ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊಸೆ ಕುಸುಮಾ ಪರವಾಗಿ ನಿಂತ ಡಿಕೆ ರವಿ ತಾಯಿ, ಮುನಿರತ್ನಗೆ ಸಂಕಷ್ಟ!

|
Google Oneindia Kannada News

ಬೆಂಗಳೂರು, ನ. 02: ನಕಲಿ ಮತದಾರರ ಚೀಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ದೂರಿನ ಬೆನ್ನಲ್ಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತ್ತೊಂದು ಅಘಾತವಾಗಿದೆ. ಆರ್ ಆರ್ ನಗರ ಉಪ ಚುನಾವಣೆಗೆ ಸ್ಪೋಟಕ ತಿರುವು ಸಿಕ್ಕಿದ್ದು, ಚುನಾವಣಾ ಅಖಾಡಕ್ಕೆ ಕೊನೆಯ ಘಳಿಗೆಯಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಅವರು ಎಂಟ್ರಿ ಕೊಟ್ಟಿದ್ದಾರೆ. ಮತದಾನಕ್ಕೆ ಒಂದು ದಿನ ಇರುವಾಗ, ಗೌರಮ್ಮ ಅವರ ಪ್ರವೇಶದಿಂದ ಇಡೀ ಚುನಾವಣೆಯಲ್ಲಿ ದಿಕ್ಕು ಬದಲಾಗುವಂತಾಗಿದೆ.

ಆರ್ ಆರ್ ನಗರ ಉಪ ಚುನಾವಣೆಯಲ್ಲಿ ಡಿ.ಕೆ. ರವಿ ಅವರ ಪತ್ನಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂಬುದು ಗೊತ್ತಾದ ತಕ್ಷಣ ತಾಯಿ ಗೌರಮ್ಮ ಅವರು ತೀವ್ರವಾಗಿ ಅದನ್ನು ವಿರೋಧಿಸಿದ್ದರು. ನನ್ನ ಗಂಡ ಅಂತಾ ಅವಳು (ಕುಸುಮಾ) ಒಂದು ಕರ್ಪೂರವನ್ನೂ ಡಿ.ಕೆ. ರವಿಗೆ ಹಚ್ಚಿಲ್ಲ. ಅವನೊಂದಿಗೆ ಅವಳೂ ಹೋಗಿಬಿಟ್ಟಳು ಎಂದು ನಾನು ತಿಳಿದುಕೊಂಡಿದ್ದೇನೆ. ನನ್ನ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ನಿಲ್ಲುವ ಯೋಗ್ಯತೆಯನ್ನು ಕುಸುಮಾ ಕಳೆದುಕೊಂಡಿದ್ದಾಳೆ. ಅವಳು ಚುನಾವಣೆಗೆ ನಿಲ್ಲಲಿ. ಆದರೆ ನನ್ನ ಮಗನ (ಡಿ.ಕೆ.ರವಿ) ಫೋಟೊವನ್ನು ಹಾಕಿಕೊಂಡರೆ ಫ್ಲೆಕ್ಸ್ ಬ್ಯಾನರ್‌ಗಳಿಗೆ ಬೆಂಕಿ ಹಚ್ಚುತ್ತೇನೆ ಎಂದು ಡಿ.ಕೆ. ರವಿ ತಾಯಿ ಗೌರಮ್ಮ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಆರ್. ಆರ್. ನಗರ, ಶಿರಾ ಪ್ರಚಾರಕ್ಕೆ ತೆರೆ; ನ.3ಕ್ಕೆ ಮತದಾನ ಆರ್. ಆರ್. ನಗರ, ಶಿರಾ ಪ್ರಚಾರಕ್ಕೆ ತೆರೆ; ನ.3ಕ್ಕೆ ಮತದಾನ

ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಡಿ.ಕೆ. ಸಹೋದರರು ತಮ್ಮ ರಾಜಕೀಯ ಬಲವನ್ನು ತೋರಿಸಿದ್ದಾರೆ. ಕೊನೆಯ ಘಳಿಗೆಯಲ್ಲಿ ಸೊಸೆಯ ಪರವಾಗಿ ಡಿ.ಕೆ. ರವಿ ತಾಯಿ ಗೌರಮ್ಮ ಅವರು ಪ್ರಚಾರ ಮಾಡಿದ್ದಾರೆ. ಆ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಬಲವಾದ ಏಟನ್ನು ಡಿಕೆ ಬ್ರದರ್ಸ್ ಕೊಟ್ಟಿದ್ದಾರೆ.

ಕುಸುಮಾ ಸ್ಪರ್ಧೆ ವಿರೋಧಿಸಿದ್ದೆ

ಕುಸುಮಾ ಸ್ಪರ್ಧೆ ವಿರೋಧಿಸಿದ್ದೆ

ನನ್ನ ಮಗ ಡಿ.ಕೆ. ರವಿ ಪತ್ನಿ ಕುಸುಮಾ ಅವರು ಆರ್‌ ಆರ್‌ ನಗರದಲ್ಲಿ ಸ್ಪರ್ಧೆ ಮಾಡ್ತಾಳೆ ಆಂದಾಗ ನಾನು ವಿರೋಧಿಸಿದ್ದೆ. ನಾನು ಹೆತ್ತ ತಾಯಿ ಅಲ್ವಾ? ಹೀಗಾಗಿ ಮಗನನ್ನು ಕಳೆದು ಕೊಂಡ ನೋವಿನಲ್ಲಿ ಹೊಟ್ಟೆ ಉರಿಗೆ ಎರಡು ಮಾತುಗಳನ್ನು ಕುಸುಮಾ ಚುನಾವಣೆಗೆ ನಿಲ್ಲುತ್ತಾಳೆ ಅಂದಾಗ ಮಾತನಾಡಿದ್ದು ನಿಜ ಎಂದು ಡಿ.ಕೆ. ರವಿ ತಾಯಿ ಗೌರಮ್ಮ ಅವರು ಒಪ್ಪಿಕೊಂಡಿದ್ದಾರೆ.


ಆದರೆ ಸೊಸೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಕಣ್ಣೀರಿಗೆ ಗೌರಮ್ಮ ಅವರು ಕರಗಿದ್ದಾರೆ. ಹೀಗಾಗಿ ತಮ್ಮ ಮನಸ್ಸನ್ನು ಬದಲಿಸಿಕೊಂಡಿದ್ದಾರೆ.

ಕುಸುಮಾ ಕಣ್ಣೀರು ನೋಡಿ ಸಂಕಟ

ಕುಸುಮಾ ಕಣ್ಣೀರು ನೋಡಿ ಸಂಕಟ

ನಾಲ್ಕು ದಿನಗಳಾಗಲಿ, ನಾಲ್ಕು ವರ್ಷಗಳಾಗಲಿ ನನ್ನ ಜೊತೆಯಲ್ಲಿ ನನ್ನ ಮಗಳ ತರ, ನನ್ನ ಸೊಸೆ ತರ ಎರಡು ದಿನ ಬಾಳಿದ್ದೇವೆ. ನಾನು ಹಿಂದೆ ಮಾತನಾಡಿದ್ದೂ ನಿಜ, ಆದರೆ ಕಳೆದ ಒಂದು ವಾರದಿಂದ ಈಚೆಗೆ ಅವಳು ಕಣ್ಣಲ್ಲಿ ನೀರು ಹಾಕೋದನ್ನು ನೋಡಿ ಸಂಟಕ ಆಯ್ತು. ಆ ಸಂಕಟದಿಂದಲೇ ನಾನು ಇವತ್ತು ನಿಮ್ಮೆದುರು ಮಾತನಾಡುತ್ತಿದ್ದೇನೆ ಎಂದು ಗೌರಮ್ಮ ಹೇಳಿದ್ದಾರೆ.

