ಬೆಂಗಳೂರಿನ ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಸದಾಶಿವ್ ಶೆಣೈ ಆಯ್ಕೆ
ಬೆಂಗಳೂರಿನ ಪ್ರೆಸ್‌ಕ್ಲಬ್ ನ ವಿವಿಧ ಹುದ್ದೆಗಳಿಗೆ ಭಾನುವಾರ(ಏಫ್ರಿಲ್ 23) ದಂದು ನಡೆದ 2017-18ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸದಾಶಿವ್ ಶೆಣೈ ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 23: ಬೆಂಗಳೂರಿನ ಪ್ರೆಸ್‌ಕ್ಲಬ್ ನ ವಿವಿಧ ಹುದ್ದೆಗಳಿಗೆ ಭಾನುವಾರ (ಏಫ್ರಿಲ್ 23) ದಂದು ನಡೆದ 2017-18ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸದಾಶಿವ್ ಶೆಣೈ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ದೊಡ್ಡ ಬೊಮ್ಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಟಿವಿ9ನ ಎಚ್.ವಿ. ಕಿರಣ್ ಮತ್ತು ಕಾರ್ಯದರ್ಶಿಯಾಗಿ ಈ ಸಂಜೆ ಪತ್ರಿಕೆಯ ಹಿರಿಯ ವರದಿಗಾರ ಜನಾರ್ಧನಾಚಾರಿ ಆಯ್ಕೆಯಾಗಿದ್ದಾರೆ. ಭಾನುವಾರದಂದು ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಚುನಾವಣೆ ಭಾರಿ ಕುತೂಹಲ ಉಂಟು ಮಾಡಿತ್ತು.

ಬೆಳಗ್ಗೆ 9 ರಿಂದ 2 ಗಂಟೆವರೆಗೆ ಮತದಾನ ನಡೆಯಿತು. ಈ ಬಾರಿ ಶೇ.90ಕ್ಕೂ ಅಧಿಕ ಸದಸ್ಯರು ಮತ ಚಲಾಯಿಸಿದ್ದು ವಿಶೇಷ. ಮಧ್ಯಾಹ್ನ 3.30ರ ನಂತರ ನಡೆದ ಮತ ಎಣಿಕೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡು ಬಂದಿತು.
ಉದಯ ಟಿವಿಯ ರವೀಶ್ ಮತ್ತು ಸಂಜೆವಾಣಿಯ ದೊಡ್ಡ ಬೊಮ್ಮಯ್ಯ ಅವರು ಸಮಬಲರಾಗಿ ಕಂಡು ಬಂದು, ಟೈ ಆದ ಕಾರಣ ಲಾಟರಿ ಎತ್ತುವ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು. ದೊಡ್ಡ ಬೊಮ್ಮಯ್ಯನವರಿಗೆ ಅದೃಷ್ಟ ಒಲಿದು ಉಪಾಧ್ಯಕ್ಷರಾದರು.

ಬೆಂಗಳೂರು ಪ್ರೆಸ್ ಕ್ಲಬ್ ನ ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ಸದಾಶಿವ ಶಣೈ
ಉಪಾಧ್ಯಕ್ಷರು: ದೊಡ್ಡ ಬೊಮ್ಮಯ್ಯ
ಪ್ರಧಾನ ಕಾರ್ಯದರ್ಶಿ: ಎಚ್.ವಿ. ಕಿರಣ್
ಕಾರ್ಯದರ್ಶಿ: ಜನಾರ್ಧನಾಚಾರಿ
ಖಜಾಂಚಿ: ಬಿ.ಎನ್. ರಮೇಶ್
ಜಂಟಿ ಕಾರ್ಯದರ್ಶಿ: ದೇವಿ ಪ್ರಸಾದ್ ರೈ
ಕಾರ್ಯಕಾರಿ ಮಂಡಳಿ ಸದಸ್ಯರು:
* ಆರ್.ಎಚ್. ಲಕ್ಷ್ಮೀ ಪ್ರಸನ್ನ
* ಎಸ್.ಕೆ. ನಾಗರಾಜು
* ಮಹಾಂತೇಶ್ ಎಸ್. ಹಿರೇಮಠ್
* ಜ್ಯೋತಿ ಇರ್ವತ್ತೂರು
* ಮೋಹನ್ ಕುಮಾರ್ ಸಾವಂತ್
* ಎಸ್.ಜಿ. ವಿರೂಪಾಕ್ಷ
* ನಾರಾಯಣ












Click it and Unblock the Notifications