ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಯಲ್ಲಿ ಕಿಕಿ ಡ್ಯಾನ್ಸ್‌ ಮಾಡೋರಿಗೆ ಖಾಕಿ ಹೇಳಿದ್ದೇನು?

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್‌ 2: ಕಿಕಿ ಡ್ಯಾನ್ಸ್ ಚಾಲೆಂಜ್‌ ಎಂಬ ಹೊಸ ಸಮಸ್ಯೆಯ ವಿರುದ್ಧ ಸಿಡಿದೆದ್ದಿರುವ ಬೆಂಗಳೂರು ಪೊಲೀಸರು ಇಂತಹ ಚಟುವಟಿಕೆಗಳಲ್ಲಿ ತೊಡಗಿದರೆ ಕಂಬಿ ಎಣಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಈ ಕುರಿತು ಬೆಂಗಳೂರು ಪೊಲೀಸರು ಟ್ವಿಟರ್ ನಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದು, "ಕೀಕಿ ಡ್ಯಾನ್ಸ್ ರೋಡಲ್ಲಿ, ಖಾಕಿ ಡ್ಯಾನ್ಸ್ ಜೈಲಲ್ಲಿ" ಎಂಬ ಹ್ಯಾಶ್ ಟ್ಯಾಗ್ ಮೂಲಕ ಜಾಗೃತಿ ಆರಂಭಿಸಿದ್ದಾರೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯುವಸಮೂಹವನ್ನು ಹುಚ್ಚೆಬ್ಬಿಸುತ್ತಿರುವ ಕೀಕಿ ಡ್ಯಾನ್ಸ್‌ನ ಕಿಕ್‌ ಇಳಿಸಲು ಪೊಲೀಸರು ಮುಂದಾಗಿದ್ದಾರೆ.

ಕೀ-ಕೀ ಡ್ಯಾನ್ಸ್‌ ಚಾಲೆಂಜ್‌ ಸ್ವೀಕರಿಸಿದರೆ ತಕ್ಕ ಶಾಸ್ತಿ ಸರ್ಕಾರ ಎಚ್ಚರಿಕೆ ಕೀ-ಕೀ ಡ್ಯಾನ್ಸ್‌ ಚಾಲೆಂಜ್‌ ಸ್ವೀಕರಿಸಿದರೆ ತಕ್ಕ ಶಾಸ್ತಿ ಸರ್ಕಾರ ಎಚ್ಚರಿಕೆ

ಕೀಕಿ ಚಾಲೆಂಜ್‌ನಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ. ಇಂತಹ ಘಟನೆಗಳು ಸಾರ್ವಜನಿಕರವಾಗಿ ಕಂಡುಬಂದಲ್ಲಿ 100ಗೆ ಅಥವಾ ಪೊಲೀಶ್‌ ಠಾಣೆಗೆ ಕರೆ ಮಾಡಿ ತಿಳಿಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಫೇಸ್‌ಬುಕ್‌, ಟ್ವಿಟ್ಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಕೀಕಿ ನೃತ್ಯ ವೈರಲ್‌ ಆಗಿತ್ತು. ಚಲನಚಿತ್ರ ನಟ-ನಟಿಯರು ಸೇರಿದಂತೆ ಗಾಯಕರು, ಸೆಲೆಬ್ರಿಟಿಗಳು ಈ ಸವಾಲನ್ನು ಸ್ವೀಕರಿಸಿ ಯುವ ಸಮೂಹವನ್ನು ಹುಚ್ಚೆಬ್ಬಿಸಿದ್ದಾರೆ. ಈ ಸವಾಲು ಸ್ವೀಕರಿಸಿ ಚಲಿಸುವ ಕಾರಿನಿಂದ ಇಳಿದು ಕುಣಿಯಲು ಹೋಗಿ ಅಪಾಯ ತಂದುಕೊಂಡಿರುವ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೀಕಿ ನೃತ್ಯ ಮಾಡಿದರೆ ಜೋಕೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಗ್‌ಬಾಸ್‌ ನಿವೇದಿತಾ ಗೌಡ ವಿರುದ್ಧ ದೂರು

ಬಿಗ್‌ಬಾಸ್‌ ನಿವೇದಿತಾ ಗೌಡ ವಿರುದ್ಧ ದೂರು

ಕೀಕಿ ಡ್ಯಾನ್ಸ್‌ ಸವಾಲು ಸ್ವೀಕರಿಸಿ ವಿವಾದಕ್ಕೀಡಾಗಿರುವ ಬಿಗ್‌ಬಾಸ್‌ ಖ್ಯಾತಿಯಾ ನಿವೇದಿತಾ ಗೌಡ ವಿರುದ್ಧ ಹಲಸೂರು ಗೇಟ್‌ ಸಂಚಾರ ಠಾಣೆಯಲ್ಲಿ ಕನ್ನಡ ಪರ ಸಂಘಟನೆ ಬುಧವಾರ ದೂರು ನೀಡಿದೆ. ನಿವೇದಿತಾ ಅವರನ್ನು ಅನುಸರಿಸುವ ಜನರಿದ್ದಾರೆ. ಹೀಗಿರುವಾಗ ಕೀಕಿ ಡ್ಯಾನ್ಸ್‌ ಎಂಬ ಅಪಾಯಕಾರಿ ಸವಾಲು ಸ್ವೀಕರಿಸಿ ಅದರ ವೀಡಿಯೋವನ್ನು ನಿವೇದಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಕೆಲವರಿಗೆ ಪ್ರಾಣಹಾನಿ ಸಂಭವಿಸಬಹುದಾದ ನೇತೃತ್ವದಲ್ಲಿ ಪಾಲ್ಗೊಳ್ಳುವಂತೆ ಪ್ರಚೋದಿಸಿದ್ದಾರೆ ಎಂದು ದೂರಲಾಗಿದೆ.

ನೀವೇದಿತಾ ಬಳಿಕ ನಟಿ ಪ್ರಣಿತಾ ಕೀಕಿ ಡ್ಯಾನ್ಸ್‌

ನೀವೇದಿತಾ ಬಳಿಕ ನಟಿ ಪ್ರಣಿತಾ ಕೀಕಿ ಡ್ಯಾನ್ಸ್‌

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಕೀಕಿ ಡ್ಯಾನ್ಸ್‌ ಮಾಡಿ ವಿವಾದಕ್ಕೆ ಸಿಲುಕಿರುವಾಗಲೇ ನಟಿ ಪ್ರಣಿತಾ ಸುಭಾಷ್‌ ಕೂಡ ಚಲಿಸುವ ಕಾರಿನಿಂದ ಇಳಿದು ಕೀಕಿ ಡ್ಯಾನ್ಸ್‌ ಮಾಡಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಅವರ ಡ್ಯಾನ್ಸ್‌ನ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಅವರ ಡ್ಯಾನ್ಸ್‌ನ ವಿಡಿಯೋ ಟ್ವೀಟರ್‌ನಲ್ಲಿ ಅಪ್‌ಲೋಡ್‌ ಆಗಿದೆ.

ಕೀಕಿ ಡ್ಯಾನ್ಸ್‌ ಸ್ವೀಕರಿಸಿದರೆ ತಕ್ಕ ಶಾಸ್ತಿ, ಪರಮೇಶ್ವರ ಎಚ್ಚರಿಕೆ

ದೇಶಾದ್ಯಂತ ಯುವ ಜನಾಂಗದಲ್ಲಿ ಹುಚ್ಚೆಬ್ಬಿಸಿರುವ ಕೀ-ಕೀ ಡ್ಯಾನ್ಸ್‌ ನಿಗ್ರಹಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿದ್ದಂತೆಯೇ ರಾಜ್ಯದಲ್ಲೂ ಕೀಕೀ ಡ್ಯಾನ್ಸ್‌ ತಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ ಈ ಕುರಿತು ಬುಧವಾರ ತಮ್ಮ ಟ್ವಿಟ್ಟರ್‌ನಲ್ಲಿ ಸಂದೇಶ ಒಂದನ್ನು ನೀಡಿದ್ದು ರಾಜ್ಯದಲ್ಲಿ ಯುವಕರು ಕೀಕೀ ಡ್ಯಾನ್ಸ್‌ ಚಾಲೆಂಜ್‌ನ ಕುಮ್ಮಕ್ಕಿಗೆ ಓಗೊಡುತ್ತಿದ್ದಾರೆ ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತದೆ ಆದ್ದರಿಂದ ಯುವಜನಾಂಗವು ಇಂತಹ ಕೃತ್ಯಗಳಿಗೆ ಬಲಿಯಾದಂತೆ ಪಾಲಕರು ಗಮನ ಹರಿಸಬೇಕೆಂದು ತಮ್ಮ ಟ್ವಿಟ್ಟರ್‌ನಲ್ಲಿ ಕೋರಿದ್ದಾರೆ.

ಕೀಕಿ ಚಾಲೆಂಜ್‌ಗೆ ಮುಂದಾದರೆ ಕಠಿಣ ಕ್ರಮ

ಕೀಕಿ ಚಾಲೆಂಜ್‌ಗೆ ಮುಂದಾದರೆ ಕಠಿಣ ಕ್ರಮ

ಕೀಕಿ ಚಾಲೆಂಜ್‌ ಸ್ವೀಕರಿಸದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಇದು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವಂತಹ ಚಾಲೆಂಜ್‌ ಆಗಿದೆ, ಯಾರಾದರೂ ಇಂತಹ ಚಾಲೆಂಜ್‌ ಸ್ವೀಕರಿಸಿರುವುದು ಕಂಡು ಬಂದರೆ ತಕ್ಷಣ 100ಗೆ ಕಾಲ್‌ ಮಾಡಿ ಎಂದು ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

English summary
Bengasluru police have warned Kiki dance challenge game participants will face serious legal action and will be sent behind the bar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X