• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕ್ಕಳ ಆರೈಕೆಗಾಗಿ ಸಕ್ರ ವರ್ಲ್ಡ್ ಆಸ್ಪತ್ರೆಯಲ್ಲಿ ಹೊಸ ಕೇಂದ್ರ ಆರಂಭ

|

ಬೆಂಗಳೂರು, ಮೇ 12: ಸಕ್ರ ವರ್ಲ್ಡ್ ಆಸ್ಪತ್ರೆ ಮಕ್ಕಳ ರೋಗಕ್ಕೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಒಳಗೊಂಡ ಇನ್‍ಸ್ಟಿಟ್ಯೂಟ್ ಆಫ್ ಪಿಡಿಯಾಟ್ರಿಕ್ಸ್ ಕೇಂದ್ರವನ್ನು ಉದ್ಘಾಟಿಸಿದೆ. ಇತ್ತೀಚೆಗಷ್ಟೇ ಆಸ್ಪತ್ರೆ ಜತೆ ಒಡಂಬಡಿಕೆ ಮಾಡಿಕೊಂಡು ಸೇರ್ಪಡೆಯಾಗಿರುವ ಮುಂಚೂಣಿಯಲ್ಲಿರುವ ವೈದ್ಯರಾದ ಡಾ. ಸುರೇಂದರ್ ಕುಮಾರ್ ಯಾಚ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕ್ರಿಕೆಟರ್ ಮಯಾಂಕ್ ಅಗರವಾಲ್, ಸಿಐಡಿ ಪೊಲೀಸ್ ಮಹಾನಿರ್ದೇಶಕ, ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕ, ಬೆಂಗಳೂರು ಮುಖ್ಯಸ್ಥ ಮಿ. ಪ್ರವೀಣ್ ಸೂದ್ ಪಾಲ್ಗೊಂಡಿದ್ದರು.

ಈ ಹೊಸದಾಗಿ ಉದ್ಘಾಟನೆಗೊಂಡ ಅತ್ಯಂತ ಸುಸಜ್ಜಿತ ಮಕ್ಕಳಿಗೆ ಸಂಬಂಧಿಸಿದ ಹಲವು ವಿಧದ ಸಮಸ್ಯೆಯ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ (ನಿಯೋನಾಟಲ್ ಮತ್ತು ಮೂತ್ರಶಾಸ್ತ್ರ) ಕ್ಕೆ ಸಂಬಂಧಿಸಿದ, ರೋಗ ನಿರ್ಣಯ ಹಾಗೂ ಚಿಕಿತ್ಸಕ ಪಿಡಿಯಾಟ್ರಿಕ್ಸ್ ಎಂಡೋಸ್ಕೋಪಿ ಮತ್ತು ನವಜಾತ ಶಿಶುಗಳು ಸೇರಿದಂತೆ ಎಲ್ಲಾ ವಿಧದ ಮಕ್ಕಳ ಚಿಕಿತ್ಸೆ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಎಂಡೋಸ್ಕೋಪಿ ಮಾಡುವ ಸೌಲಭ್ಯವನ್ನು ಈ ಆಸ್ಪತ್ರೆ ಒಳಗೊಂಡಿದೆ.

ಸಕ್ರ ವರ್ಲ್ಡ್ ಆಸ್ಪತ್ರೆಯ ಇನ್‍ಸ್ಟಿಟ್ಯೂಟ್ ಆಫ್ ಪಿಡಿಯಾಟ್ರಿಕ್ ಹಾಗೂ ಪಿಡಿಯಾಟ್ರಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒಪಿಡಿ ಒಟ್ಟು 2250 ಚದರ್ ಅಡಿ ವಿಸ್ತೀರ್ಣ ಪ್ರದೇಶವನ್ನು ಆವರಿಸಿದೆ. ಅಲ್ಲದೇ ಮಕ್ಕಳ ಸ್ನೇಹಿ ಪರಿಸರವನ್ನು ಕೂಡ ಇಲ್ಲಿ ಸೃಷ್ಟಿಸಲಾಗಿದೆ. ಆಸ್ಪತ್ರೆಗೆ ಭೇಟಿ ಕೊಟ್ಟ ಸಂದರ್ಭ ವೈದ್ಯರನ್ನು ಕಂಡು ಮಕ್ಕಳು ಅಂಜುವುದು ಸಹಜ. ಆದ್ದರಿಂದ ಇದು ಆಸ್ಪತ್ರೆ ಅನ್ನುವ ಭಾವನೆಯೇ ಬಾರದ ರೀತಿ ಇಲ್ಲೊಂದು ಆಟದ ವಲಯವನ್ನು ಕೂಡ ಸ್ಥಾಪಿಸಲಾಗಿದೆ.

ಆಸ್ಪತ್ರೆಯ ಮಕ್ಕಳ ಘಟಕವು ಅತ್ಯಂತ ಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಹೆಚ್ಚು ಗುಣಮಟ್ಟದ ಕೃತಕ ಉಸಿರಾಟ ಕೇಂದ್ರ, ನೈಟ್ರಿಕ್ ಆಕ್ಸೈಡ್ ವಿತರಣೆ ಹಾಗೂ ಇಸಿಎಂಒ ಅನ್ನು ಒಳಗೊಂಡಿದೆ. ಪೀಡಿಯಾಟ್ರಿಕ್ ತುರ್ತು ನಿಗಾ ಘಟಕ 24X7 ಕಾರ್ಯನಿರ್ವಹಿಸುತ್ತದೆ. ಇಲ್ಲಿ ಭಾರತ ಹಾಗೂ ಬೇರೆ ದೇಶಗಳಲ್ಲಿ ತರಬೇತಿ ಪಡೆದ ವೈದ್ಯರು, ಸಿಬ್ಬಂದಿಯನ್ನು ಒಳಗೊಂಡಿದೆ.

ನಿಯೊನಾಟಲ್ ತುರ್ತುನಿಗಾ ಘಟಕ ಕೇಂದ್ರವು ಅಂತಾರಾಷ್ಟ್ರೀಯ ಮಾನದಂಡದೊಂದಿಗೆ ಸಿದ್ಧಗೊಂಡಿದೆ. ಇದು ರೋಗಪತ್ತೆಗೆ ಉತ್ತಮವಾಗಿ ಸ್ಪಂಧಿಸಿ ನಿಖರ ಫಲಿತಾಂಶ ನೀಡುತ್ತದೆ.

ಆಸ್ಪತ್ರೆಯು ಶ್ರೇಷ್ಠ ವೈದ್ಯರ ತಂಡವನ್ನು ಒಳಗೊಂಡಿದ್ದು, ಪೀಡಿಯಾಟ್ರಿಕ್ ಶಸ್ತ್ರಚಿಕಿತ್ಸೆ ವಿಭಾಗದ ವಿಭಾಗ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರರಾದ ಡಾ. ಸಿ. ರಾಮಚಂದ್ರ, ಪೀಡಿಯಾಟ್ರಿಕ್ ಶಸ್ತ್ರಚಿಕಿತ್ಸೆ ಹಾಗೂ ಮೂತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರ ಡಾ. ಅನಿಲ್ ಕುಮಾರ್ ಪಿ.ಎಲ್., ಪೀಡಿಯಾಟ್ರಿಕ್ ಹಾಗೂ ನಿಯೊನಾಟಾಲಜಿಸ್ಟ್ ವಿಭಾಗದ ಹಿರಿಯ ಸಲಹೆಗಾರರಾದ ಡಾ. ರವಿಕಿರಣ್ ಎಸ್., ಡಾ. ಸಾಯಿ ಶಂಕರ್, ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಹಾಗೂ ನಿಯೊನಾಟಾಲಜಿಸ್ಟ್ ಡಾ. ಶಿವಕುಮಾರ್ ಸಂಬರ್ಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
Sakra World Hospital, announced the launch of Institute of Pediatrics with Pediatric Super Specialty Facilities today which will be spearheaded by Dr. Surender Kumar Yachha, who joined the hospital recently
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X