ಬೆಂಗಳೂರಿನಲ್ಲಿ ತಡರಾತ್ರಿ ಭಯಾನಕ ಘಟನೆ: ವಿಡಿಯೋ ಫುಲ್ ವೈರಲ್!
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಗಳನ್ನು ಮಾಡುತ್ತಲ್ಲೇ ಇವೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಜನ ಭಯಬೀಳುವಂತಹ ಘಟನೆಗಳು ವರದಿಯಾಗುತ್ತಲ್ಲೇ ಇದೆ. ಇದೀಗ ಐಟಿ ರಾಜಧಾನಿಯಲ್ಲಿ ನಡೆದಿರುವ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಅಪಾರಧ ಸುದ್ದಿಗಳು ಹೆಚ್ಚು ಸದ್ದು ಮಾಡುತ್ತಿವೆ. ಅಲ್ಲದೇ ಗಾಡಿಗಳನ್ನು ಅಡ್ಡಗಟ್ಟಿ ಬೆದರಿಸುವುದು. ಕಾರ್‌ಗಳ ಮುಂದೆ ಬಂದು ಬೀಳುವುದು ಹಾಗೂ ಹಿಂಬಾಲಿಸುವಂತಹ ಘಟನೆಗಳು ನಡೆಯುತ್ತಲ್ಲೇ ಇವೆ. ಈ ಬೆಳವಣಿಗೆಗೆಳಿಗೆ ವಿರೋಧವೂ ವ್ಯಕ್ತವಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು ಐಟಿ ರಾಜಧಾನಿ ಎನ್ನುವ ಖ್ಯಾತಿ ಗಳಿಸಿರುವುದು ಗೊತ್ತಿರುವ ವಿಚಾರವೇ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೆಲವು ಕಿಡಿಗೇಡಿಗಳ ಕೃತ್ಯದಿಂದಾಗಿ ಬೆಂಗಳೂರಿನ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತಿದೆ. ಬೆಂಗಳೂರಿನ ಬಗ್ಗೆ ವ್ಯವಸ್ಥಿತವಾಗಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆಯೇ ಎನ್ನುವ ಅನುಮಾನವೂ ಇದರಿಂದ ಮೂಡುತ್ತಿದೆ. ಆದರೆ, ಕಿಡಿಗೇಡಿಗಳ ವರ್ತನೆಗೆ ಆಕ್ರೋಶ ಹೆಚ್ಚಾಗುತ್ತಿದೆ.
ಘಟನೆಯ ಹಿನ್ನೆಲೆ ಏನು: ಭಾನುವಾರ ರಾತ್ರಿ ಸುಮಾರು 10:38ರ ವೇಳೆ ಬೆಂಗಳೂರಿನ ಕಾಡುಬೀಸನಹಳ್ಳಿ - ಪಾಣತ್ತೂರು ರಸ್ತೆಯ ಮಾರ್ಗವಾಗಿ ಕಾರ್‌ನಲ್ಲಿ ದಂಪತಿಗಳು ಹೋಗುವಾಗ ಬೈಕ್‌ನಲ್ಲಿ ಬಂದ ಕಿಡಿಗೇಡಿ, ಕಾರ್‌ಗೆ ಅಡ್ಡಗಟ್ಟಿ ಕೈಸನ್ನೆಯಲ್ಲೇ ಕಾರ್ ಸೈಡ್‌ಗೆ ಹಾಕುವಂತೆ ಹೇಳಿದ್ದಾನೆ. ಕಾರ್ ಸೈಡ್‌ಗೆ ಹಾಕಿ, ಕೆಳಗೆ ಇಳಿಯಿರಿ ಎಂದು ಬೆದರಿಸಿದ್ದಾನೆ. ಆದರೆ, ದಂಪತಿ ಕಾರು ನಿಲ್ಲಿಸದೆ. ಕಾರ್ ಅನ್ನು ಹಿಂದಕ್ಕೆ ತೆಗೆದಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯರು ದಂಪತಿಗಳ ನೆರವಿಗೆ ಬಂದಿದ್ದಾರೆ ಎನ್ನಲಾಗಿದೆ.
ಆದರೆ, ದುಷ್ಕರ್ಮಿ ಕಾರು ಮುಂದಕ್ಕೆ ಹೋಗದಂತೆ ತಡೆದ ಸಂದರ್ಭದಲ್ಲಿ ಕಾರಿನಲ್ಲಿದ್ದವರು ಹಾಗೂ ಮಹಿಳೆ ಭಯಭೀತರಾಗಿರುವುದು. ಕಿರುಚಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ಥಳೀಯರು ಹಾಗೂ ಇದೇ ಮಾರ್ಗದಲ್ಲಿ ಬೇರೆ ವಾಹನಗಳು ಬಂದಿದ್ದರಿಂದ ಅನಾಹುತವೊಂದು ತಪ್ಪಿದೆ.
ಟ್ವೀಟ್ ಮಾಡಿ ವಿಜಯೇಂದ್ರ ಆಕ್ರೋಶ: ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ಕನಿಷ್ಠ ಪಕ್ಷ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾತ್ರಿಯಾದರೆ ಪುಂಡರು, ಕಿಡಿಗೇಡಿಗಳು ನಡು ರಸ್ತೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವುದು ದಿನೇ ದಿನೇ ವರದಿಯಾಗುತ್ತಲೇ ಇವೆ ಎಂದು ಅವರು ದೂರಿದ್ದಾರೆ.
ತಡರಾತ್ರಿ ಕಾಡುಬೀಸನಹಳ್ಳಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಪುಂಡನೊಬ್ಬ ಬೆದರಿಸುತ್ತಿರುವ ಘಟನೆ ಉದ್ಯೋಗಿಗಳು, ಮಹಿಳೆಯರು ಹಾಗೂ ಬೆಂಗಳೂರಿನ ಸಾರ್ವಜನಿಕರು ಒಂಟಿಯಾಗಿ ಓಡಾಡಲೂ ಸಹ ಭಯಪಡುವ ಆತಂಕದ ವಾತಾವರಣ ಸೃಷ್ಟಿಯಾಗಿದೆ.
Last night, at approximately 10:38 pm, a disturbing incident of road rage took place on the Kadubeesanahalli-Panathur Road, near Vibgyor School. A couple traveling in their car was suddenly and violently attacked by an assailant on a bike. Thankfully, they survived the attack,… pic.twitter.com/TnhaYux0BL
— Karnataka Portfolio (@karnatakaportf) October 14, 2024
ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳಿತಪ್ಪಿರುವುದಕ್ಕೆ ಸಾಕ್ಷಿಯಾಗಿ ಸಂಭವಿಸಿರುವ ಅನೇಕ ದುರ್ಘಟನೆಗಳು ನಮ್ಮ ಮುಂದಿವೆ. ಅಭಿವೃದ್ಧಿಯತ್ತ ಒಂದೇ ಒಂದು ಹೆಜ್ಜೆ ಇಡದ ಭ್ರಷ್ಟ ಹಗರಣಗಳ ಸರಮಾಲೆ ಹೊತ್ತ
ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯ ವಿಷಯದಲ್ಲಾದರೂ ಜನರಿಗೆ ನೆಮ್ಮದಿ ಕೊಡುವ ಪ್ರಮಾಣಿಕ ಪ್ರಯತ್ನ ಮಾಡಲಿ ಎಂದು ಹೇಳಿದ್ದಾರೆ.
Last night, at approximately 10:38 pm, a disturbing incident of road rage took place on the Kadubeesanahalli-Panathur Road, near Vibgyor School. A couple traveling in their car was suddenly and violently attacked by an assailant on a bike. Thankfully, they survived the attack,… pic.twitter.com/TnhaYux0BL
— Karnataka Portfolio (@karnatakaportf) October 14, 2024
ಐಟಿ ಕಂಪನಿಗಳು ಹೆಚ್ಚಾಗಿ ಇರುವ ಪ್ರದೇಶ: ಇನ್ನು ಕಾಡುಬೀಸನಹಳ್ಳಿಯು ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಇದೆ. ಈ ಭಾಗದಲ್ಲಿ ಐಟಿಬಿಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಅಲ್ಲದೇ ಬೆಳ್ಳಂದೂರು, ವೈಟ್‌ಫೀಲ್ಡ್, ಬ್ರೂಕ್‌ಫೀಲ್ಡ್ ಮತ್ತು ಕೋರಮಂಗಲ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ಇಂತಹ ಪ್ರಮುಖ ರಸ್ತೆಯಲ್ಲಿ ಈ ರೀತಿಯ ಅವಘಡ ಸಂಭವಿಸಿರುವು ಆತಂಕಕ್ಕೆ ಕಾರಣವಾಗಿದೆ.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications