ಇನ್ಮುಂದೆ 6106 ಇದೇ ನಮ್ಮ ಲಕ್ಕಿ ನಂಬರ್: ದರ್ಶನ್ ಫ್ಯಾನ್ಸ್ ಅದೃಷ್ಟ ಬಲಿಸುತ್ತಾ ಕೈದಿ ನಂಬರ್
ಬೆಂಗಳೂರು, ಜೂನ್ 24: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಸದ್ಯ ಬೆಂಗಳೂರಿನ ಕೇಂದ್ರ ಕಾರಗೃಹ ಅಂದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ದರ್ಶನ್ಗೆ ಕೈದಿ ನಂಬರ್ 6106 ನೀಡಲಾಗಿದೆ. ಪೊಲೀಸ್ ಕಸ್ಟಡಿಯಲಿದ್ದ ದರ್ಶನ್‌ನನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಶೀಘ್ರವೇ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ.
ದರ್ಶನ್ಗೆ ನೀಡಿರುವ 6106 ಕೈದಿ ನಂಬರ್ ಅಭಿಮಾನಿಗಳನ್ನು ಸೆಳೆಯುತ್ತಿದ್ದು, ಮೈಸೂರಿನ ದರ್ಶನ್ ಅಭಿಮಾನಿಯೊಬ್ಬ ಇನ್ನುಮುಂದೆ ಇದೇ ಅಂದರೆ 6106ನೇ ನಮ್ಮ ಲಕ್ಕಿ ನಂಬರ್ ಎಂದಿದ್ದಾನೆ ಅಲ್ಲದೇ ಇದೇ ನಂಬರ್‌ಅನ್ನು ನಮ್ಮ ಗಾಡಿ ನಂಬರ್ ಆಗಿ ಬದಲಾಯಿಸಿಕೊಳ್ಳುತ್ತೇನೆ ಎಂದಿದ್ದಾನೆ.

ನಟ ದರ್ಶನ್ ಕಟ್ಟಾ ಅಭಿಮಾನಿಯಾಗಿರುವ ಮೈಸೂರಿನ ಧನುಷ್ 6106 ನಂಬರ್‌ಅನ್ನು ಆರ್‌ಟಿಓನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾನೆ. ಅಲ್ಲವೇ ದರ್ಶನ್ ಜೈಲಿನಿಂದ ಬೇಗ ಬಿಡುಗಡೆಯಾಗಲಿ ಎಂದು 101 ತೆಂಗಿನಕಾಯಿ ಒಡೆಯುವುದಾಗಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದಾನೆ.
ನಿಮ್ಮನ್ನು ಹೀಗೆ ನೋಡಲು ಬೇಸರವಾಗುತ್ತಿದೆ ಎಂದು ಕಣ್ಣೀರಿಟ್ಟಿರುವ ಧನುಷ್ ನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮ ಬಾಸ್‌ಅನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದರೆ ರಾಜಾರೋಷವಾಗಿ ಹೊರಗೆ ಬರುತ್ತಾರೆ. ಕೆಟ್ಟ ಘಳಿಗೆ ಬಾಸ್ ಅದೆಲ್ಲಾ.. ತುಂಬಾ ಬೇಜಾರು ಬಾಸ್ ನೀವು ಹಂಗೆ ಇದ್ದರೆ ಎಂದು ಜೋರಾಗಿ ಅತ್ತಿದ್ದಾನೆ.

ತುಂಬಾ ಬೇಜಾರಾಗಿ ಬಿಟ್ಟಿದೆ ಬಾಸ್. ನಿಮ್ಮನ್ನು ನೋಡಬೇಕು. ಕೆಲವು ದಿನಗಳಿಂದ ನಮ್ಮ ಹುಡುಗರೆಲ್ಲಾ ಏನೋ ನಿಮ್ಮ ಬಾಸ್‌ದು ಹೀಗಾಗಿ ಬಿಟ್ಟಿದೆ. ಯಾವತ್ತೋ ಬರ್ತಾರೆ ಅಂತೆಲ್ಲಾ ಅನ್ನುತ್ತಿದ್ದಾರೆ ಬಾಸ್. ಇವತ್ತಲ್ಲ ನಾಳೆ ನಮ್ಮ ಬಾಸು ರಿಲೀಸ್ ಆಗೇ ಆಗುತ್ತಾರೆ. ನಮ್ಮ ಬಾಸು ಬರುತ್ತಿದ್ದಂತೆ ತಾಯಿ ಚಾಮುಂಡೇಶ್ವರಿಗೆ 101 ಈಡುಗಾಯಿ ಒಡೆಯುತ್ತೇನೆ.
ನಮ್ಮ ಅಭಿಮಾನಿಗಳ ಬಳಗ ಬಾಸ್ ಅನ್ನು ಭೇಟಿ ಮಾಡುತ್ತೇವೆ. ಬಾಸ್‌ಗೆ ಏನೂ ಆಗಿಲ್ಲ. ನಾವು ಬಾಸ್‌ನ ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲ. ಪಕ್ಕಾ ಲೋಕಲ್ ಡಿ ಬಾಸ್ ಅಭಿಮಾನಿ ನಾನು..ಬಾಸ್..ಬಾಸ್ ಡಿ ಬಾಸ್.. ಇಷ್ಟು ದಿನ ನಿಮ್ಮ ತಮ್ಮ ಅಣ್ಣಾ ಅಂತಾ ಬೆಳೆಸಿದರಿ ಅವರೆಲ್ಲಾ ಈಗ ಎಲ್ಲಿದ್ದಾರೆ. ಯಾರಿಗೆ ಯಾರೂ ಬರಲ್ಲ ಬಾಸ್. ನೀವು ಚೆನ್ನಾಗಿದ್ದರೆ ನೂರಲ್ಲ..ಒಂದು ಕೋಟಿ ಜನ ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.












Click it and Unblock the Notifications