ಸಾಕು ನಾಯಿ 'ಕೂಪರ್' ಹುಡುಕಿಕೊಟ್ಟ ಸೆಕ್ಯುರಿಟಿ ಗಾರ್ಡ್ ಗೆ ಬಹುಮಾನ‌!

ಬೆಂಗಳೂರು, ಅಕ್ಟೋಬರ್ 27: ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿದ್ದಾಗ ಕಾವಲು ಸಿಬ್ಬಂದಿ ಕೊಠಡಿಯಿಂದ ಸಾಕು ನಾಯಿ ನಾಪತ್ತೆಯಾಗಿ ಸುದ್ದಿಯಾಗಿತ್ತು. ಕೊನೆಗೂ ನಾಯಿ ಕೂಪರ್ ಸೆಂಚ್ಯುರಿ ಕ್ಲಬ್‌ನ ಕಾವಲುಗಾರನಿಗೆ ಸಿಕ್ಕಿದೆ.

ಮಾಲೀಕರು ತಾವು ಘೋಷಿಸಿದಂತೆ ಸಿಬ್ಬಂದಿ ಮುರುಗನ್‌ಗೆ 20 ಸಾವಿರ ರೂ ಮಹುಮಾನ ನೀಡಿದ್ದಾರೆ. ಅ.20ರಂದು ರಾತ್ರಿ ಬಸವನಗುಡಿಯನ ನಿವಾಸಿ ವಾಸುದೇವ್ ಎನ್ನುವವರು ಕುಟುಂಬದ ಜತೆಗೆ ಇಂಡಿಯನ್‌ ಎಕ್ಸ್‌ಪ್ರೆಸ್ ಕಟ್ಟಡದಲ್ಲಿರುವ ಒನ್‌ ಕ್ಯೂ ಒನ್ ರೆಸ್ಟೋರೆಂಟ್‌ಗೆ ತೆರಳಿದ್ದರು.

Security guard find out pet and gets Rs20K reward

ಈ ವೇಳೆ ಅವರು ತಮ್ಮ ಕುಟುಂಬದ ಸದಸ್ಯನೇ ಆಗಿದ್ದ ಕೂಪರ್ ನಾಯಿಯನ್ನು ಕರೆದುಕೊಂಡು ಹೋಗಿದ್ದರು. ನಿಯಮದ ಪ್ರಕಾರ ರೆಸ್ಟೋರೆಂಟ್ ಒಳಗೆ ನಾಯಿಯನ್ನು ಕರೆದೊಯ್ಯುವಂತಿಲ್ಲ, ಹಾಗಾಗಿ ಕಾವಲುಗಾರ ಕೋಣೆಯೊಳಗೆ ಕಟ್ಟಿಹಾಕಿ ಊಟಕ್ಕೆ ತೆರಳಿದ್ದರು ಆದರೆ ಊಟಮಾಡಿ ಹೊರಗೆ ಬರುವಷ್ಟರ ಒಳಗೆ ನಾಯಿ ಅಲ್ಲಿರಲಿಲ್ಲ, ಸಿಬ್ಬಂದಿಯನ್ನು ಕರೆದು ವಿಚಾರಿಸಿದಾಗ ತಮಗೆ ತಿಳಿದಿಲ್ಲ ಎಂದಿದ್ದಾರೆ, ಆತಂಕಗೊಂಡ ಮಾಲಿಕರು ಕೂಪರ್ ಹುಡುಕೊಟ್ಟವರಿಗೆ 20 ಸಾವಿರ ರೂ ಬಹುಮಾನ ಘೋಷಿಸಿದ್ದರು. ಇದೀಗ ಐದು ದಿನಗಳ ನಂತರ ನಾಯಿ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+