ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾದಚಾರಿ ಮಾರ್ಗ ದುರಸ್ಥಿಗೊಳಿಸುವಂತೆ ಶಾಸಕರಿಗೆ ಸಮಯದ ಸವಾಲೆಸೆದ ಸ್ಥಳೀಯ ನಿವಾಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 29 : ಬೆಂಗಳೂರಿನ ಹಲವು ರಸ್ತೆಗಳಲ್ಲಿರುವ ಪಾದಚಾರಿ ಮಾರ್ಗಗಳು ಸರಿಯಾಗಿಲ್ಲದೆ ಪಾದಚಾರಿಗಳು ರಸ್ತೆ ಬದಿ ನಡೆದು ಹೋಗಲು ಪರದಾಡುವಂತ ಪರಿಸ್ಥಿತಿ ಇದೆ. ಅದರಂತೆ ಈಜಿಪುರದ ಸಿಗ್ನಲ್‌ ಬಳಿ ಇರುವ ಪಾದಾಚಾರಿ ಮಾರ್ಗ ಹಾಳಾಗಿದೆ. ಹೀಗಾಗಿ ಸ್ಥಳೀಯ ನಿವಾಸಿಯೊಬ್ಬರು ದುರಸ್ಥಿ ಮಾಡಿಸುವಂತೆ ಶಾಸಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ವಿನಂತಿಸಿಕೊಂಡಿರುವ ಸ್ಥಳೀಯ ನಿವಾಸಿ ಅನಿಲ್ ಶೆಟ್ಟಿ ಎಂಬುವವರು "ನಗರದ ಈಜಿಪುರ ಸಿಗ್ನಲ್‌ ಬಳಿಯ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಹಾಳಾಗಿದ್ದು, ಇದನ್ನು ತತ್‌ಕ್ಷಣ ದುರಸ್ಥಿ ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಅಲ್ಲದೆ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಬಿಟಿಎಂ ಲೇಔಟ್‌ನ ಶಾಸಕರಾದ ರಾಮಲಿಂಗ ರೆಡ್ಡಿ ಅವರು ಈ ಬಗ್ಗೆ ಗಮನ ಹರಿಸಬೇಕಿದೆ. ಇದೇ ರೀತಿ ಕ್ಷೇತ್ರದಾದ್ಯಂತ ಪಾದಚಾರಿ ಮಾರ್ಗಗಳು ದುಸ್ಥಿಯಲ್ಲಿದ್ದು, ಶಾಸಕರು ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೊತೆ ಸಭೆ ನಡೆಸಿ ಈ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ," ಮನವಿ ಮಾಡಿಕೊಂಡಿದ್ದಾರೆ.

Residents Urge MLA and BBMP to Fix Footpath Damaged Near Ejipura Signal

ಅಲ್ಲದೆ "ಬಿಟಿಎಂ ಕ್ಷೇತ್ರದ ನಿವಾಸಿಗಳೇ ದಿನ ಲೆಕ್ಕ ಹಾಕಿ, ಎಷ್ಟು ದಿನದಲ್ಲಿ ಈಜಿಪುರದ ಈ ಪಾದಚಾರಿ ಮಾರ್ಗ ರಿಪೇರಿ ಆಗುತ್ತದೆ ನೋಡೊಣ. ಎಂಎಲ್‌ಎ ರಾಮಲಿಂಗರೆಡ್ಡಿ ಸಾಹೇಬರೇ ಟೈಮ್ ಸ್ಟಾರ್ಟ್ಸ್ ನೌ," ಅಂತ ಬರೆದು ಶಾಸಕರಿಗೆ ಸ್ಥಳೀಯ ನಿವಾಸಿ ಸವಾಲ್ ಹಾಕಿದ್ದಾರೆ.

Residents Urge MLA and BBMP to Fix Footpath Damaged Near Ejipura Signal

ನಗರದ ಹಲವು ಕಡೆ ಇದೇ ರೀತಿ ಸಮಸ್ಯೆಗಳಿದ್ದು, ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಮನ ಹರಿಸಬೇಕಿದೆ. ಸದ್ಯಕ್ಕೆ ಈಜಿಪುರದಲ್ಲಿರುದ ಪಾದಚಾರಿ ಮಾರ್ಗದ ಬಗ್ಗೆ ಶಾಸಕರು ಗಮನ ಹರಿಸಿ ಎಷ್ಟು ದಿನಗಳಲ್ಲಿ ಸರಿ ಪಡಿಸುತ್ತಾರೋ ಅಂತ ಕಾದು ನೋಡಬೇಕಿದೆ.

English summary
Residents Urge BTM Layout MLA Ramalinga Reddy and BBMP to Fix Footpath Damaged Near Ejipura Signal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X