ಕೊಲೆ... ಭಯ... ಆತಂಕ... ಡವಡವ... ಹೆದರಿಕೆಯ ಆ 36 ಗಂಟೆ
ಕನ್ನಡದ ನಟ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದೆ. ಕಳೆದ ಮಂಗಳವಾರ (ಜೂ.11)ರಂದು ಮೈಸೂರಿನಲ್ಲಿ ನಟನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ದರ್ಶನ್ ಮೈಸೂರಿನಲ್ಲಿ ಡೇವಿಲ್ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ಜಿಮ್ ಮಾಡುತ್ತಿದ್ದಾಗ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ದರ್ಶನ್ ಕೊಲೆ ಪ್ರಕರಣದ ಬಳಿಕ ಮೈಸೂರಿಗೆ ಹೋಗಿದ್ದಾರೆ. ಆಗ ಅವರ ಮನಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ದರ್ಶನ್ ಮೈಸೂರಿನಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರೂ, ಅವರ ಮನಸ್ಸು ಮಾತ್ರ ಬೆಂಗಳೂರಿನತ್ತಲೇ ಇತ್ತು. ಮುಖದಲ್ಲಿ ಮಾಡಿದ ತಪ್ಪನ್ನು ಎತ್ತಿ ತೋರಿಸುವಂತೆ ಮನಸ್ಥಿತಿ ಇತ್ತು. ಆ 36 ಗಂಟೆಗಳಲ್ಲಿ ಅವರಿಗೆ ಯಾರದೇ ಫೋನ್ ಬಂದರೂ, ಎದೆ ಬಡಿತ ಜೋರಾಗುತ್ತಲೆ ಇತ್ತು. ಕೊಲೆ ಪ್ರಕರಣ ಬಯಲಿಗೆ ಬಂದಬಿಟ್ಟಿದಿಯಾ ಎಂಬ ಭಯ ಅವರಿಗೆ ಕಾಡುತ್ತಿತ್ತು ಎಂಬುದು ಈಗ ತಿಳಿದು ಬಂದಿದೆ.

ಶೂಟಿಂಗ್‌ನಲ್ಲಿ ಭಾಗಿ
ಪಟ್ಟಣಗೆರೆಯ ಶೆಡ್ಡನಲ್ಲಿ ಕೆಲವೇ ಗಂಟೆಗಳಲ್ಲಿ ಮಾಡಿದ ತಪ್ಪು, ಇವರನ್ನು ಸುಮಾರು 36 ಗಂಟೆಗಳ ಕಾಲ ಟೆನ್ಷನ್‌ನಲ್ಲೇ ಇಟ್ಟಿದೆ. ಆದರೆ ಡೇವಿಲ್ ಶೂಟಿಂಗ್ ಸೆಟ್‌ನಲ್ಲಿ ಇದರ ಸೂಳಿವು ಸಿಗದಂತೆ ನೋಡಿಕೊಳ್ಳಲು ದರ್ಶನ್ ಯಶಸ್ವಿ ಆಗಿದ್ದರು ಎಂದು ತಿಳಿದು ಬಂದಿದೆ.
ಪಟ್ಟಣಗೇರೆ ಶೆಡ್ಡನಲ್ಲಿ ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್, ಶೂಟಿಂಗ್‌ನಲ್ಲಿ ಭಾಗವಹಿಸಲು ಮೈಸೂರಿಗೆ ತೆರಳಿದ್ದರು. ಈ ವೇಳೆ ಪ್ರಯಾಣದುದ್ದಕ್ಕೂ ಆತಂಕ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಪೊಲೀಸರು ಬಂಧಿಸುವ ಮುನ್ನ ದರ್ಶನ್, 36 ಗಂಟೆಗಳ ಕಾಲ ನಿಜಕ್ಕೂ ನರಕಯಾತೆಯನ್ನು ಅನುಭಿಸಿದ್ದಂತೂ ಸುಳ್ಳು ಅಲ್ಲವೇ ಅಲ್ಲ.

ದರ್ಶನ್ ಜೊತೆ ಯಾರಾದ್ರೂ ಮಾತನಾಡಲು ಮುಂದೆ ಬಂದರೂ, ಅವರೊಂದಿಗೆ ಹೆದರುತ್ತಲೆ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ಮಾಡಿ ಬಂದಿದ್ದ ಕೊಲೆ ಎಲ್ಲಿ ಬೆಳಕಿಗೆ ಬಂದು ಬಿಟ್ಟಿದೆ ಎಂಬ ಆತಂಕ ಸದಾ ಕಾಲ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆಪ್ತರು ಕರೆಗಳನ್ನು ಮಾಡಿದಾಗ ಕೃತಕ ನಗುವಿನ ಮೂಲಕ ಮ್ಯಾನೇಜ್ ಮಾಡಿದ್ದರು. ಅಲ್ಲದೆ ಈ ಬಗ್ಗೆ ಯಾರಿಗೂ ಸಂಶಯ ಬಾರದಂತೆ ನೋಡಿಕೊಂಡಿದ್ದರು ಎನ್ನಲಾಗಿದೆ.
ನನ್ನದೇ ಕಾರ್‌ನಲ್ಲಿ ಬರುವೆ
ಇನ್ನು ಜಿಮ್ ಮಾಡುವ ವೇಳೆ ದರ್ಶನ್‌ರನ್ನು ಬಂಧಿಸಲಾಗಿದೆ. ಬಳಿಕ ದರ್ಶನ್ ತನ್ನ ಕಾರಿನಲ್ಲಿ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಪೊಲೀಸರು ಜೀಪ್ ಹತ್ತುವಂತೆ ಸೂಚಿಸಿದ್ದಾರೆ. ಬಳಿಕ ದರ್ಶನ್ ಬೇರೆ ವಿಧಿ ಇಲ್ಲದೇ ಪೊಲೀಸ್ ಜೀಪ್ ಹತ್ತಿದ್ದಾರೆ. ದಾರಿಯುದ್ದಕ್ಕೂ ದರ್ಶನ್ ವಾದವನ್ನು ಮಂಡಿಸುತ್ತಲೇ ಬಂಧಿದ್ದಾನೆ ಎಂದು ಮಾಹಿತಿ ಸಿಕ್ಕಿದ್ದು. ಇದಾದ ಬಳಿಕ ಪೊಲೀಸರು ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ದರ್ಶನ್‌ಗೆ ತೋರಿಸಿರುವ ಸಾಧ್ಯತೆ ಇದೆ. ಆ ಒಂದು ದೃಶ್ಯ ನೋಡುತ್ತಲೆ ನಟ ಕಂಗಾಗಲಾಗಿದ್ದಾನೆ.












Click it and Unblock the Notifications