ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ: ಪ್ರಮುಖ ಆರೋಪಿ ಸಾಂಬಾಗೆ ನೀಡಿದ್ದ ಜಾಮೀನು ರದ್ದು

|
Google Oneindia Kannada News

ಬೆಂಗಳೂರು, ಸೆ. 14: ಸ್ಯಾಂಡಲ್‌ವುಡ್ ಡ್ರಗ್‌ಪ್ರಕರಣಕ್ಕೆ ಸಂಬಂಧಿಸಿದಮತೆ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದ ಆಫ್ರಿಕಾದ ಸೆನಗಲ್ ನಿವಾಸಿ ಲೂಮ್ ಪೆಪ್ಪರ್ ಅಲಿಯಾಸ್ ಸಾಂಬಾಗೆ ಅಧೀನ ನ್ಯಾಯಾಲಯ ನೀಡಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ರದ್ದು ಪಡಿಸಿದೆ.

2020ರ ಸೆ. 4 ರಂದು ಸಿಸಿಬಿ ಪೊಲೀಸರು ಸ್ಯಾಂಡಲ್‌ವುಡ್ ಡ್ರಗ್ ಡೀಲ್‌ಗೆ ಸಂಬಧಿಸಿದಂತೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಡಿವೈಎಸ್ಪಿ ಗೌತಮ್ ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಸರಣಿ ವ್ಯಕ್ತಿಗಳನ್ನು ಬಂಧಿಸಿದ್ದರು. ನಟಿ ರಾಗಿಣಿ, ಸಂಜನಾ, ನಿರ್ಮಾಪಕ ಶಿವಪ್ರಕಾಶ್, ರವಿಶಂಕರ್ ಸೇರಿದಂತೆ ಹದಿನೈದು ಮಂದಿಯನ್ನು ಬಂಧಿಸಿದ್ದರು. ಅದರಲ್ಲಿ ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸಿಸಿಬಿ ಪೊಲೀಸರು 2500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಂಧನಕ್ಕೆ ಒಳಗಾಗಿದ್ದ ಬಹುತೇಕರು ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಡ್ರಗ್ ಪೆಡ್ಲರ್ ಲೂಮ್ ಅಲಿಯಾಸ್ ಸಾಂಬಾಗೂ ಅಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

Sandalwood drug case: High Court revoked bail granted to main accused Samba

ಲೂಮ್ ಪೆಪ್ಪರ್ ಜಾಮೀನು ಅರ್ಜಿ ವಜಾ: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಲೂಮ್ ಪೆಪ್ಪರ್‌ ಸಾಂಬಾ ಎಂಬಾತನನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ವಿಚಾರಣಾಧೀನ ನ್ಯಾಯಾಲಯವು ಕಳೆದ ಫೆಬ್ರವರಿಯಲ್ಲಿ ಜಾಮೀನು ಮಂಜೂರು ಮಾಡಿತ್ತು ಪ್ರಸ್ತುತ ಅರ್ಜಿದಾರರ ವಿರುದ್ಧ ವಿದೇಶಿಯರ ಕಾಯಿದೆಯ ನಿಬಂಧನೆಗಳನ್ನು ಬಳಸಿರುವುದರ ಬಗ್ಗೆಯೂ ಯಾವುದೇ ಆಕ್ಷೇಪಣೆಗಳಿಲ್ಲ. ವಿಚಾರಣಾಧೀನ ನ್ಯಾಯಾಲಯ ಹೊರಡಿಸಿರುವ ಆಕ್ಷೇಪಾರ್ಹ ಆದೇಶವನ್ನು ಪರಿಶೀಲಿಸಿದಾಗ ಇಂಥ ಯಾವುದೇ ವಿಚಾರಗಳ ಬಗ್ಗೆ ಚರ್ಚಿಸಿರುವುದನ್ನು ನಾನು ನೋಡಿಲ್ಲ. ಮತ್ತೊಂದು ಕಡೆ, ಸುಪ್ರೀಂ ಕೋರ್ಟ್‌ ರಾಗಿಣಿ ದ್ವಿವೇದಿ ಪ್ರಕರಣದಲ್ಲಿ ಕೈಗೊಂಡಿರುವ ನಿರ್ಧಾರವನ್ನು ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯವು ಮನವಿಗೆ ಸಮ್ಮತಿಸಿದೆ" ಎಂದು ಉಮಾ ನೇತೃತ್ವದ ಪೀಠವು ಜಾಮೀನು ರದ್ದುತಿ ಆದೇಶದಲ್ಲಿ ಉಲ್ಲೇಖಿಸಿ ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಯಕ್ಕೆ ಮರಳಿಸಿದೆ.

Sandalwood drug case: High Court revoked bail granted to main accused Samba

ಆರೋಪಿ ಸಾಂಬಾಗೆ ಜಾಮೀನು ಮಂಜೂರು ಮಾಡುವಾಗ ವಿಚಾರಾಧೀನ ನ್ಯಾಯಾಲಯ ಸ್ವಯಂ ಬಳಕೆಗೆ ಅಲ್ಲದ ಮಾರಾಟ ಮಾಡುವ ಉದ್ದೇಶಕ್ಕೆ ಸಂಗ್ರಹಿಸಿದ ಅಮಲು ಪರ್ಥಗಳಾದ ಎಂಡಿಎಂಎ ವಶಪಡಿಸಿಕೊಂಡಿರುವುದನ್ನು ಪರಿಗಣಿಸಿಲ್ಲ. ಮಾದಕ ವಸ್ತು ಮತ್ತು ಅಮಲು ಪದಾರ್ಥ ಕಾಯಿದೆ ಸೆಕ್ಷನ್ 37(c)(1) b ರ ಅಡಿ ಸಾಂಬಾ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ವಿಚಾರಣಾಧೀನ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಸರ್ಕಾರದ ಪರ ಅಭಿಯೋಜಕರು ವಾದ ಮಂಡಿಸಿದ್ದರು. ಪಾಸ್‌ ಪೋರ್ಟ್ ಅವಧಿ ಮುಗಿದರೂ ಭಾರತದಲ್ಲಿಯೇ ಅವನು ನೆಲೆಸಿದ್ದ. ಹೀಗಿದ್ದರೂ ಆತನನ್ನು ಮೂಲ ದೇಶಕ್ಕೆ ವಾಪಸು ಕಳುಹಿಸಬೇಕಿತ್ತು ಎಂಬ ವಿಚಾರವನ್ನು ವಿಚಾರಣಾಧೀನ ನ್ಯಾಯಾಲಯ ಪರಿಗಣಿಸುವ ಗೋಜಿಗೆ ಹೊಗಿಲ್ಲ ಎಂದು ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

Sandalwood drug case: High Court revoked bail granted to main accused Samba

Recommended Video

ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿದ ಪಾಕಿಸ್ತಾನ! | Oneindia Kannada

ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಾಂಬಾ ಪರ ವಕೀಲರಾದ ಕೆ.ಎಸ್. ವಿಶ್ವನಾಥ್, ಸಾಂಬಾನಿಂದ ಹತ್ತು ಗ್ರಾಂ ಎಂಡಿಎಂಎ ಮಾತ್ರ ವಶಪಡಿಸಿಕೊಳ್ಳಲಾಗಿದೆ. ಎನ್ ಡಿಪಿಎಸ್ ಆಕ್ಟ್ ಅಡಿ ಹತ್ತು ಗ್ರಾಂ ಗಿಂತಲೂ ಹೆಚ್ಚು ಪ್ರಮಾಣದ ಎಂಡಿಎಂಎ ವಶಪಡಿಸಿಕೊಂಡರೆ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಿಸಿದ್ದಾರೆ ಎಂದು ಪರಿಗಣಿಸಬಹುದು. ಪ್ರಕರಣದಲ್ಲಿ ಆರೋಪಿಗಳಾಗಿರುವ ಐವರು ವಿದೇಶಿ ಪ್ರಜೆಗಳನ್ನು ಸೆರೆಯಲ್ಲಿಡಲು ಆದೇಶಿಸುವ ಬದಲಿಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದೂ ವಾದಿಸಲಾಗಿದೆ. ಎರಡೂ ವಾದ ಆಲಿಸಿದ ಹೈಕೋರ್ಟ್, ಸಾಂಬಾ ಜಾಮೀನು ಮಂಜೂರು ಅದೇಶ ರದ್ದು ಪಡಿಸಿ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಆದೇಶಿಸಿದೆ. ರಾಜ್ಯ ಸರ್ಕಾರವನ್ನು ಸರ್ಕಾರಿ ಅಭಿಯೋಜಕ ಟಿ.ವಿ. ಗದಿಗೆಪ್ಪ ಪ್ರತಿನಿಧಿಸಿದರೆ ಸಾಂಬಾ ಪರವಾಗಿ ವಕೀಲ ವಿಶ್ವನಾದ್ ವಾದ ಮಂಡಿಸಿದ್ದರು.

English summary
The High Court has cancelled the the bail granted to Samba, the main accused in the Sandalwood drug case read more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X