ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ನಾಯಕರ ಬಗ್ಗೆ ಸ್ವಾಮೀಜಿಗಳ ಸಮರ್ಥನೆ ಬೇಡ: ಕೆ.ಎಸ್.ಈಶ್ವರಪ್ಪ

By Manjunatha
|
Google Oneindia Kannada News

Recommended Video

ಜಾತಿ ರಾಜಕಾರಣದ ಬಗ್ಗೆ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ | Oneindia Kannada

ಬೆಂಗಳೂರು, ಜುಲೈ ೦3: ಜಾತಿ ರಾಜಕಾರಣ ಮಾಡುವ ಮಠಗಳು ಹಾಗೂ ರಾಜಕಾರಣಿಗಳು ಸಮಾಜದ ವಿಕಸನಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ಅಪರೇಷನ್ ಕಮಲ ಮಾಡಲ್ಲ: ಶೋಭಾ ಕರಂದ್ಲಾಜೆಬಿಜೆಪಿ ಅಪರೇಷನ್ ಕಮಲ ಮಾಡಲ್ಲ: ಶೋಭಾ ಕರಂದ್ಲಾಜೆ

ಕಾಗಿನೆಲೆ ಸ್ವಾಮೀಜಿ ಸಿದ್ದರಾಮಯ್ಯ ಪರವಾಗಿ ಹಾಗೂ ಒಕ್ಕಲಿಗರ ಸ್ವಾಮೀಜಿ ಕುಮಾರಸ್ವಾಮಿ ಪರವಾಗಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ನಾವು ಮುಂದಿನ ಪೀಳಿಗೆಗೆ ಯಾವ ಸಂದೇಶ ನೀಡುತ್ತಿz್ದÉೀವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Seers talking about caste politics is dangerous sign: Eshwarappa

ರಾಜ್ಯದ ಇತಿಹಾಸದಲ್ಲಿಯೇ ಸ್ವಾಮೀಜಿಗಳು ಈ ರೀತಿ ರಾಜಕೀಯ ನಾಯಕರನ್ನು ಸಮರ್ಥಿಸಿಕೊಂಡು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲು . ರಾಜಕೀಯ ಕೇಂದ್ರಗಳಾಗಿರುವ ಮಠಗಳು ಮತ್ತು ಜಾತಿ ರಾಜಕಾರಣ ಮಾಡುವ ರಾಜಕಾರಣಿಗಳಿಗೆ ಜನರೇತಕ್ಕ ಪಾಠ ಕಲಿಸಬೇಕೆಂದು ಅವರು ಆಗ್ರಹಿಸಿದರು.

ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಭಾಷೆಯ ಮೇಲೆ ಹಿಡಿತವಿಲ್ಲದಂತಾಗಿದೆ. ಒಬ್ಬರು ಮತ್ತೊಬ್ಬರ ಚಾರಿತ್ರವಧೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ವಿಧಾನಪರಿಷತ್ತಿನ ಸಭಾನಾಯಕಿಯಾಗಿ ಆಯ್ಕೆಯಾಗಿರುವ ಸಹೋದರಿ ಡಾ.ಜಯಮಾಲಾರನ್ನು ಅವರ ಪಕ್ಷದ ಶಾಸಕಿಯೇ ಸೇವೆ'ಯಿಂದ ಇಂತಹ ಹುದ್ದೆ ಪಡೆದಿದ್ದಾರೆ ಎಂದು ಹಿಯಾಳಿಸಿರುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದರು.

ಬಂಡಾಯ ಶಾಸಕರಿಗೆ ಗಾಳ, ಕಾಶ್ಮೀರದಲ್ಲಿ ಸೆಪ್ಟೆಂಬರ್ ಗೆ ಬಿಜೆಪಿ ಸರಕಾರ?ಬಂಡಾಯ ಶಾಸಕರಿಗೆ ಗಾಳ, ಕಾಶ್ಮೀರದಲ್ಲಿ ಸೆಪ್ಟೆಂಬರ್ ಗೆ ಬಿಜೆಪಿ ಸರಕಾರ?

ಸಚಿವ ಝಮೀರ್‍ಅಹ್ಮದ್‍ಖಾನ್ ಹಾಗೂ ಮಾಜಿ ಸಚಿವ ತನ್ವೀರ್‍ಸೇಠ್ ನಡುವಿನ ವಾಕ್ಸಮರ ಕುರಿತು ಪ್ರಸ್ತಾಪಿಸಿದ ಈಶ್ವರಪ್ಪ, ನನ್ನ ಕ್ಷೇತ್ರಕ್ಕೆ ನೀನು ಬಾ, ನಿನ್ನ ಕ್ಷೇತ್ರಕೆಕ ನಾನು ಬರುತ್ತೇನೆ. ಯಾರ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದನ್ನು ನೋಡೋಣ ಎಂದು ಸವಾಲು ಹಾಕಲಾಗುತ್ತಿದೆ. ಇದೇನು ಅಖಾಡವೇ ? ಒಬ್ಬರು ಸಚಿವರು, ಇನ್ನೊಬ್ಬರು ಸಚಿವರಾಗಿದ್ದವರು. ಸಾರ್ವಜನಿಕ ಜೀವನದಲ್ಲಿ ಹೇಗೆ ಇರಬೇಕು ಎಂಬುದು ಗೊತ್ತಿಲ್ಲವೆ ಎಂದು ದೂರಿದರು.

ಹೀಗೆ ಬಹಿರಂಗವಾಗಿ ಕಚ್ಚಾಡಿಕೊಂಡರೆ ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡಿದಂತಾಗುತ್ತದೆ. ಇಂತಹ ಸುದ್ದಿಗಳನ್ನು ಶಾಲಾ ಮಕ್ಕಳು ಪತ್ರಿಕೆಗಳಲ್ಲಿ ಓದಿದರೆ ಅವರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಈಶ್ವರಪ್ಪ ಹೇಳಿದರು.

English summary
BJP MLA eshwarappa said Seers openly talking about caste and politics is dangerous to society. They dividing the society by caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X