ಯುಗಾದಿಯಂದು ಕಲಾರಸಿಕರನ್ನು ಮನರಂಜಿಸುವ 'ಸಂಗೀತ ಸಂಪದ'
ಬೆಂಗಳೂರು, ಮಾರ್ಚ್ 14: ನೂತನ ಸಂವತ್ಸರದ ಮೊದಲ ದಿನವಾದ ಯುಗಾದಿಯಂದು ಕಲಾಸಕ್ತರ ಮನಸ್ಸಿಗೆ ಖುಷಿ ನೀಡುವಂತಹ ಸಂಗೀತ ಸಂಪದ ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ.
ಯುಗಾದಿ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಿದ್ದು ಮಾರ್ಚ್ 18ರಂದು ಭಾನುವಾರ ಸಂಜೆ 5ಗಂಟೆಗೆ ಬನಶಂಕರಿಯ ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನಡೆಯಲಿದೆ. ಅಂದು ವು. ಎಲ್.ವಿ. ಮುಕುಂದ್ ಅವರಿಂದ ಕೊಳಲು ವಾದನ, ವಿ. ಬಿ.ಯು. ಗಣೇಶ್ ಪ್ರಸಾದ್ ಅವರಿಂದ ಪಿಟೀಲು, ವಿ.ತುಮಕೂರು ರವಿಶಂಕರ್ ಅವರಿಂದ ಮೃದಂಗ, ವಿದುಷಿ ಸುಕನ್ಯಾ ರಾಮಗೋಪಾಲ್ ಅವರಿಂದ ಘಟ ವಾದನ ಮೂಡಿಬರಲಿದೆ.

ಕೊಳಲುವಾದಕರೆಲ್ಲರೂ ಒಂದುಗೂಡಿ ಗುರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.











Click it and Unblock the Notifications