Get Updates
Get notified of breaking news, exclusive insights, and must-see stories!

Ejipura flyover: ರಸ್ತೆ ಇಲ್ಲ, ವೋಟು ಇಲ್ಲ; ಈಜಿಪುರ ಮೇಲ್ಸೇತುವೆಗಾಗಿ ಕೋರಮಂಗಲ ನಿವಾಸಿಗಳ ಪ್ರತಿಭಟನೆ

ಉತ್ತಮ ರಸ್ತೆ ಸಂಪರ್ಕಕ್ಕಾಗಿ ಆಗ್ರಹಿಸಿ ರಸ್ತೆ ಇಲ್ಲದಿದ್ದರೇ ವೋಟು ಇಲ್ಲ ಎಂದು ಕೋರಮಂಗಲದ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು, ಜನವರಿ. 30: ಈಜಿಪುರದಿಂದ ಕೇಂದ್ರೀಯ ಸದನ ಮೇಲ್ಸೇತುವೆ ಮತ್ತು ಈಜಿಪುರ-ಅಗರ ಸಂಪರ್ಕ ರಸ್ತೆ ಕಾಮಗಾರಿ ವಿಳಂಬವನ್ನು ವಿರೋಧಿಸಿ ಕೋರಮಂಗಲ ಸ್ಥಳೀಯ ನಿವಾಸಿಗಳ ಗುಂಪು ಈಜಿಪುರ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದೆ.

ಈಜಿಪುರ ಜಂಕ್ಷನ್‌ನ ವಿವಿಧ ಹಂತಗಳಲ್ಲಿ ನಿಂತ ಪ್ರತಿಭಟನಾಕಾರರು ಕೈಗಳಲ್ಲಿ 'ರಸ್ತೆ ಇಲ್ಲ, ಮತ ಇಲ್ಲ', 'ನಮಗೆ ರಸ್ತೆ ಬೇಕು', 'ಮೇಲ್ಸೇತುವೆ ಬೇಕು' ಎಂಬ ಭಿತ್ತಿಪತ್ರಗಳನ್ನು ಹಿಡಿದು, ಸರ್ಕಾರದ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದ್ದಾರೆ.

ಪ್ರತಿಭಟನಾಕಾರರು ಇನ್ನರ್ ರಿಂಗ್ ರೋಡ್‌ಗೆ ಔಟರ್ ರಿಂಗ್ ರೋಡ್ ಜೊತೆಗೆ ಸಂಪರ್ಕ ಕಲ್ಪಿಸಿ ಮತ್ತು 10 ವರ್ಷಗಳ ಹಳೆಯ ಟ್ರಾಫಿಕ್ ಡೇಟಾದ ಆಧಾರದ ಮೇಲಿನ ಈಜಿಪುರ ಫ್ಲೈಓವರ್ ಅನ್ನು ಬಿಡಿ ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.

Residents Protest Against Govt Demanding Proper Road Connectivity to Koramangala

"ಅಗರ ಭಾಗದಲ್ಲಿ ಈಜಿಪುರ-ಅಗರ ಸಂಪರ್ಕ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ ಎಂದು ತೋರಿಸಲಾಗಿದೆ. ಹಾಗಾಗಿ ರಸ್ತೆ ಇಲ್ಲದಿದ್ದರೂ ಬೃಹತ್ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದ್ದು, ಪ್ರವೇಶ ಮತ್ತು ನಿರ್ಗಮನ ಒಂದೇ ಒಂದು ಹಳೆಯ, ಕಿರಿದಾದ ವಸತಿ ರಸ್ತೆಯಿಂದ ನಡೆಯುತ್ತಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೆ ಟ್ರಾಫಿಕ್ ಸರ್ಜಾಪುರದ ಕಡೆಗೆ ಡೈವರ್ಟ್ ಆಗುತ್ತಿತ್ತು. ಆಗ ಇಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿರಲಿಲ್ಲ' ಎಂದು ಕೋರಮಂಗಲದ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಶ್ವನಾಥ್ ಆರೋಪಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಜಿಪುರ-ಕೇಂದ್ರೀಯ ಸದನ್ ಮೇಲ್ಸೇತುವೆ ಯೋಜನೆಯನ್ನು ಸಿಗ್ನಲ್ ಮುಕ್ತ ಸಂಚಾರವನ್ನು ಸಕ್ರಿಯಗೊಳಿಸಲು ಮತ್ತು ಕೋರಮಂಗಲದ ಮೂಲಕ ಹಾದು ಹೋಗುವ 100 ಅಡಿ ಜನನಿಬಿಡ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಕೈಗೆತ್ತಿಕೊಂಡಿದೆ.

ಈ ಯೋಜನೆಯ ನಿರ್ಮಾಣವು 2017 ರಲ್ಲಿ ಪ್ರಾರಂಭವಾಗಿದೆ. ಯೋಜನೆಯನ್ನು ಪೂರ್ಣಗೊಳಿಸಲು ನವೆಂಬರ್ 2019 ಎಂದು ನಿಗದಿಪಡಿಸಲಾಗಿತ್ತು. ಆದರೆ, ಹಲವಾರು ವಿಳಂಬಗಳ ನಂತರ, ಕರ್ನಾಟಕ ಹೈಕೋರ್ಟ್ ಸೂಚನೆಯಂತೆ, ಮಾರ್ಚ್ 2022 ರಲ್ಲಿ ರಾಜ್ಯ ಸರ್ಕಾರವು ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ನೀಡಲಾಗಿದ್ದ ನಿರ್ಮಾಣ ಗುತ್ತಿಗೆಯನ್ನು ಹಿಂತೆಗೆದುಕೊಂಡಿದೆ.

ಸದ್ಯ ಬಿಬಿಎಂಪಿಯು ಈ ತಿಂಗಳ ಆರಂಭದಲ್ಲಿ 144 ಕೋಟಿ ರೂಪಾಯಿಗಳಿಗೆ ಹೊಸ ಟೆಂಡರ್ ಅನ್ನು ಕರೆದಿದ್ದು 2024ರ ಮಾರ್ಚ್‌ವರೆಗೆ ಗಡುವನ್ನು ವಿಸ್ತರಿಸಿದೆ.

ಹೀಗಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಇನ್ನು ಕಾಯಬೇಕಿದ್ದು, ಇದರಿಂದ ಕಷ್ಟಪಡುತ್ತಿರುವುದು ಮಾತ್ರ ಸ್ಥಳೀಯ ನಿವಾಸಿಗಳು. ಫ್ಲೈಓವರ್ ಬ್ಯಾರಿಕೇಡ್‌ಗಳ ನಡುವಿನ ಖಾಲಿ ಜಾಗವನ್ನು ಈಗಾಗಲೇ ಕಸ ಸುರಿಯಲು ಬಳಸಲಾಗುತ್ತಿದೆ. ಫ್ಲೈಓವರ್‌ನ ಸುಮಾರು 2 ಕಿ.ಮೀ.ವರೆಗೆ ಸಂಪೂರ್ಣ ಡಂಪ್ ಯಾರ್ಡ್ ಆಗಿದೆ. ಇದರಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಸುರಿಯುವುದು ಕೂಡ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಹಲವು ಸಿಗ್ನಲ್‌ಗಳು ಮತ್ತು ಸಂಚಾರ ದಟ್ಟಣೆಯ ರಸ್ತೆಗಳನ್ನು ಬೈಪಾಸ್ ಮಾಡುವ ಉದ್ದೇಶಿತ 3 ಕಿಮೀ ಉದ್ದದ ಈಜಿಪುರ-ಅಗರ ಸಂಪರ್ಕ ರಸ್ತೆಯು ಕೋರಮಂಗಲದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬೇಕಿತ್ತು. ಬೆಂಗಳೂರಿನ ಮಾಸ್ಟರ್ ಪ್ಲಾನ್ 2031 ರಲ್ಲಿ ಈ ರಸ್ತೆಯನ್ನು ಉಲ್ಲೇಖಿಸಿದ್ದರೂ, ಸ್ಥಳೀಯರ ಪ್ರಕಾರ ರಸ್ತೆಗೆ ಅಗತ್ಯವಿರುವ ಭೂಮಿಯನ್ನು ಬಿಬಿಎಂಪಿ ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ.

ಆಗಸ್ಟ್ 2018 ರಲ್ಲಿ, ಅಂದರೆ ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ, ಮಾಜಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಜಿಪುರ-ಅಗರ ರಸ್ತೆಗೆ 5.34 ಎಕರೆ ಸೇರಿದಂತೆ ಬೆಂಗಳೂರಿನ 10 ಯೋಜನೆಗಳಿಗೆ 16.5 ಎಕರೆ ರಕ್ಷಣಾ ಆಸ್ತಿಯನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ರಾಜ್ಯ ಸರ್ಕಾರವು ರಕ್ಷಣಾ ಸಚಿವಾಲಯಕ್ಕೆ ಪರ್ಯಾಯವಾಗಿ ಸಮಾನ ಮೌಲ್ಯದ ಭೂಮಿಯನ್ನು ನೀಡಬೇಕಾಗಿತ್ತು, ಆದರೆ ರಕ್ಷಣಾ ಅಧಿಕಾರಿಗಳಿಗೆ ಉಪಯುಕ್ತವಾದ ಪರ್ಯಾಯ ಭೂಮಿಯನ್ನು ಒದಗಿಸಲು ಬಿಬಿಎಂಪಿ ಎರಡು ಬಾರಿ ವಿಫಲವಾಗಿದೆ. ಬಿಬಿಎಂಪಿಯು 282 ಕೋಟಿ ರೂಪಾಯಿ ಮೌಲ್ಯದ ಭೂಮಿಗಿಂತ ಕಡಿಮೆ ಮೌಲ್ಯದ ಅನುಪಯುಕ್ತ ಭೂಮಿಯನ್ನು ಒದಗಿಸುತ್ತಿದೆ ಎಂಬ ಕಾರಣಕ್ಕಾಗಿ ರಕ್ಷಣಾ ಅಧಿಕಾರಿಗಳು ಬಿಬಿಎಂಪಿ ನೀಡಿದ ಭೂಮಿಯನ್ನು ತಿರಸ್ಕರಿಸಿದ್ದಾರೆ.

(ಮಾಹಿತಿ ಕೃಪೆ: ದಿ ನ್ಯೂಸ್ ಮಿನಿಟ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+