• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೈಲಿನಿಂದ ಬಂದ ಒಂದೇ ವಾರಕ್ಕೆ ಡ್ರ್ಯಾಗರ್ ನಿಂದ ಹಲ್ಲೆ

|

ಬೆಂಗಳೂರು, ಜನವರಿ 18: ಜೈಲಿನಿಂದ ಬಿಡುಗಡೆಯಾಗಿ ಒಂದು ವಾರ ಕಳೆಯುವ ಡ್ರಾಗರ್ ನಿಂದ ಚುಚ್ಚಿ ವ್ಯಕ್ತಿಯ ಹತ್ಯೆಗೆ ಯತ್ನಿಸಿದ ರೌಡಿಶೀಟರ್ ಕಾಲಿಗೆ ಗಿರಿನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಗೊಣ್ಣೆವಿಜಿ ಎಂಬ ಕಿರಾತಕ ರೌಡಿ ಗುಂಡೇಟು ತಿಂದ ರೌಡಿ ಶೀಟರ್. ಸುಮಾರು ಹದಿನೆಂಟು ಕೊಲೆ, ಕೊಲೆ ಯತ್ನ, ಬೆದರಿಕೆ ಪ್ರಕರಣ ಎದುರಿಸುತ್ತಿರುವ ವಿಜಯ್ ಕುಮಾರ್ ಅಲಿಯಾಸ್ ಗೊಣ್ಣೆ ವಿಜಿ ಜೈಲಿಗೆ ಹೋಗಿದ್ದ. ಒಂದು ವಾರದ ಹಿಂದಷ್ಟೇ ಜಾಮೀನು ಮೇಲೆ ಬಿಡುಗಡೆಯಾಗಿ ಹೊರಗೆ ಬಂದಿದ್ದ. ಒಂದು ವಾರ ಕಳೆಯುವಷ್ಟರಲ್ಲಿ ವ್ಯಕ್ತಿಯೊಬ್ಬರಿಗೆ ಡ್ರ್ಯಾಗರ್ ನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಕುರಿತು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರೋಡ್‌ನಲ್ಲಿ ವ್ಹೀಲಿಂಗ್ ಮಾಡುವ ಜತೆಗೆ ಸಾರ್ವಜನಿಕರನ್ನು ಅಡ್ಡಗಟ್ಟಿ ಚಾಕುವಿನಿಂದ ಹೆದರಿಸಿ ಸುಲಿಗೆ ಮಾಡುತ್ತಿದ್ದ. ಜೈಲಿನಿಂದ ಬಿಡುಗಡೆಯಾಗಿದ್ದ ಗೊಣ್ಣೆ ವಿಜಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

   karkala , nippani , ಬೆಳಗಾವಿ ಮಹಾರಾಷ್ಟ್ರ ಗೆ ಸೇರಬೇಕಂತೆ !! | Oneindia Kannada

   ಭಾನುವಾರ ರಾತ್ರಿ ಆರೋಪಿ ವೀರಭದ್ರನಗರ ಬಳಿ ಇರುವ ಖಚಿತ ಮಾಹಿತಿ ದೊರೆತಿತ್ತು. ಗಿರಿನಗರ ಸಬ್‌ ಇನ್‌ಸ್ಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ ಬಂಧನಕ್ಕೆ ತೆರಳಿದಾಗ, ಗೊಣ್ಣೆ ವಿಜಿ ಡ್ರ್ಯಾಗರ್ ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪಿಎಸ್ಐ ಆತ್ಮ ರಕ್ಷಣೆಗಾಗಿ ಪಿಎಸ್ಐ ವಿನಯ್ ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡು ಬಿದ್ದು ಕುಸಿದು ಬಿದ್ದ ರೌಡಿ ಶೀಟರ್ ಗೊಣ್ಣೆ ವಿಜಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಪೊಲೀಸ್ ಕಾನ್‌ಸ್ಟೇಬಲ್ ಕೂಡ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   English summary
   Bengaluru: Rowdy sheeter stabbing a man was shot during a police chase in Sunday night. know more...
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X