Second Airport: ಕಾವೇರಿ, ಮೇಕೆದಾಟು ಆಯ್ತು ಇದೀಗ ಏರ್‌ಪೋರ್ಟ್ ಖ್ಯಾತೆ: ಬೊಮ್ಮಾಯಿ ಆಕ್ಷೇಪ
ನವದೆಹಲಿ, ಜುಲೈ 04: ಬೆಂಗಳೂರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ ವರ್ಷದಿಂದ ವಷಕ್ಕೆ ಪ್ರಯಾಣಿಕ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ. ಇದೇ ವೇಳೆ ಬೆಂಗಳೂರಿನ ಸಮೀಪವೇ ಹೊಸ ವಿಮಾನ ನಿಲ್ದಾಣ ಮಾಡುವುದಾಗಿ ತಿಳಿಸಿದ ತಮಿಳುನಾಡು ಸರ್ಕಾರದ ನಿರ್ಧಾರ ಎರಡು ರಾಜ್ಯಗಳ ಮಧ್ಯೆ ಬಿರುಕಾಸು ಮೂಡಲು ಕಾರಣವಾಗಿದೆ.
ಕಾವೇರಿ ನೀರು ಹರಿಸುವುದು, ಮೇಕೆದಾಟು ಯೋಜನೆ ವಿಚಾರವಾಗಿ ಖ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ ಇದೀಗ ಬೆಂಗಳೂರಿನಿಂದ 40 ಕಿಲೋ ಮೀಟರ್ ದೂರದಲ್ಲಿರುವ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಘೋಷಿಸಿದೆ. ಇದಕ್ಕೆ ಕರ್ನಾಟಕದ ಸಂಸದ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

150 ಕಿ.ಮಿ.ವ್ಯಾಪ್ತಿಯಲ್ಲಿ ನಿರ್ಮಿಸುವಂತಿಲ್ಲ
ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಂಸದ, ಕರ್ನಾಟಕದ ಹೊಸೂರಿನಲ್ಲಿ ತಮಿಳುನಾಡು ಏರ್‌ಪೋರ್ಟ್ ಸ್ಥಾಪನೆ ಘೋಷಿಸಿದೆ. ಹಾಲಿ ನಿಲ್ದಾಣ ಬೆಂಗಳೂರು ಏರ್‌ಪೋರ್ಟ್ ನಿಲ್ದಾಣದ 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತಿಲ್ಲ. ಹೊಸೂರು ತಮಿಳುನಾಡಿನಲ್ಲಿದ್ದರೂ ಅದರ ಭಾರ ಬೆಂಗಳೂರಿನ ಮೇಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಬೆಳೆಯುತ್ತಿರುವುದನ್ನು ನೋಡಿದರೆ ಇನ್ನೊಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಹೊಸದಾಗಿ ವಿಮಾನ ನಿಲ್ದಾಣ ಇಲ್ಲಿ ಮಾಡದಿದ್ದರೂ ಹೆಚ್‌ಎಎಲ್ ಅನ್ನು ದೇಶಿಯ ವಿಮಾನ ನಿಲ್ದಾಣವಾಗಿ ಬಳಕೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಜನರು ಬುದ್ಧಿವಂತರಿದ್ದಾರೆ
ನಾನು ಮುಖ್ಯಮಂತ್ರಿ ಆಗಿದ್ದಾಗ ರಕ್ಷಣಾ ಸಚಿವರ ಬಳಿ ಇದರ ಬಗ್ಗೆ ಮಾತನಾಡಿದ್ದೆ. ಹೆಚ್‌ಎಎಲ್ ಅನುಮತಿ ನೀಡಿದರೆ ಅದರ ಬಳಕೆಗೆ ಸರ್ಕಾರ ಸಿದ್ಧವಿದೆ. ಹೊಸೂರು ವಿಮಾನ ನಿಲ್ದಾಣದಿಂದ ಬೆಂಗಳೂರಿನಲ್ಲಿ ಐಟಿ ಅಭಿವೃದ್ಧಿಯಾಗುವುದಿಲ್ಲ. ಬೆಂಗಳೂರು ಐಟಿ ಕ್ಷೇತ್ರದಲ್ಲಿ ಈಗಾಗಲೇ ಬೆಳೆದಿದೆ. ನಮ್ಮ ಜನರು ಬುದ್ಧಿವಂತಿರಿದ್ದಾರೆ. ಟ್ಯಾಲೆಂಟ್ ನಿಂದ ಬೆಂಗಳೂರು ಬೆಳೆದಿದೆ ಎಂದರು.

ಇನ್ನು ಕಾಂಗ್ರೆಸ್‌ನ ಸಂಸದ ರಾಹುಲ್ ಗಾಂಧಿಯ ಹಿಂದೂ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ರಾಹುಲ್‌ಗಾಂಧಿಗೆ ಏನು ಹೇಳಬೇಕು ಏನು ಮಾತನಾಡಬೇಕು ಎನ್ನುವುದು ಅವರಿಗೇ ಗೊತ್ತಿಲ್ಲ. ತಮ್ಮ ಮಾತಿನಿಂದ ಬೇರೆಯವರನ್ನು ಗೊಂದಲಕ್ಕೆ ಒಳಪಡಿಸುತ್ತಾರೆ.
ಕಾಂಗ್ರೆಸ್ ಪಕ್ಷ ಜಾತ್ಯತೀತ ವಾದ ಬಿಡಬೇಕು
ದೇಶ ಸುತ್ತಿದ ಮೇಲೆ ಅವರ ಪ್ರಬುದ್ಧತೆ ಹೆಚ್ಚಾಗಬೇಕಿತ್ತು. ಆದರೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬರುವಂತೆ ಮಾತನಾಡುತ್ತಿದ್ದಾರೆ. ಸಂಸತ್ತಿನಲ್ಲಿ ಹೀಗೆ ಮಾತನಾಡುವುದಿದ್ದರೆ ಕಾಂಗ್ರೆಸ್ ಪಕ್ಷ ಜಾತ್ಯತೀತ ವಾದ ಬಿಡುವುದು ಒಳ್ಳೆಯದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಹೊಸ ಏರ್‌ಪೋರ್ಟ್‌ಗೆ ಡಿಪಿಆರ್
ಸದ್ಯ ಕರ್ನಾಟಕ ರಾಜ್ಯ ಕೈಗಾರಿಕೆ ಸಚಿವರ ನಿರ್ದೇಶನದಲ್ಲಿ ಸಂಬಂಧಿಸಿದ ಅಧಿಕಾರಿಗಳು ಬೆಂಗಳೂರಿನ ಕೆಐಎ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹಾಗೂ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಹುಡುಕಲಾಗುತ್ತಿದೆ. ಡಿಪಿಆರ್ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ಸಹ ನೀಡಲಾಗಿದೆ.












Click it and Unblock the Notifications