ಲಾಡ್ ಲಡಾಯಿ : ದೊರಸ್ವಾಮಿಯಿಂದ ಸಿಎಂಗೆ ಪತ್ರ
ಬೆಂಗಳೂರು, ನ.12 : ಕೆಲವು ದಿನಗಳಿಂದ ತಣ್ಣಗಾಗಿದ್ದ ಅಕ್ರಮ ಗಣಿಗಾರಿಕೆಯಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಸಚಿವ ಸಂತೋಷ್ ಲಾಡ್ ವಿವಾದ ಮತ್ತೆ ಭುಗಿಲೆದ್ದಿದೆ. ಬೇಲೇಕೇರಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲಾಡ್ ಪಾತ್ರ ಕುರಿತು ಸ್ಪಷ್ಟನೆ ನೀಡಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಶಾದಿ ಭಾಗ್ಯ ಯೋಜನೆ, ಮೂಢನಂಬಿಕೆ ನಿಷೇಧ ಕಾಯ್ದೆ ವಿಚಾರಳಗ ವಿವಾದದಿಂದಾಗಿ ವಾರ್ತಾ ಮತ್ತು ಮೂಲಭೂತ ಸೌಕರ್ಯ ಖಾತೆ ಸಚಿವ ಸಂತೋಷ್ ಲಾಡ್ ಅವರ ವಿರುದ್ಧದ ಆರೋಪಗಳು ತಣ್ಣಗಾಗಿತ್ತು. ಸದ್ಯ ಎಚ್.ಎಸ್.ದೊರೆಸ್ವಾಮಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ವಿವಾದವನ್ನು ಮತ್ತೆ ಕೆದಕಿದ್ದಾರೆ.

ಈಗಾಗಲೇ ಒಟ್ಟು ಮೂರು ಬಾರಿ ಸಂತೋಷ್ ಲಾಡ್ ವಿಚಾರಕ್ಕೆ ಕುರಿತಂತೆ ದೊರೆಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸೋಮವಾರ ಬರೆದ ಪತ್ರದಲ್ಲಿ ಬೇಲೆಕೇರಿ ಬಂದರಿನಲ್ಲಿ ಸಂಗ್ರಹ ಮಾಡಲಾಗಿದ್ದ ಅದಿರು ಸಂತೋಷ್ ಲಾಡ್ ಕಂಪನಿಗೆ ಸೇರಿದ್ದೋ? ಅಥವಾ ಅನಿಲ್ ಲಾಡ್ ಕಂಪನಿಯದೋ? ಎಂಬುದು ಗೊತ್ತಾಗಬೇಕಿದೆ ಎಂದು ಮಾಹಿತಿ ಕೇಳಿದ್ದಾರೆ.
ಪತ್ರದ ಸಾರಾಂಶ : ಸಂತೋಷ್ ಲಾಡ್ ಸಿ ಕೆಟಗೆರಿ ಗಣಿ ಗುತ್ತಿಗೆ ಲೈಸೆನ್ಸ್‌ದಾರರಾಗಿದ್ದು, ಸುಪ್ರೀಂಕೋರ್ಟ್ ಗೆ ತಮ್ಮ ಲೈಸೆನ್ಸ್ ಬಿ ಕೆಟಗೆರಿಗೆ ಸೇರ್ಪಡೆ ಮಾಡಿ ಎಂಬ ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ನಿರಾಕರಿಸಿ ತೀರ್ಪು ನೀಡಿದ ನಂತರ ಅದಕ್ಕೆ ತಡೆಯಾಜ್ಞೆ ಕೋರಿ ಐವರು ನ್ಯಾಯಮೂರ್ತಿಗಳ ಸಮಿತಿ ಮುಂದೆ ಅರ್ಜಿ ಹಾಕಿಕೊಂಡಿದ್ದಾರೆ.
ಅನಿಲ್ ಲಾಡ್ ಅವರ ಕಂಪನಿಗೆ 10 ಸಾವಿರ ಟನ್ ಅದಿರು ಸಾಗಣೆಗೆ ಪರವಾನಗಿ ನೀಡಲಾಗಿತ್ತು. ಆದರೆ, ಅವರ ಕಂಪನಿ ಬೇಲೆಕೇರಿ ಬಂದರಿನಲ್ಲಿ 56,000 ಟನ್ ಅದಿರು ದಾಸ್ತಾನು ಮಾಡಿರುವುದರಿಂದ ಪ್ರಕರಣ ದಾಖಲಿಸಲಾಗಿದೆ.
ಅನಿಲ್ ಲಾಡ್ ಕಂಪನಿ ಹಾಗೂ ಸಂತೋಷ್ ಲಾಡ್ ಕಂಪನಿ ಬೇರೆ-ಬೇರೆಯೇ? ಬೇಲೆಕೇರಿ ಬಂದರಿನಲ್ಲಿ ಸಂತೋಷ್ ಲಾಡ್ ಕಂಪನಿ ಎಷ್ಟು ಅದಿರನ್ನು ದಾಸ್ತಾನು ಮಾಡಿತ್ತು?. ಎಷ್ಟು ಅದಿರು ಸಾಗಣೆಗೆ ಪರ್ಮಿಟ್ ನೀಡಲಾಗಿತ್ತು? ಒಟ್ಟಾರೆ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಸಂತೋಷ್ ಲಾಡ್ ಹಾಗೂ ಅನಿಲ್ ಲಾಡ್ ಪಾತ್ರವೇನು ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೇಳಿದ್ದಾರೆ.
ಸಂತೋಷ್ ಲಾಡ್ ವಿಚಾರಕ್ಕೆ ಸಂಬಂಧಿಸಿದಂತೆ ದೊರೆಸ್ವಾಮಿ ಮೂರು ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲು ಬಳಿ ಲಾಡ್ ಸಮರ್ಥಿಸಿಕೊಂಡಿರುವ ಸಿಎಂ ದೊರಸ್ವಾಮಿ ಅವರ ಪತ್ರಕ್ಕೆ ಏನು ಉತ್ತರ ನೀಡುತ್ತಾರೆ? ಎಂದು ಕಾದು ನೋಡಬೇಕಾಗಿದೆ. (ಸಂತೋಷ್ ಲಾಡ್ ವಿರುದ್ಧ ಸಿಎಂಗೆ ದೊರೆಸ್ವಾಮಿ ಪತ್ರ )












Click it and Unblock the Notifications