ತಾಯಿ ಸಂಟಕ ಹಾಗೆ ಮಾತನಾಡಿಸಿತ್ತು. ಈಗ ಈಗ ಸೊಸೆಯ ಕಣ್ಣೀರು ನಾನು ಬದಲಾಗುವಂತೆ ಮಾಡಿದೆ. ಆಗಿದ್ದು ಆಯ್ತು. ಆ ಮಗುವಿಗೆ ನಿಮ್ಮ ಮತವನ್ನು ಕೊಡಿ. ನಾನೂ ಅವಳೊಂದಿಗೆ ಇರುತ್ತೇನೆ. ನಿಮ್ಮ ಅಭಿವೃದ್ಧಿಗೆ ರವಿಯಂತೆ ಅವಳೂ ಶ್ರಮಿಸುತ್ತಾಳೆ ಎಂದು ಗೌರಮ್ಮ ಅವರು ಮನವಿ ಮಾಡಿಕೊಂಡಿದ್ದಾರೆ.

ನೊಂದಿರುವ ಮಗುಗೆ ಮತ ಹಾಕಿ

ನೊಂದಿರುವ ಮಗುಗೆ ಮತ ಹಾಕಿ

ಆರ್ ಆರ್ ನಗರದ ಜನರು ನನ್ನ ಸೊಸೆ ಕುಸುಮಾಳನ್ನು ಬೆಂಬಲಿಸಿ ಮತದಾನ ಮಾಡಿ. ದೇವರ ದಯೆಯಿಂದ ಅವಳು ಮುಂದೆ ಬಂದರೆ ಸಾಕು. ಅವಳ ಕಣ್ಣೀರು ನೋಡಿ ಸಂಕಟ ಆಗುತ್ತಿದೆ. ಕೋಪದಲ್ಲಿ ನನ್ನ ಸೊಸೆಗೆ ಒಂದು ಕ್ಷಣ ಬೈದರೂ, ಮರು ಕ್ಷಣದಲ್ಲಿ ಮರಗುತ್ತೇನೆ. ಸೊಸೆಯಾದರೂ ಚೆನ್ನಾಗಿರಲಿ ಎಂದು ಬಯಸುತ್ತೇನೆ. ಅವಳ ಕಣ್ಣೀರನ್ನು ನೋಡಿ ನಾನು ಕೇಳಿಕೊಳ್ಳುತ್ತಿದ್ದೇನೆ. ಅವಳಿಗೆ ಮತದಾನ ಮಾಡಿ ಗೆಲ್ಲಿಸಿ. ನಾನೂ ಅವಳೊಂದಿಗೆ ನಿಂತು ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತೇವೆ.


ನನ್ನ ಮಗ ಡಿಕೆ ರವಿ ಹಾಗೆ ಕುಸುಮಾ ಕೂಡ ಒಳ್ಳೆಯ ಕೆಲಸ ಮಾಡುತ್ತಾಳೆ. ಎಲ್ಲರಿಗೂ ಕೈಮುಗಿದು ಮತಹಾಕಿ ಎಂದು ಕೇಳಿಕೊಳ್ಳುತ್ತೇನೆ. ನನ್ನ ಮಗನ ಹಾಗೆಯೆ ಅವಳು ಒಳ್ಳೆಯ ಕೆಲಸಗಳಿಂದ ಹೆಸರನ್ನು ಮಾಡುತ್ತಾಳೆ ಎಂದು ವಿನಂತಿಸಿದ್ದಾರೆ.

ನನ್ನ ಗಂಡನ ಹೆಸರನ್ನೂ ಹೇಳುವಂತಿಲ್ಲ!

ನನ್ನ ಗಂಡನ ಹೆಸರನ್ನೂ ಹೇಳುವಂತಿಲ್ಲ!

