ವರ್ತೂರು ಕೆರೆಯಲ್ಲಿ ಮತ್ತೆ ಭುಗಿಲೆದ್ದ ನೊರೆ: ಸುತ್ತಲಿನ ನಿವಾಸಿಗಳಿಗೆ ಆತಂಕ

ಬೆಂಗಳೂರು, ಅಕ್ಟೋಬರ್ 6: ಬೆಳ್ಳಂದೂರು ಕೆರೆ ಆಯ್ತು ಇದೀಗ ಮತ್ತೆ ವರ್ತೂರು ಕೆರೆ ಸರದಿ, ಬೆಂಗಳೂರಲ್ಲಿ ಸುರಿಯುತ್ತಿರುವ ಮಳೆಗೆ ವರ್ತೂರು ಕೆರೆಯಲ್ಲಿ ನೊರೆ ಬರಲಾರಂಭಿಸಿದೆ.

ಹೀಗೆ ಹೋದರೆ ಒಂದು ದಿನ ನಗರದಲ್ಲಿರುವ ಎಲ್ಲಾ ಕೆರೆಗಳಲ್ಲಿ ನೊರೆ ಉತ್ಪತ್ತಿಯಾಗುವುದರಲ್ಲಿ ಸಂಶಯವಿಲ್ಲ, ಕೆರೆಯ ಕೋಡಿಗಳಲಲ್ಇ ನೊರೆಯ ಬುಗ್ಗೆಗಳು ಹಾರುತ್ತಿದ್ದು, ಅಕ್ಕಪಕ್ಕದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೂ ತೊಂದರೆ ಉಂಟಾಗಿದೆ.

460 ಎಕರೆ ಪ್ರದೇಶದಲ್ಲಿರುವ ಕೆರೆ, ಒತ್ತುವರಿ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೀಗ ಬೆಳ್ಳಂದೂರು ಕೆರೆಗೆ ಹೊಂದಿಕೊಂಡಂತಿರುವ ಈ ಕೆರೆ ಆಗಾಗ ನೊರೆ ಸಮಸ್ಯೆ ಮೂಲಕ ನಗರಾದ್ಯಂತ ಸುದ್ದಿಯಾಗುತ್ತಿತ್ತು. ರಾಸಾಯನಿಕ ತ್ಯಾಜ್ಯ ಸೇರ್ಪಡೆಯಿಂದಾಗಿ ಕೆರೆಯ ಒಡಲು ವಿಷವಾಗುತ್ತಿದ್ದರೂ, ಸ್ಥಳೀಯ ಪ್ರಾಧಿಕಾರಗಳು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ ಎನ್ನುವುದು ಬೇಸರದ ಸಂಗತಿ.

Residents worried toxic foam spews in Varthur lake again

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವುದಕ್ಕೆ ವರ್ತೂರು ಕೆರೆ ಮೂಲಕವೇ ಸಣ್ಣ ನೀರಾವರಿ ಇಲಾಖೆ ಪೈಪ್ ಲೈನ್ ಅಳವಡಿಸಿದೆ. ಇಲ್ಲಿಂದ ಸಾಗುವ ನೀರು ಕೆಸಿ ವ್ಯಾಲಿಯ ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗಲಿದೆ. ಕೈಗಾರಿಕೆಗಳಿಂದ ಹರಿಯುವ ತ್ಯಾಜ್ಯ ತಡೆದಲ್ಲಿ ಸ್ವಲ್ಪ ಮಟ್ಟಿಗೆ ನೊರೆ ಸಮಸ್ಯೆ ನಿಯಂತ್ರಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಮಳೆ ಬರುತ್ತಿರುವುದರಿಂದ ನೊರೆ ಪ್ರಮಾಣ ಹೆಚ್ಚಿದೆ, ಕಾರ್ಖಾನೆಗಳಿಂದ ಬರುವ ವಿಷಕಾರಕ ಅಂಶಗಳು ಎಲ್ಲಿಯವರೆಗೆ ಕರೆಯನ್ನು ಸೇರುತ್ತವೆಯೋ ಅಲ್ಲಿಯವರೆಗೂ ಈ ನೊರೆ ಹೀಗೆಯೇ ಮುಂದುವರೆಯಲಿದೆ. ಆದರೆ ಇದರಿಂದ ಸುತ್ತಮುತ್ತಲು ವಾಸಿಸುವ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+