ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಹಾಫ್ ಹೆಲ್ಮೆಟ್‌ ಧರಿಸಿದ್ದ ಪೊಲೀಸರಿಗೆ ದಂಡ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18; ಬೆಂಗಳೂರು ನಗರದಲ್ಲಿ ಬೈಕ್ ಸವಾರರು ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಹಾಫ್ ಹೆಲ್ಮೆಟ್ ಧರಿಸಿದರೆ ದಂಡ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಐಎಸ್‌ಐ ಮಾರ್ಕ್ ಇಲ್ಲದ, ಹಾಫ್ ಹೆಲ್ಮೆಟ್ ಧರಿಸಿದರೆ ಬೈಕ್ ಸವಾರರು 500 ರೂ. ದಂಡ ಕಟ್ಟಬೇಕಾಗುತ್ತದೆ. ಆದರೆ ಪೊಲೀಸರೇ ಹಾಫ್ ಹೆಲ್ಮೆಟ್ ಧರಿಸಿ ಓಡಾಡುವ ಬಗ್ಗೆ ಜನರು ಪ್ರಶ್ನೆ ಮಾಡಿದ್ದರು.

 ಹಾಫ್ ಹೆಲ್ಮೆಟ್ ಧರಿಸಿಸುವ ಪೊಲೀಸರಿಗೆ ಸಂಚಾರಿ ಪೊಲೀಸರಿಂದ ದಂಡ: ಮುಂದೆ ಜನಸಾಮಾನ್ಯರಿಗೂ ಇದೇ ರೂಲ್ಸ್? ಹಾಫ್ ಹೆಲ್ಮೆಟ್ ಧರಿಸಿಸುವ ಪೊಲೀಸರಿಗೆ ಸಂಚಾರಿ ಪೊಲೀಸರಿಂದ ದಂಡ: ಮುಂದೆ ಜನಸಾಮಾನ್ಯರಿಗೂ ಇದೇ ರೂಲ್ಸ್?

ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರಿ ಪೊಲೀಸರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ಸೂಚನೆ ನೀಡಿತ್ತು. ಈ ಸೂಚನೆಯನ್ನು ಉಲ್ಲಂಘನೆ ಮಾಡಿದರೆ ಪೊಲೀಸರಿಗೂ ದಂಡ ಹಾಕಲಾಗುತ್ತದೆ ಎಂದು ಹೇಳಿತ್ತು.

ವಿಡಿಯೋ: ಕಾರು-ಕಂಬದಿಂದ ತಲೆ ರಕ್ಷಿಸಿದ ಹೆಲ್ಮೆಟ್ವಿಡಿಯೋ: ಕಾರು-ಕಂಬದಿಂದ ತಲೆ ರಕ್ಷಿಸಿದ ಹೆಲ್ಮೆಟ್

Half Helmet

ಬೆಂಗಳೂರಿನ ಆರ್. ಟಿ. ನಗರ ಸಂಚಾರಿ ಠಾಣೆ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿದ್ದ ಸಂಚಾರಿ ಪೊಲೀಸರಿಗೆ ದಂಡ ಹಾಕಿದ್ದಾರೆ. ಈ ಕುರಿತು ಟ್ವೀಟ್‌ ಸಹ ಮಾಡಿದ್ದಾರೆ. ಹಾಫ್ ಹೆಲ್ಮೆಟ್ ಪ್ರಕರಣವನ್ನು ಪೊಲೀಸರ ವಿರುದ್ಧ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ದಾವಣಗೆರೆ: ಬಸ್ ಡಿಕ್ಕಿ ಹೊಡೆದರೂ ಹೆಲ್ಮೆಟ್ ಉಳಿಸಿತು ಪ್ರಾಣ; CCTVಯಲ್ಲಿ ದೃಶ್ಯ ಸೆರೆ!ದಾವಣಗೆರೆ: ಬಸ್ ಡಿಕ್ಕಿ ಹೊಡೆದರೂ ಹೆಲ್ಮೆಟ್ ಉಳಿಸಿತು ಪ್ರಾಣ; CCTVಯಲ್ಲಿ ದೃಶ್ಯ ಸೆರೆ!

ಹಾಫ್ ಹೆಲ್ಮೆಟ್ ಧರಿಸದಂತೆ ಪೊಲೀಸರಿಗೆ ಸೂಚನೆ ನೀಡಿದ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ವಾರಗಳ ಕಾಲ ಪೊಲೀಸರು ವಿಶೇಷ ಅಭಿಯಾನ ನಡೆಸಿದ್ದರು. ಹಾಫ್ ಹೆಲ್ಮೆಟ್ ಧರಿಸಿ ಬರುವ ಸಂಚಾರಿ ಮತ್ತು ಇತರ ಪೊಲೀಸರನ್ನು ಹಿಡಿದು ದಂಡ ಪ್ರಯೋಗ ಮಾಡಿದ್ದರು.