ಚುನಾವಣೆ ಸಂದರ್ಭದಲ್ಲಿ ನಾನು ನನ್ನ ಗಂಡನ ಹೆಸರನ್ನೂ ಹೇಳದಂತೆ ನನ್ನನ್ನು ತಡೆದಿದ್ದಾರೆ. ನಾನು ಮಾಡಿರುವ ತಪ್ಪಾದರೂ ಏನು? ನಾನು ಹೆಣ್ಣಾಗಿ ಹುಟ್ಟಿದ್ದೆ ತಪ್ಪಾ? ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ದಿ. ಡಿಕೆ ರವಿ ಪತ್ನಿ ಕುಸುಮಾ ಅವರು ಕಣ್ಣೀರು ಹಾಕಿದ್ದರು. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಕುಸುಮಾ ಕುರುತಿ ಕೇವಲವ ಆಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ಸ್ವತಃ ಡಿಕೆ ರವಿ ತಾಯಿ ಅವರು ಕುಸುಮಾ ಅವರಿಗೆ ಬೆಂಬಲ ಕೊಟ್ಟಿರುವುದು ಇಡೀ ಕಾಂಗ್ರೆಸ್ ಪಾಳೆಯಕ್ಕೆ ಬಲ ಬಂದಂತಾಗಿದೆ.


ಈ ರಾಜಕೀಯ ತಂತ್ರಗಾರಿಗೆಯ ಹಿಂದೆ ಡಿಕೆ ಸಹೋದರರಿದ್ದಾರೆ ಎಂಬ ಆರೋಪದಲ್ಲಿ ಎರಡು ಮಾತಿಲ್ಲ ಎಂದು ಆರ್ ಆರ್ ನಗರದ ಜನತೆ ಹೇಳುತ್ತಿದ್ದಾರೆ.

Recommended Video

RR Nagar ನಲ್ಲಿ ಗೆದ್ದೇ ಗೆಲ್ತೀನಿ ಅಂದ್ರು H Kusuma | Oneindia Kannada
ಗಲಿಬಿಲಿಯಾದ ಮುನಿರತ್ನ

ಗಲಿಬಿಲಿಯಾದ ಮುನಿರತ್ನ

ಆರ್ ಆರ್ ನಗರ ಬಿಜೆಪಿಯಲ್ಲಿನ ಅಸಮಾಧಾನವನ್ನು ಮುನಿರತ್ನ ಅ ವರು ಹೇಗೊ ಮ್ಯಾನೇಜ್ ಮಾಡಿದ್ದರು. ಆದರೆ ಕೊಬೆ ಘಳಿಗೆಯಲ್ಲಿ ಡಿಕೆ ರವಿ ತಾಯಿ ಗೌರಮ್ಮ ಅವರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ನಿಂತಿರುವುದು ಹೊಸ ಆತಂಕ ಸೃಷ್ಟಿಸಿದೆ. ರಾಜಕೀಯ ಪ್ರತಿತಂತ್ರ ಮಾಡಲೂ ಮುನಿರತ್ನ ಹಾಗೂ ಬಿಜೆಪಿ ಪಾಳೆಯಕ್ಕೆ ಸಮಯವಿಲ್ಲ.


ಇಬ್ಬರು ಮಹಿಳೆಯರ ಕಣ್ಣೀರು ಆರ್ ಆರ್ ನಗರ ಉಪ ಚುನಾವಣೆಯ ಫಲಿತಾಂಶವನ್ನು ಬದಲಿಸಲಿದೆಯಾ? ಅದನ್ನು ಅರಿಯಲು ಚುನಾವಣೆ ಫಲಿತಾಂಶ ಬರುವವರೆಗೆ ಕಾಯ ಬೇಕಾಗಿದೆ.

English summary
The RR Nagar by-election has had an explosive turning point, with the late IAS officer DK Ravi's mother Gauramma's entry. With only one day to go to the polls, the entry of Gowramma's could change the direction the entire election. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X