ರೂಂಮೇಟ್ ಕೊಂದು ಸಂಪ್ ನಲ್ಲಿ ಹಾಕಿ ಪರಾರಿಯಾದ ದೋಸ್ತ್
ಬೆಂಗಳೂರು, ಜನವರಿ 06: ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿ ನೀರಿನ ಸಂಪ್ ನಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಅಶೋಕ ನಗರದಲ್ಲಿ ನಡೆದಿದೆ.
ಮೃತ ಯುವಕ ಹಾಗೂ ಆರೋಪಿ ಇಬ್ಬರೂ ರೂಂಮೇಟ್ ಗಳಾಗಿದ್ದರು. ಇವರಿಬ್ಬರ ನಡುವೆ ಜಗಳವಾಗಿ ಮಿಸ್ಬಾ ಹುಸೇನ್ ಲಷ್ಕರ್ (20) ಎಂಬಾತನನ್ನು ಕೊಲೆ ಮಾಡಲಾಗಿದೆ. ಮಿಸ್ಬಾ, ವಿಠಲ್ ಮಲ್ಯ ರಸ್ತೆಯ ಆದರ್ಶ ಡೆವಲಪರ್ಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಜನವರಿ 2ರಿಂದಲೂ ಈತ ನಾಪತ್ತೆಯಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಬುಧವಾರ ಮಿಸ್ಬಾ ಮನೆಯ ಕಟ್ಟಡದಲ್ಲಿನ ಸಂಪ್ ನಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಿದ ಸ್ನೇಹಿತ, ನೀರಿನ ಸಂಪ್ ಗೆ ದೇಹವನ್ನು ಹಾಕಿ ಕಾಣೆಯಾಗಿದ್ದು ಪೊಲೀಸರ ಗಮನಕ್ಕೆ ಬಂದಿದೆ. ಸಿಡಿಆರ್ ಚೆಕ್ ಮಾಡಿದಾಗ ಆರೋಪಿ ಅಸ್ಸಾಂನಲ್ಲಿರುವುದು ತಿಳಿದುಬಂದಿದೆ.

ಅಸ್ಸಾಂ ಪೊಲೀಸರಿಗೆ ಬೆಂಗಳೂರಿನ ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಯನ್ನು ಅಲ್ಲಿ ಬಂಧಿಸಲಾಗಿದೆ.
Recommended Video
ದಿಢೀರ್ ಅನಾರೋಗ್ಯದ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ DV Sadananda Gowda | Oneindia Kannada












Click it and Unblock the Notifications