Get Updates
Get notified of breaking news, exclusive insights, and must-see stories!

ಬೆಂಗಳೂರಿಗರಿಗೆ 'ವಿದ್ಯುತ್ ಉಳಿಸಿ ಲಕ್ಷಾಧೀಶರಾಗಿ' ಸ್ಪರ್ಧೆ

ಬೆಂಗಳೂರು, ನ. 24: ವಿದ್ಯುತ್ ಬಳಕೆ ಮಿತಿಗೊಳಿಸುವ ಪ್ರವೃತ್ತಿಯನ್ನು ಪ್ರೋತ್ಸಾಹಿಸಲು ನಗರದ ಗ್ರೀನ್ ಎನರ್ಜಿ ಫೌಂಡೇಶನ್ ಹಾಗೂ ರಾಕೋಲ್ಡ್ ಥರ್ಮಲ್ ಸಂಸ್ಥೆ ವತಿಯಿಂದ ಸ್ವಿಚ್ ಟು ಗ್ರೀನ್ ಯೋಜನೆಯಡಿ 'ವಿದ್ಯುತ್ ಉಳಿಸಿ ಲಕ್ಷಾಧಿಪತಿಗಳಾಗಿ' ಸ್ಪರ್ಧೆ ಆಯೋಜಿಸಲಾಗಿದೆ. [ವಿದ್ಯುತ್ ತಯಾರಿಸಿ ಸರ್ಕಾರಕ್ಕೆ ಮಾರಿ]

ಗೃಹ ನಿರ್ಮಾಣ ಸಂಸ್ಥೆ, ಕನಿಷ್ಠ 100 ಫ್ಲಾಟ್‌ಗಳನ್ನು ಹೊಂದಿರುವ ವಸತಿ ಸಮುಚ್ಛಯಗಳು ಹಾಗೂ ನಾಗರಿಕ ಅಭಿವೃದ್ಧಿ ಸಂಘದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದಕ್ಕಾಗಿ ಗೃಹ ನಿರ್ಮಾಣ ಸಂಸ್ಥೆ ಅಥವಾ ಫ್ಲಾಟ್ ಮಾಲೀಕರು ತಮ್ಮದೇ ವಿದ್ಯುತ್ ನಿರ್ವಹಣಾ ಸಮಿತಿ (ಇಎಂಸಿ) ಸ್ಥಾಪಿಸಿಕೊಳ್ಳಬೇಕು. ನಂತರ ಆಯ್ಕೆ ಸಮಿತಿಯಿಂದ ನೇಮಿಸಲಾದ ಸ್ವಯಂ ಸೇವಕರು ನಾಮ ನಿರ್ದೇಶನಗೊಂಡ ಗೃಹ ನಿರ್ಮಾಣ ಸಂಸ್ಥೆಯ ಕಾರ್ಯಶೀಲತೆ ಪರಿಶೀಲಿಸಿ ವರದಿ ಸಲ್ಲಿಸುವರು. [ಶಿವನಸಮುದ್ರ ಬಳಿ ಸೌರ ವಿದ್ಯುತ್ ಘಟಕ]

ವಿದ್ಯುತ್ ಉಳಿಕೆಯಲ್ಲಿ ಎಷ್ಟರ ಮಟ್ಟಿಗೆ ಯೋಜನೆ ಫಲಪ್ರದವಾಗಿದೆ ಎಂಬ ವರದಿ ಆಧಾರದ ಮೇಲೆ ವಿಜೇತರನ್ನು ಗುರುತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಯಂತ್ ಮೊ. 9886102219, ಇ ಮೇಲ್ [email protected] ಸಂಪರ್ಕಿಸಬಹುದು. [ಕರ್ನಾಟಕದಲ್ಲಿ ಹರ್ಬಜನ್ ಸೌರ ಘಟಕ]

power

ಸ್ಪರ್ಧೆ ಉದ್ದೇಶವೇನು?

ಮನೆಗಳಲ್ಲಿ ವಿದ್ಯುತ್ ಬಳಕೆ ಮಿತಿಗೊಳಿಸುವುದನ್ನು ಪ್ರೋತ್ಸಾಹಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ. ಯೋಜನೆಯ ಲಾಭವನ್ನು ಬೆಂಗಳೂರಿನ 10ರಿಂದ 12 ಸಾವಿರ ನಿವಾಸಿಗಳಿಗೆ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಹಿಂದೆ ಪುಣೆಯಲ್ಲಿ ಇಂತಹ ಪರಿವರ್ತನಾ ಕಾರ್ಯಕ್ರಮದಲ್ಲಿ ಸುಮಾರು 8000 ಜನರು ಭಾಗವಹಿಸಿದ್ದರು. ಇದರಿಂದ 48 ಸಾವಿರ ಯೂನಿಟ್ ವಿದ್ಯುತ್ ಉಳಿತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗ್ರೀನ್ ಎನರ್ಜಿ ಫೌಂಡೇಶನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. [ಕರ್ನಾಟಕದಲ್ಲಿ 5 ಸೌರ ವಿದ್ಯುತ್ ಘಟಕ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+