Pavithra Gowda: ನಟ ದರ್ಶನ್‌ನ .. ಪವಿತ್ರಾಗೌಡ ಐಷಾರಾಮಿ ಜೀವನ ಬಹಿರಂಗ- ಪ್ರಕರಣದಲ್ಲಿ ಆ ನಾಯಿ ಕೆಲ್ಸದವನ ಪಾತ್ರವೇನು?

Pavithra Gowda: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲಿದೆ. ಇನ್ನು ಈ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದು, ಇಂದು (ಜೂನ್‌ 16) ಬೆಂಗಳೂರಿನನ ಆರ್‌ಆರ್ ನಗರದಲ್ಲಿರುವ ಅವರ ನಿವಾಸಕ್ಕೆ ಪವಿತ್ರಾಗೌಡರನ್ನು ಕರೆತಂದ ಪೊಲೀಸರು ಸ್ಥಳಮಹಜರು ಮಾಡಿದ್ದಾರೆ. ಈ ವೇಳೆ ಪವಿತ್ರಾ ಗೌಡ ಅವರ ಐಷಾರಾಮಿ ಜೀವನ ಬಹಿರಂಗವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ3 ಆರೋಪಿ ಪವನ್‌ ಹಾಗೂ ಎ1 ಆರೋಪಿ ಪವಿತ್ರಾಗೌಡನನ್ನು ಕೆರೆದುಕೊಂಡು ಹೋಗಿ ಅವರ ಮನೆಯಲ್ಲಿ ಹಾಗೂ ಪಾರ್ಕಿಂಕ್‌ ಸ್ಥಳದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಎ3 ಆರೋಪಿ ಪವನ್‌ ಪವಿತ್ರಾಗೌಡ ಅವರ ಮನೆಯಲ್ಲಿ ಕೆಲಸದವನಾಗಿದ್ದು, ಅಲ್ಲಿನ ನಾಯಿಗಳನ್ನು ನೋಡಿಕೊಳ್ಳುತ್ತಿದ್ದ. ಆದ್ದರಿಂದ ಈತನಿಗೆ ಗ್ರೌಂಡ್‌ ಫ್ಲೋರ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು ಎನ್ನುವ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.

Renukaswamy Murder s A1 Accused Pavitra Gowda s luxurious life revealed by police

ಆಶ್ಚರ್ಯ ಎಂದರೆ ಆಗಾಗ ನಟ ದರ್ಶನ್‌ ಕೂಡ ಈ ಪವಿತ್ರಾಗೌಡ ವಾಸವಾಗಿದ್ದ ಐಷಾರಾಮಿ ಮನೆಗೆ ಪಾರ್ಚುನರ್‌ ಕಾರ್‌ನಲ್ಲಿ ಆಗಮಿಸುತ್ತಿದ್ದರು ಎನ್ನುವ ಮಾಹಿತಿಯೂ ಕೂಡ ತನಿಖೆ ವೇಳೆ ಹೊರಬಿದ್ದಿದೆ. ಪವಿತ್ರಾಗೌಡ ಅವರು ಕಟ್ಟಿದ 3 ಅಂತಸ್ತಿನ ಕಟ್ಟಿದ ಐಷಾರಾಮಿ ಮನೆಯನ್ನೇ ಖರೀದಿಸಿದ್ದರು. 10 ವರ್ಷಗಳಿಂದ ಆರ್‌ಆರ್‌ ನಗರದ ಈ 3 ಪ್ಲೋರ್‌ ಮನೆಯಲ್ಲಿ ಅವರು ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಜೂನ್‌ 8ರಂದು ರೇಣುಕಾಸ್ವಾಮಿ ಕಿಡ್ನಾಪ್‌ಗಾಗಿ ರವಿ ಅವರ ಕಾರನ್ನು ಬಳಕೆ ಮಾಡಲಾಗಿರುವ ಹಿನ್ನೆಲೆ, ಬೆರಳಚ್ಚು ತಜ್ಞರು ರವಿಯ ಕಾರನ್ನು ಜಪ್ತಿಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪ್ರಕರಣದ ಎ8 ಆರೋಪಿ ಚಿತ್ರದುರ್ಗದ ಐನಳ್ಳಿ ಕುರುಬರಹಟ್ಟಿಯಲ್ಲಿರುವ ರವಿ ಮನೆಯಲ್ಲಿಯೂ ಸತತ ಒಂದು ಗಂಟೆಗಳ ಕಾಲ ಪೊಲೀಸರು ಮಹಜರು ನಡೆಸಿದ್ದಾರೆ. ಈ ವೇಳೆ ರವಿ ಪತ್ನಿ ಕಣ್ಣೀರಿಟ್ಟ ಘಟನೆಯೂ ನಡೆದಿದೆ.

ಇನ್ನು ಕೊಲೆಗೂ ಮುನ್ನ ಪವಿತ್ರಾಗೌಡ ರೇಣುಕಾಸ್ವಾಮಿ ಅವರ ಕೆನ್ನೆಗೆ ಚಪ್ಪಲಿಯಿಂದ ಬಾರಿಸಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದ್ದು, ಇದರ ಬೆನ್ನಲ್ಲೇ ಆರ್‌ಆರ್‌​ ನಗರದಲ್ಲಿರುವ ಪವಿತ್ರಾಗೌಡ ನಿವಾಸಕ್ಕೆ ಆಗಮಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಚಪ್ಪಲಿ, ಬಟ್ಟೆ ಸೇರಿದಂತೆ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.

ಇನ್ನು ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶದ ಬಗ್ಗೆ ಪವಿತ್ರಾಗೌಡ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್‌ ಬಳಿ ಹೇಳಿಕೊಂಡಿದ್ದಾಳೆ. ಅಲ್ಲದೇ, ಈ ವಿಚಾರವನ್ನು ದರ್ಶನ್‌ಗೂ ಹೇಳಬೇಡ ಅಂತಲೂ ಹೇಳಿದ್ದಾಳೆ. ಇದನ್ನೂ ಮೀರಿ ಪವನ್‌ ಈ ವಿಚಾರವನ್ನು ನಟ ದರ್ಶನ್‌ ಬಳಿ ಹೇಳಿದ್ದಕ್ಕೆ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+