Darshan Phone: ದರ್ಶನ್ ಮೊಬೈಲ್ ಪರಿಶೀಲನೆಗೆ ಕೋರ್ಟ್ ಅನುಮತಿ: ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶುರುವಾಯ್ತ ಢವಢವ?

Darshan Thoogudeepa Phone: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮತ್ತೊಂದೆಡೆ . ಇಂದು (ಜೂನ್‌ 20) ನಟ ದರ್ಶನ್‌ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಮುಕ್ತಾಯವಾಗಿದ್ದು, ಅವರನ್ನು ಕೋರ್ಟ್‌ಗೆ ಕರೆದೊಯ್ಯಲಾಗಿತ್ತು. ಇನ್ನು ಈ ನಾಲ್ವರು ಆರೋಪಿಗಳಿಗೆ ಕೋರ್ಟ್‌ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ನೀಡಿದೆ. ಮತ್ತೊಂದೆಡೆ ಇವರೆಲ್ಲರ ಮೊಬೈಲ್‌ ವೀಕ್ಷಣೆಗೆ ಅನುಮತಿ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶದ ಕಳುಹಿಸಿದ್ದಾರೆ ಎನ್ನುವ ಕಾರಣಕಗಕೆ ಚಿತ್ರದುರ್ಗ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ನಟ ದರ್ಶನ್‌ ಮತ್ತು ಗ್ಯಾಂಗ್‌ ಅವರನ್ನು ಭೀಕರವಾಗಿ ಕೊಲೆ ಮಾಡಿದೆ ಎನ್ನುವ ಆರೋಪ ಇತ್ತು. ಈಗಾಗಲೇ ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಇಂದು (ಜೂನ್‌ 22) ಕೋರ್ಟ್‌ ಆದೇಶದ ಮೇರೆಗೆ ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ.

Renukaswamy Murder Case Court permission to check Actor Darshan and team mobiles

ಪೊಲೀಸರು ಕೋರ್ಟ್‌ಗೆ ಆರೋಪಿಗಳ ಮೊಬೈಲ್‌ಗಳ ಪರಿಶೀಲನೆಗೆ ಅನುಮತಿ ನೀಡುವಂತೆ ಕೇಳಿತ್ತು. ಅದರಂತೆಯೇ ಬೆಂಗಳೂರಿನ 5ನೇ ACMM ಕೋರ್ಟ್‌ ನಟ ದರ್ಶನ್, ವಿನಯ್, ಪ್ರಧೋಶ್ ಮತ್ತು ಧನರಾಜ್‌ ನಾಲ್ವರ ಮೊಬೈಲ್ ಅನ್‌ಸೀಲ್ ಮಾಡಲು ಒಪ್ಪಿಗೆ ಕೊಟ್ಟಿದೆ. ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಸಾಕ್ಷಿ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನಟ ದರ್ಶನ್‌ ಸೇರಿದಂತೆ ಈ ಆರೋಪಿಗಳು ಯಾರ್‍ಯಾರಿಗೆ ಕರೆ ಮಾಡಿದ್ದರು ಹಾಗೂ ಸಚಿವರು, ಶಾಸಕರು, ಪೊಲೀಸ್ ಅಧಿಕಾರಿಗಳಿಗೂ ಕರೆ ಮಾಡಿದ್ದಾರೆ ಎನ್ನುವ ಶಂಕೆಯಿದ್ದು, ಮೊಬೈಲ್‌ ಪರೀಶೀಲನೆ ಬಳಿಕ ಈ ಎಲ್ಲದರ ಬಗ್ಗೆ ಸತ್ಯ ಹೊರಬೀಳುವ ಸಾಧ್ಯತೆಯಿದೆ. ಅಲ್ಲದೆ, ಪೊಲೀಸರು ಆರೋಪಿಗಳ ಮೊಬೈಲ್‌ ಪರಿಶೀಲನೆಗೆ ಕೋರ್ಟ್‌ನಿಂದ ಒಪ್ಪಿಗೆ ಪಡೆದ ಹಿನ್ನೆಲೆ ಪ್ರಕರಣದಲ್ಲಿ ಮೂಗು ತೂರಿಸಿದವರಿಗೆ ಈಗಾಗಲೇ ನಡುಕ ಶುರುವಾಗಿದೆ ಅಂತಲೂ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+