ಅಕ್ಟೋಬರ್ ತಿಂಗಳಿನಲ್ಲಿಯೂ ಈ ದಂಡ ಪ್ರಯೋಗ ಮುಂದುವರೆದಿದೆ. ಐಎಸ್‌ಐ ಮಾರ್ಕ್ ಇಲ್ಲದ, ಹಾಫ್ ಹೆಲ್ಮೆಟ್ ಧರಿಸಿ ಬರುವ ಪೊಲೀಸರಿಗೆ ದಂಡ ವಿಧಿಸಲಾಗುತ್ತಿದೆ. ಈ ಮೂಲಕ ಸಾರ್ವಜನಿಕರ ಟೀಕೆಗಳಿಂದ ಮುಕ್ತವಾಗಲು ಇಲಾಖೆ ಬಯಸಿದೆ.

bike

ಹಾಫ್ ಹೆಲ್ಮೆಟ್ ನಿಷೇಧ; ಪೂರ್ತಿ ಮುಖ ಮುಚ್ಚದ, ಐಎಸ್‌ಐ ಮಾರ್ಕ್ ಇಲ್ಲದ, ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಸಂಚಾರಿ ಪೊಲೀಸರು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಹಾಫ್ ಹೆಲ್ಮೆಟ್ ನಿಷೇಧಿಸಿದ್ದಾರೆ.

ರಸ್ತೆ ಅಪಘಾತಗಳು ಸಂಭವಿಸಿದಾಗ ಅರ್ಧ ಹೆಲ್ಮೆಟ್ ಧರಿಸಿದವರಿಗೆ ಹೆಚ್ಚಿನ ಗಾಯಗಳು ಉಂಟಾಗುತ್ತಿವೆ. ತಲೆಗೆ ಪೆಟ್ಟುಬಿದ್ದು ಮೃತಪಟ್ಟಿರುವ ಘಟನೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ವಾಹನ ಸವಾರರ ಸುರಕ್ಷತೆ ದೃಷ್ಠಿಯಿಂದ ಪೊಲೀಸರು ಹಾಫ್ ಹೆಲ್ಮೆಟ್ ನಿಷೇಧ ಮಾಡಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಸಂಚಾರಿ ಪೊಲೀಸರು ವಿವಿಧ ಸಿಗ್ನಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಹನ ಸವಾರರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ಜಾಗೃತಿ ಮೂಡಿಸಿದರು. ಮುಂದಿನ ದಿನಗಳಲ್ಲಿ 500 ರೂ. ದಂಡ ವಿಧಿಸಲು ತೀರ್ಮಾನಿಸಿದ್ದಾರೆ.

ಅಪಾಯಗಳು ಜಾಸ್ತಿ; ಪೂರ್ತಿ ಮುಖ ಮುಚ್ಚದ ಹಾಫ್ ಹೆಲ್ಮೆಟ್‌ಗಳಿಂದ ಅಪಾಯ ಹೆಚ್ಚು ಎಂದು ತಜ್ಞರು ಸಹ ವರದಿ ನೀಡಿದ್ದಾರೆ. ನಿಮ್ಹಾನ್ಸ್‌ನ ತಜ್ಞ ವೈದ್ಯರ ತಂಡ ಅಧ್ಯಯನವೊಂದನ್ನು ನಡೆಸಿದ್ದು, ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್‌ಗಳು ಗಟ್ಟಿ ಇರುವುದಿಲ್ಲ, ಹಾಫ್ ಹೆಲ್ಮೆಟ್ ಪೂರ್ತಿ ಮುಖ ಮುಚ್ಚುವುದಿಲ್ಲ. ಇದರಿಂದಾಗಿ ಅಪಘಾತಗಳು ಆದಾಗ ಮೆದುಳ ಬಳ್ಳಿಗೆ ಹೆಚ್ಚಿನ ಗಾಯ ಉಂಟಾಗುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಹಾಫ್ ಹೆಲ್ಮೆಟ್ ಧರಿಸದಂತೆ ನೀಡಿರುವ ಸೂಚನೆ ಉಲ್ಲಂಘನೆ ಮಾಡುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಚಾರಿ ವಿಭಾಗದ ಆಯುಕ್ತ ಡಾ. ಬಿ. ಆರ್. ರವಿಕಾಂತೇಗೌಡ ಸೂಚನೆ ನೀಡಿದ್ದರು. ನಗರದ ಹೊರವರ್ತುಲ ರಸ್ತೆಗಳಲ್ಲಿ ಹಾಫ್ ಹೆಲ್ಮಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆಯೂ ಪೊಲೀಸರು ದಾಳಿ ನಡೆಸಿದ್ದರು.

ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ಹಾಫ್ ಹೆಲ್ಮಟ್ ಧರಿಸುವ ವಾಹನ ಸವಾರರ ಮೇಲೆಯೂ ದಂಡ ಪ್ರಯೋಗ ಮಾಡಲಿದ್ದಾರೆ. ಆದ್ದರಿಂದ ವಾಹನ ಸವಾರರು ಈಗಲೇ ಈ ನಿಯಮದ ಕುರಿತು ಎಚ್ಚರಿಕೆ ವಹಿಸುವುದು ಉತ್ತಮ.

English summary
Bengaluru RT Nagar traffic police fined police for wearing half helmet. Police banned half helmet in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X