ಬೆಂಗಳೂರು: ರೌಡಿ ಶೀಟರ್ ವಾಟರ್ ಮಂಜನ ಬರ್ಬರ ಹತ್ಯೆ
ಬೆಂಗಳೂರು, ಜೂನ್ 21: ಹಾಡುಹಗಲೇ ಜನ ಓಡಾಡುವ ಸಾರ್ವಜನಿಕ ಸ್ಥಳದಲ್ಲೇ ರೌಡಿ ಶೀಟರ್ ಆಗಿದ್ದ ವಾಟರ್ ಮಂಜ ಎಂಬಾತನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.
ಘಟನೆಯು ಹಳೆ ಮದ್ರಾಸ್ ರಸ್ತೆಯ ಹೆವೆನ್ ಹೊಟೆಲ್ ಬಳಿ ನಡೆದಿದ್ದು, ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ವಾಟರ್ ಮಂಜನನ್ನು ಲಾಂಗು ಮಚ್ಚುಗಳಿಂದ ಮನಸೋಇಚ್ಛೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮೃತ ವಾಟರ್ ಮಂಜನು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈತನ ಹಲವಾರು ಪ್ರಕರಣಗಳು ದಾಖಲಾಗಿವೆ. ಹಳೆ ವೈಷಮ್ಯದ ಕಾರಣ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಕೆ.ಆರ್.ಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆಯನ್ನೂ ಮಾಡಲಾಗುತ್ತಿದ್ದು, ಆರೋಪಿಗಳನ್ನು ಹಿಡಿಯುವ ಭರವಸೆ ನೀಡಿದ್ದಾರೆ. ರೌಡಿ ಶೀಟರ್ ವಾಟರ್ ಮಂಜನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳಿಸಲಾಗಿದೆ.












Click it and Unblock the Notifications