3,000 ಉಳಿಸಲು ಹೋಗಿ ಸಿಕ್ಕಿಬಿದ್ದ ರಿಯಾಜ್ ಅಹ್ಮದ್ ಸಯೀದಿ!
ಬೆಂಗಳೂರು, ಜ.12 : ದುಬೈಗೆ ಹಾರಲು ಸಿದ್ಧವಾಗಿದ್ದ ಶಂಕಿತ ಉಗ್ರ ರಿಯಾಜ್ ಅಹ್ಮದ್ ಸಯೀದಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ದುಡ್ಡು ಉಳಿಸಲು ಹೋದ ಸಯೀದಿ ಪೊಲೀಸರ ಕೈಗೆ ಸಿಕ್ಕಿಬಿದ್ದದ್ದೇ ಒಂದು ಕಥೆ ಅದರ ವಿವರ ಇಲ್ಲಿದೆ ನೋಡಿ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿ ನಿವಾಸಿ ರಿಯಾಜ್ ಅಹ್ಮದ್ ಸಯೀದಿ (32)ಯನ್ನು ಶನಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ವಿಮಾನವೇರಲು ತೆರಳುತ್ತಿದ್ದಾಗ ಸಿಸಿಬಿ ಪೊಲೀಸರು ಮಂಗಳೂರು ಪೊಲೀಸರ ನೆರವಿನೊಂದಿಗೆ ಬಂಧಿಸಿದರು. [ಭಟ್ಕಳ ಮೂಲದ ನಾಲ್ಕನೇ ಶಂಕಿತ ಉಗ್ರ ಬಲೆಗೆ]

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಯೀದಿ ಮೂರು ದಿನಗಳ ಹಿಂದೆ ದುಬೈ ವಿಮಾನವೇರಬೇಕಿತ್ತು. ಆದರೆ, ಟ್ರಾವೆಲ್ ಎಜೆಂಟ್ ಮಾತು ಕೇಳಿ ಶನಿವಾರ ದುಬೈಗೆ ಹಾರಲು ಸಜ್ಜಾದ ರಿಯಾಜ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. [ಮೂವರು ಶಂಕಿತ ಉಗ್ರರಲ್ಲಿ ಒಬ್ಬ ಎಂಬಿಎ ವಿದ್ಯಾರ್ಥಿ]
ಟ್ರಾವೆಲ್ ಏಜೆಂಟ್ ಮಾತು ನಂಬಿದ : ಶನಿವಾರ ರಾತ್ರಿ ದುಬೈಗೆ ತೆರಳುವುದಕ್ಕಾಗಿ ಭಟ್ಕಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಿಯಾಜ್ ರಾತ್ರಿ 11.20ಕ್ಕೆ ಹೊರಡುವ ಜೆಟ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದ.
ಆದರೆ, ಮೂರು ದಿನಗಳ ಹಿಂದೆ ರಿಯಾಜ್ ದುಬೈಗೆ ಪ್ರಯಾಣ ಬೆಳೆಸಬೇಕಿತ್ತು. ದುಬೈಗೆ ತೆರಳಲು ತುರ್ತು ಟಿಕೆಟ್ ಬುಕ್ ಮಾಡಲು ಹೋಗಿದ್ದ ರಿಯಾಜ್‌ಗೆ ಟ್ರಾವೆಲ್ ಏಜೆಂಟ್ ಮೂರು ದಿನಗಳು ತಡೆದರೆ 3000 ರೂ. ರಿಯಾಯಿತಿ ದೊರೆಯುತ್ತದೆ ಎಂದು ಹೇಳಿದ್ದ. ಮೂರು ಸಾವಿರ ಉಳಿಸಲು ಹೋದ ರಿಯಾಜ್, ಪ್ರಯಾಣವನ್ನು ಮುಂದೂಡಿ ಶನಿವಾರ ಹೊರಟಿದ್ದ ಅಷ್ಟರಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರಿಯಾಜ್ ತನಿಖೆ ನಡೆಯುತ್ತಿದೆ : ದುಬೈನಲ್ಲಿ ಕೆಲಸ ಮಾಡುತ್ತಿದ್ದ ರಿಯಾಜ್ ಅಹ್ಮದ್ ಸಯೀದಿ ರಜೆ ಮೇಲೆ ಭಟ್ಕಳಕ್ಕೆ ಬಂದಿದ್ದ. ಆತನ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ. ಸಯೀದಿಗೆ ಇತರ ದೇಶಗಳಲ್ಲಿರುವ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದುವರೆಗಿನ ತನಿಖೆಯಿಂದ ಕಳೆದ ವಾರ ಭಟ್ಕಳದಲ್ಲಿ ಬಂಧಿಸಿದ ಮೂವರು ಉಗ್ರರಿಗೂ ಮತ್ತು ರಿಯಾಜ್‌ಗೂ ಸಂಪರ್ಕವಿತ್ತು ಎಂದು ತಿಳಿದುಬಂದಿದೆ. ರಿಯಾಜ್ ಸಹ ಅನ್ಸರ್-ಉಲ್-ತವಹಿದ್ ಎಂಬ ಸಂಘಟನೆಯ ಮುಖ್ಯಸ್ಥ ಸುಲ್ತಾನ್ ಅಹಮದ್ ಅರ್ಮರ್ ಎಂಬಾತನ ಸೂಚನೆಯಂತೆ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications