ರಾಚೇನಹಳ್ಳಿ ಕೆರೆಯ ಸುತ್ತ ಮೋಜಿನ ಒಂದು ಓಟ!
ಬೆಂಗಳೂರು, ಮಾರ್ಚ್ 03:ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಚೇನಹಳ್ಳಿ ಕೆರೆಯಲ್ಲಿ ನಮ್ಮ ಬೆಂಗಳೂರು ಹಬ್ಬವನ್ನು ಮಾರ್ಚ್ 4ರಂದು ಹಮ್ಮಿಕೊಂಡಿದ್ದು ಅದರ ಅಂಗವಾಗಿ 5ಕೆ ಓಟವನ್ನೂ ಕೂಡ ಆಯೋಜಿಸಿದೆ.
ಬಾಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳು ಹಬ್ಬದ ಜತೆಗೆ ಆರೋಗ್ಯಕ್ಕೆ ಉತ್ತೇಜನ ನೀಡುವ ಮೋಜಿಗಾಗಿ ಓಟ ರನ್ ಫಾರ್ ಫನ್ 5ಕೆ ಓಟವನ್ನು ಮಾರ್ಚ್ 4 ರಂದು ಬೆಳಗ್ಗೆ 6.30 ಕ್ಕೆ ರಾಚೇನಹಳ್ಳಿ ಕೆರೆಯಲ್ಲಿ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದೆ. ಭಾನುವಾರ ರಾಚೇನಹಳ್ಳಿ ಕೆರೆ ಸಮೀಪ ಬಿರಿಯಾನಿ, ನೂಡಲ್ಸ್, ಸಿರಿಧಾನ್ಯ, ರಾಗಿ ಕೇಕ್ ಹಾಗೂ ಇನ್ನಿತರೆ ಸ್ವಾದಿಷ್ಟಕರ ಆಹಾರವನ್ನು ಸವಿಯಬಹುದಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ಕೆರೆಗಳು ನಿಷಾನೆ ಇಲ್ಲದಂತೆ ಕಾಣೆಯಾಗಿವೆ ಇರುವ ಕೆರೆಗಳನ್ನು ಉಳಿಸುವ ಪ್ರಯತ್ನ ಇದಾಗಿದೆ. ಜತೆಗೆ ಜನರಲ್ಲಿ ಕೆರೆಯನ್ನು ರಕ್ಷಿಸುವ ಕುರಿತು ಜಾಗೇರಿ ಮೂಡಿಸಲಾಗುತ್ತದೆ. ಬೆಂಗಳೂರು ಹಬ್ಬಕ್ಕೆ ಸಚಿವ ಪ್ರಿಯಾಂಕ್ ಖರ್ಜೆ, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಆಗಮಿಸಲಿದ್ದಾರೆ.












Click it and Unblock the Notifications