ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಬೈಬಲ್ ಕಡ್ಡಾಯ ಆದೇಶ; ಹಿಂದೂ ಸಂಘಟನೆಗಳ ಆಕ್ರೋಶ
ಬೆಂಗಳೂರು, ಏಪ್ರಿಲ್ 25: ಶಾಲೆಗಳು ಸರ್ವಧರ್ಮವನ್ನು ಬದಿಗಿಟ್ಟು ಮಕ್ಕಳ ಶ್ರೇಯೋಭಿವೃದ್ದಿ ಮತ್ತು ಜ್ಞಾನಾರ್ಜನೆಗಾಗಿ ಶ್ರಮಿಸಬೇಕು. ಮಕ್ಕಳಲ್ಲಿ ಜಾತಿ, ಧರ್ಮದ ವಿಷಬೀಜಗಳು ಹೊಕ್ಕದಂತೆ ಜಾಗೃತಿ ಮೂಡಿಸುತ್ತ ಜಾತ್ಯಾತೀತ ರಾಷ್ಟ್ರದ ಮಹತ್ವವನ್ನು ಸಾರುವಂತಾಗಬೇಕು. ಅದ್ರೆ ಬೆಂಗಳೂರಿನ ಶಾಲೆಯೊಂದರಲ್ಲಿ ಬೈಬಲ್ ಕಡ್ಡಾಯ ಮಾಡಿರೋದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಹಲಾಲ್ ಕಟ್, ಅಜಾನ್ ಹೀಗೆ ಸಾಲು ಸಾಲು ವಿವಾವದಗಳ ಬಳಿಕ ಇದೀಗ ಹಿಂದೂ ಪರ ಸಂಘಟನೆಗಳ ಕಣ್ಣು ಕ್ರೈಸ್ತ ಶಾಲೆಯೊಂದರ ಮೇಲೆ ಬಿದ್ದಿದೆ. ನಗರದ ಪಾಟರಿ ಟೌನ್ ನಲ್ಲಿರುವ ಕ್ಲಾರೆನ್ಸ್ ಶಾಲೆ ಬೈಬಲ್ ಕಡ್ಡಾಯ ಮಾಡಿರುವ ಆರೋಪ ಈಗ ಕೇಳಿ ಬಂದಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.

ಕ್ರೈಸ್ತಯೇತರ ಮಕ್ಕಳಿಗೆ ಬೈಬಲ್ ಶಿಕ್ಷಣವನ್ನು ಕಡ್ಡಾಯ ಮಾಡಿರುವುದಕ್ಕೆ ಕಿಡಿ!
ಈಗಾಗಲೇ ರಾಜ್ಯ ಸಾಲು ಸಾಲು ವಿವಾದಗಳಿಗೆ ಸಾಕ್ಷಿಯಾಗಿದೆ. ಇದರ ನಡುವೆ ಇದೀಗ ಕ್ರೈಸ್ತ ಶಾಲೆಯಲ್ಲಿ ಕ್ರೈಸ್ತರಲ್ಲದೆ ಇತರೆ ಧರ್ಮದ ಮಕ್ಕಳಿಗೂ ಒತ್ತಾಯ ಪೂರ್ವಕವಾಗಿ ಬೈಬಲ್ ಓದಿಸಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ವೇದಿಕೆ ಮುಖಂಡರು ಆರೋಪಿಸುತ್ತಿದ್ದಾರೆ. ನಗರದ ಪಾಟರಿ ಟೌನ್‌ನಲ್ಲಿರುವ ಕ್ಲಾರೆನ್ಸ್ ಹೈ ಸ್ಕೂಲ್‌ನ ಪಠ್ಯಕ್ರಮದಲ್ಲಿ ಬೈಬಲ್ ಕಡ್ಡಾಯ ಮಾಡಲಾಗಿದ್ದು, ಹಿಂದೂ ಮಕ್ಕಳಿಗೆ ಒತ್ತಾಯದಿಂದ ಬೈಬಲ್ ಓದುವಂತೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಈ ಶಾಲೆಯ ವೆಬ್ ಸೈನ್ ಬ್ರೌಶರ್ ನಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ಕ್ರಮ ತೆಗೆದುಕೊಳ್ಳಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.

ವೆಬ್ ಸೈಟ್‌ನಲ್ಲಿ ಏನೆಂದು ಹಾಕಲಾಗಿದೆ?
pioneer in hostic in an enjoyable , secure, inclusive and christ-centred environment. (ಆಹ್ಲಾದಿಸಬಹುದಾದ, ಸುರಕ್ಷಿತ, ಅಂತರ್ಗತ ಮತ್ತು ಕ್ರಿಸ್ತ-ಕೇಂದ್ರಿತ ವಾತವಾರಣದ ಕಲಿಕೆ) ಎಂದು ನಮೂದಿಸಿದೆ. ಇದೇ ವಿಚಾರ ಕ್ಲಾರೆನ್ಸ್ ಶಾಲೆಯ ಮೇಲೆ ಕಿಡಿಕಾರಲು ಕಾರಣವಾಗಿದೆ.
ಬೈಬಲ್ ಶಿಕ್ಷಣವನ್ನು ಕ್ರೈಸ್ತಯೇತರ ಮಕ್ಕಳಿಗೆ ಕಡ್ಡಾಯ ಮಾಡಿರುವುದು ಈ ಶಾಲೆಯ declaration ನಲ್ಲಿ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಕ್ರೈಸ್ತಯೇತರ ವಿದ್ಯಾರ್ಥಿಗಳ ಮೇಲೆ ಬೈಬಲ್ ಧಾರ್ಮಿಕ ಗ್ರಂಥವನ್ನು ಬಲವಂತವಾಗಿ ಹೇರಲಾಗಿದೆ. ಇದು ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಸಂವಿಧಾನದ ಕಲಂ 25ನ್ನು ಉಲ್ಲಂಘಿಸಲಾಗಿದೆ. ಮಕ್ಕಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಮಾಡಿದ ಆಘಾತವಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಕ್ಲಾರೆನ್ಸ್ ಹೈ ಸ್ಕೂಲ್ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿಲ್ಲ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕ್ಲಾರೆನ್ಸ್ ಹೈಸ್ಕೂಲ್ ಆಡಳಿತ ಮಂಡಳಿ ನಿರಾಕರಿಸಿದೆ. ಶಾಲೆಯ ವೆಬ್ ಸೈಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿರುವುದು ಮಾತ್ರ ನಿಜ. ಆದರೆ ಪಠ್ಯಕ್ರಮದಲ್ಲಿ ಬೈಬಲ್ ಬೋಧನೆಯಾಗುತ್ತಿದೆಯಾ ಎಂಬ ಅನುಮಾನವಿದೆ.
ಶಿಕ್ಷಣ ಸಚಿವರಿಗೆ ದೂರು ನೀಡುವ ಸಾಧ್ಯತೆ: ಕ್ಲಾರೆನ್ಸ್ ಹೈಸ್ಕೂಲ್ ನಲ್ಲಿ ವಿವಾದಿದ ಬೈಬಲ್ ಕಲಿಕೆಯ ವಿಚಾರದ ಬಗ್ಗೆ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ರವರಿಗೆ ದೂರು ನೀಡಲು ಹಿಂದು ಪರ ಸಂಘಟನೆಗಳು ಸಿದ್ದವಾಗಿದೆ. ಮಕ್ಕಳಲ್ಲಿ ಸಮಾನತೆಯ ಭಾಗವಾಗಿ ಶಿಕ್ಷಣವನ್ನು ನೀಡದೆ ಬೇಬಲ್ ಕಲಿಸೋದು ಅಕ್ಷಮ್ಯ ಹೀಗಾಗಿ ಶಿಕ್ಷ ಸಂಸ್ಥೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರಿಗೆ ಒತ್ತಾಯಿಸಲಿದ್ದಾರೆ.

ಎಲ್ಲ ಜಾತಿ ಧರ್ಮದವರಿಗೂ ಒಂದೇ
ಶಾಲಾ ಕಾಲೇಜು ಅಂದ್ರೆ ಅದು ಎಲ್ಲ ಜಾತಿ ಧರ್ಮದವರಿಗೂ ಒಂದೇ. ಹಿಜಾಬ್ ಸಂಘರ್ಷದ ಬಳಿಕ ನ್ಯಾಯಾಲಯ ಸಮವಸ್ತ್ರಧರಿಸುವಂತೆ ಆದೇಶಿಸಿತ್ತು. ಸಮವಸ್ತ್ರದ ಭಾವನೆಯೇ ಸಮಾನತೆ, ಜಾತಿ, ಧರ್ಮ, ಬಡವ ಬಲ್ಲಿದ ಬೇಧವಿಲ್ಲದಂತೆ ನಾವೆಲ್ಲರೂ ಸಮಾನರು ಎಂದು ಸಾರುವುದಾಗಿದೆ. ಇಂಥ ಶಿಕ್ಷಣ ಕೇಂದ್ರಗಳಲ್ಲಿ ಅನ್ಯಧರ್ಮೀಯರಿಗೂ ಬೈಬಲ್ ಕಲಿಸೋದು ಎಷ್ಟು ಸರಿ ಎಂಬುದು ಹಿಂದೂ ಮುಖಂಡರ ವಾದವಾಗಿದೆ.












Click it and Unblock the Notifications