Bengaluru Rain: ಬೆಂಗಳೂರಿನಲ್ಲಿ ತೃಪ್ತಿ ನೀಡದ ಮಳೆ: ನಿವಾಸಿಗಳಿಂದ ಬೇಸರ- ವಿಡಿಯೋ ವೈರಲ್!
ಬೆಂಗಳೂರು ಮೇ 3: ಗುರುವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಬೆಂಗಳೂರಿನಲ್ಲಿ ಮಳೆಯಾಗಿದೆ. ಆದರೆ ಬೆಂಗಳೂರಿನ ಬಹುತೇಕ ಕಡೆ ಮಳೆ ಆಗೇ ಇಲ್ಲ. ಒಂದೆಡೆ ಮಳೆಯಾದರೆ ಇನ್ನೊಂದೆಡೆ ಜನ ಮಳೆ ಹನಿಯನ್ನು ನೋಡಿಯೇ ಇಲ್ಲ. ಹೀಗಾಗಿ ಬಹುತೇಕ ಕಡೆ ಮಳೆ ಸಿಲಿಕಾನ್ ಸಿಟಿ ಮಂದಿಗೆ ತೃಪ್ತಿ ನೀಡಿಲ್ಲ.
ಹೌದು... ಸಾಮಾಜಿಕ ಮಾದ್ಯಮದಲ್ಲಿ ಕಳೆದ ದಿನ (ಮೇ 2) ಬೆಂಗಳೂರಿನಲ್ಲಿ ಮಳೆಯಾದ ವಿಡಿಯೋ ಹಾಗೂ ಫೋಟೋಗಳೇ ತುಂಬಿಕೊಂಡಿವೆ. ಈ ವಿಡಿಯೋ ಹಾಗೂ ಫೋಟೋಗಳಿಗೆ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದು ತಾವಿರವ ಸ್ಥಳದಲ್ಲಿ ಮಳೆಯೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಮಳೆ ತೃಪ್ತಿ ನೀಡಿಲ್ಲ ಎಂದಿದ್ದಾರೆ.

ಬೆಂಗಳೂರಿಗೆ ಸುಮಾರು ಆರು ತಿಂಗಳ ನಂತರ ನಗರದ ಬಹುತೇಕ ಕಡೆ ಗುರುವಾರ ಸಂಜೆ, ಗುಡುಗು-ಮಿಂಚು ಸಹಿತ ಹಗುರವಾಗಿ ಮಳೆಯಾಗಿದೆ. ಬನಶಂಕರಿ, ಹಂಪಿನಗರ, ವಿಜಯನಗರ, ರಾಜರಾಜೇಶ್ವರಿನಗರ ಹಾಗೂ ನಾಯಂಡಹಳ್ಳಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ನಹರದ ಬಹುತೇಕ ಪ್ರದೆಶಗಳಲ್ಲಿ ಸುಮಾರು ಹತ್ತು ನಿಮಿಷ ಸಾಧಾರಣ ಮಳೆಯಾಗಿದೆ.
Rains finally arrived at Namma Bengaluru this is first Rain of the season giving some kind of relief from the heat wave. Bengaluru record as much as 39 degree which is second highest temperature in last 5 Decades. pic.twitter.com/mlKdSDi9LT
— Anil Bharadwaj (@anilbharadwaj99) May 2, 2024
ಇಡೀ ದಿನ ನಗರದಲ್ಲಿ ಬಿಸಿಲು ಹೆಚ್ಚಾಗಿತ್ತು. ಸಂಜೆ ವೇಳೆಗೆ ಮೋಡ ಕವಿದು ಮಳೆಯ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು 7.30ರ ವೇಳೆಯಲ್ಲಿ ನಗರದಲ್ಲಿ ಮಳೆಯಾಯಿತು. ಗರುಡಾಚಾರ್ಯಪಾಳ್ಯ, ಎಚ್.ಗೊಲ್ಲಹಳ್ಳಿ, ವಿಶ್ವೇಶಪುರ, ಕಾಟನ್‌ಪೇಟೆ, ಸಂಪಂಗಿರಾಮನಗರ, ಪುಲಕೇಶಿನಗರ, ಹೆಬ್ಬಾಳ, ಕುಶಾಲನಗರ, ವಿದ್ಯಾರಣ್ಯಪುರ, ಜಕ್ಕೂರು, ಹೂಡಿ, ವಿಜ್ಞಾನನಗರ, ಅರೆಕೆರೆ, ಬೆಳ್ಳಂದೂರು, ಚೊಕ್ಕಸಂದ್ರಗಳಲ್ಲಿ 0.5 ಮಿ.ಮೀನಿಂದ 1.5 ಮಿ.ಮೀವರೆಗೆ ಮಳೆಯಾಗಿದೆ. ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಳೆ ವಿಡಿಯೋಗಳಿಗೆ ಜನರ ಪ್ರತಿಕ್ರಿಯೆ ಏನು ಎಂದು ತಿಳಿಯೋಣ.
And the Rain is Back in Bengaluru ..
— Arif (@mdarifkhan87) May 2, 2024
Thunder, lightning and Rain..
Back to the familiar weather
~ Nature to the rescue
~ Manifesting more of these
~ Bangalore Rains pic.twitter.com/IAJRAzihfT
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ:-
"ಕೊನೆಗೂ ನಮ್ಮ ಬೆಂಗಳೂರಿನಲ್ಲಿ ಮಳೆ ಆಯಿತು. ಇದು ಈ ಋತುವಿನ ಮೊದಲ ಮಳೆಯಾಗಿದ್ದು, ಶಾಖದ ಅಲೆಯಿಂದ ಸ್ವಲ್ಪ ಪರಿಹಾರವನ್ನು ನೀಡಿದೆ. ಬೆಂಗಳೂರಿನಲ್ಲಿ 39 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ಕಳೆದ 5 ದಶಕಗಳಲ್ಲಿ ಎರಡನೇ ಅತಿ ಹೆಚ್ಚು ತಾಪಮಾನವಾಗಿದೆ'' ಎಂದು ಬೆಂಗಳೂರು ನಿವಾಸಿ ಅನಿಲ್ ಭಾರದ್ವಾಜ್ ಪೋಸ್ಟ್ ಮಾಡಿದ್ದಾರೆ.
"ದೇವಾನುದೇವತೆಗಳು ನಮ್ಮನ್ನು ನೋಡಿ ನಗುತ್ತಿರುವಂತೆ ತೋರುತ್ತಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ.
"ಇಡೀ ಬೆಂಗಳೂರು ನಗರವನ್ನು ಮಳೆ ಆವರಿಸಿದೆ. ಕೆಆರ್ ಪುರ ಭಾಗದಲ್ಲಿ ತೀವ್ರ ಬಿರುಗಾಳಿ, ಉತ್ತರ ಬೆಂಗಳೂರಿನಲ್ಲಿ ತುಂತುರು ಮಳೆಯಾಗಿದೆ'' ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
''ಬೆಂಗಳೂರಿನಲ್ಲಿ ಮಳೆ ಮರಳಿದೆ... ಬೆಂಗಳೂರಿನಲ್ಲಿ ಪ್ರಕೃತಿ ರಕ್ಷಣೆಗೆ ಗುಡುಗು, ಮಿಂಚು ಮತ್ತು ಮಳೆ ತಂಪಾದ ಹವಾಮಾನಕ್ಕೆ ಹಿಂತಿರುಗಿದೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಮೇ 1 ರ ಬುಧವಾರ ಬೆಳಿಗ್ಗೆ 8:30 ರಿಂದ ಮೇ 2 ರ ಗುರುವಾರ ಬೆಳಿಗ್ಗೆ 8:30 ರ ನಡುವೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಜಿಲ್ಲಾವಾರು ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ದಾಖಲಿಸಿದೆ, ಈ ಸಮಯದಲ್ಲಿ ಬೆಂಗಳೂರು ನಗರವು 41.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ಕಂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 39.1 ಮತ್ತು 38.2 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications