಪ್ರಪಂಚಾದ್ಯಂತ ಇರುವ ಎಎಂಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಭಾರತದ ತಂಡಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಎಎಂಡಿ ಸಿಟಿಒ ಹೇಳಿದ್ದಾರೆ.
"ಬೆಂಗಳೂರಿನಲ್ಲಿ ಮತ್ತಷ್ಟು ಹೂಡಿಕೆ ಮಾಡುವ ಮೂಲಕ ಮತ್ತು ಉದ್ದಿಮೆಯನ್ನು ವಿಸ್ತರಿಸುವ ಮೂಲಕ, ಭಾರತ ಸೆಮಿಕಂಡಕ್ಟರ್ ಮಿಷನ್ ಅನ್ನು ಬೆಂಬಲಿಸಲು ಭಾರತದಲ್ಲಿ ಹೊಸ ತಂತ್ರಜ್ಞಾನ ವಿಸ್ತರಿಸಲು" ನಿರ್ಧರಿಸಲಾಗಿದೆ ಎಂದು ಹೇಳಿದರು.
ಎಎಮ್‌ಡಿ, ಮೈಕ್ರಾನ್, ಕ್ಯಾಡೆನ್ಸ್, ಲ್ಯಾಮ್ ಮತ್ತು ಇತರ ಅನೇಕ ಉದ್ಯಮಗಳು ಗುಜರಾತ್‌ನ ಗಾಂಧಿನಗರದಲ್ಲಿ ವಾರ್ಷಿಕ ಸೆಮಿಕಂಡಕ್ಟರ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದಾರೆ, ಪಿಎಂ ಮೋದಿ ಈ ಕಾರ್ಯಕ್ರಮದ ಉಪಸ್ಥಿತಿ ವಹಿಸಿದ್ದಾರೆ.
ಅಶ್ವಿನ್ ವೈಷ್ಣವ್ ಹೇಳಿದ್ದೇನು
"ಸೆಮಿಕಂಡಕ್ಟರ್ ಒಂದು ಮಾತೃ ಉದ್ಯಮದಂತಿದೆ. ಈ ಉದ್ಯಮಕ್ಕೆ ಹೂಡಿಕೆ ಮಾಡಿದರೆ ಮಾಡಿದರೆ, ನೀವು ಹಲವಾರು ವಲಯಗಳು ಅಭಿವೃದ್ದಿ ಹೊಂದುತ್ತವೆ. ಫಾರ್ಮ್ ಟ್ರ್ಯಾಕ್ಟರ್‌ಗಳಿಂದ ಮೊಬೈಲ್ ಫೋನ್‌ಗಳಿಗೆ, ಕಾರ್‌ಗಳಿಂದ ಫ್ರಿಜ್‌ಗಳವರೆಗೆ ಸೆಮಿಕಂಡಕ್ಟರ್‌ಗಳ ಅಗತ್ಯವಿದೆ" ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸೆಮಿಕಾನ್ ಇಂಡಿಯಾ 2023 ದಲ್ಲಿ ಹೇಳಿದರು.
"ಎಎಮ್‌ಡಿ ತನ್ನ ಅತಿದೊಡ್ಡ ಆರ್ & ಡಿ ಕೇಂದ್ರವನ್ನು ಸ್ಥಾಪಿಸಲು ಮತ್ತು ಭಾರತ-ಎಎಮ್‌ಡಿ ಪಾಲುದಾರಿಕೆಯ ವಿಸ್ತರಣೆಯನ್ನು ನಾನು ಸ್ವಾಗತಿಸುತ್ತೇನೆ. ಇದು ವಿಶ್ವ ದರ್ಜೆಯ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ನುರಿತ ಸೆಮಿಕಂಡಕ್ಟರ್ ಇಂಜಿನಿಯರ್‌ಗಳು ಮತ್ತು ಸಂಶೋಧಕರು ಮತ್ತು ಭಾರತವು ಜಾಗತಿಕ ಪ್ರತಿಭೆಗಳ ಕೇಂದ್ರವಾಗಬೇಕೆಂಬ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ವೇಗಗೊಳಿಸುತ್ತದೆ" ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
$10 ಬಿಲಿಯನ್ ಸಬ್ಸಿಡಿ ಕಾರ್ಯಕ್ರಮದೊಂದಿಗೆ ದೇಶದಲ್ಲಿ ಚಿಪ್ ಫ್ಯಾಬ್ರಿಕೇಶನ್ ಮತ್ತು ಜೋಡಣೆ ಸ್ಥಾವರಗಳನ್ನು ಸ್ಥಾಪಿಸಲು ಭಾರತವು ಪ್ರಮುಖ ಸೆಮಿಕಂಡಕ್ಟರ್ ಉತ್ಪಾದಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿರುವಾಗ ಸೆಮಿಕಾನ್ ಇಂಡಿಯಾ ರೋಡ್‌ಶೋ ಆಯೋಜಿಸಿದೆ.












Click it and Unblock the Notifications