ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

62ನೇ ವಿಶ್ವದಾಖಲೆ ಬರೆದ ನಿವೃತ್ತ ವಿಜ್ಞಾನಿ ಡಾ. ರಮೇಶ್ ಬಾಬು

|
Google Oneindia Kannada News

ಬೆಂಗಳೂರು, ಏಪ್ರಿಲ್ 18:ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಎಸ್. ರಮೇಶ್ ಬಾಬು ಅವರು ಈವರೆಗೆ 69 ವಿಶ್ವ ದಾಖಲೆಯನ್ನು ಮಾಡಿದ್ದು, ಇದೀಗ ಕಿಬ್ಬೊಟ್ಟೆಯ ಪುಷ್ ಅಪ್ ಗಳನ್ನು ಸತತ ಒಂದು ಗಂಟೆಗಳ ಕಾಲ ಮಾಡುವ ಮೂಲಕ ತಮ್ಮ 62ನೇ ವಿಶ್ವದಾಖಲೆಯನ್ನು ಸ್ಥಾಪಿಸಿದ್ದಾರೆ.

ಬೆಂಗಳೂರಿನ ಪ್ರೊ. ಸತೀಶ್ ಧವನ್ ಪಾರ್ಕ್ ನಲ್ಲಿ ಏಪ್ರಿಲ್ 14ರಂದು ಬೆಳಗ್ಗೆ 9 ಗಂಟೆಯಿಂದ ಸತತ ಒಂದು ಗಂಟೆಗಳ ಕಾಲ ಪುಷ್ ಅಪ್ ಗಳನ್ನು ತೆರೆದ ಜಿಮ್ ನಲ್ಲಿ ಮಾಡುವ ಮೂಲಕ ತಮ್ಮ ವಿಕ್ರಮವನ್ನು ಸಾಧಿಸಿದ್ದಾರೆ.

ಇತ್ತೀಚೆಗಷ್ಟೇ ಹೈವೇ ಕಾರ್ ಡ್ರೈವಿಂಗ್ ನ ಸೋಲೋ ಮ್ಯಾರಥಾನ್ ನ ಹಾಗೂ ಅತಿ ಎತ್ತರದ ಪಾರ್ವತಿ ಜೆಡ್ ಸಸಿ ಬೆಳೆಸುವುದು ಹಾಗೂ ವಿಶ್ವದಲ್ಲೇ ಅತಿ ಎತ್ತರದ ಸಿಮರೋಬಾ ಮರಗಳನ್ನು ತಮ್ಮ ನಿವಾಸದ ಗಾರ್ಡನ್‌ ನಲ್ಲಿ ಬೆಳೆಸುವ ಮೂಲಕ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದರು. ತಮ್ಮ ಈ ನೂತನ ದಾಖಲೆಯನ್ನು ತಮ್ಮ ಪತ್ನಿ ಉಷಾ ಅವರ ಜನ್ಮ ದಿನ ಅಂಗವಾಗಿ ಪತ್ನಿಗೆ ಸಮರ್ಪಿಸಿದ್ದಾಗಿ ಅವರು ಪ್ರಕಟಿಸಿದ್ದಾರೆ.

Scientist Dr Rameshbabu set new world record

ದಿನಕ್ಕೆ ಎರಡು ಬಾರಿ ಸತತ ಒಂದು ಸಾವಿರ ಕಿಬ್ಬೊಟ್ಟೆಯ ಪುಷ್ ಅಪ್ ಗಳನ್ನು ತೆಗೆಯುವ ಮೂಲಕ ತಾಲೀಮು ನಡೆಸಿದ್ದ ಅವರು ಇದೀಗ ಒಂದು ಗಂಟೆಗಳ ಕಾಲ ಸತತ ಕಿಬ್ಬೊಟ್ಟೆಯ ಪುಷ್ ಅಪ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಪ್ರತಿ 38 ನಿಮಿಷ್ 28 ಸೆಕೆಂಡ್ ಗಳಿಗೆ 1ಸಾವಿರ ಪುಷ್ ಅಪ್ ಗಳನ್ನು ತೆಗೆಯುತ್ತಿದ್ದು ಡಾ. ರಮೇಶ್ ಬಾಬು ಅವರು ದಾಖಲೆ ವೇಳೆ ಸತತ ಒಂದು ಗಂಟೆಗಳ ಕಾಲ ಒಂದೂವರೆ ಸಾವಿರಕ್ಕೂ ಹೆಚ್ಚು ಪುಷ್ ಅಪ್ ಗಳನ್ನು ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

English summary
Former scientist of Indian Institute of Science Bangalore has set a new record by doing one hour non stop abdominal push-ups in open gym.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X