ಬೆಂಗಳೂರಿನ ಈ ಏರಿಯಾದಲ್ಲಿ ಬಾಡಿಗೆ ದರ ದಿಢೀರ್‌ ಏರಿಕೆ, 2 ಬಿಎಚ್‌ಕೆ ಮನೆಗೆ ಫುಲ್‌ ಡಿಮ್ಯಾಂಡ್‌!

ಸಿಲಿಕಾನ್‌ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ದೊಡ್ಡದಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ನಗರದ ಜನಸಂಖ್ಯೆ ಕೂಡ ಟಕ್ಕರ್‌ ಕೊಡುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಮನೆ ಖರೀದಿ, ಬಾಡಿಗೆ ಪಡೆಯುವವರ ಸಂಖ್ಯೆ ಏರುತ್ತಿದೆ. ಇದರಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಕೂಡ ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಒಂದು ಏರಿಯಾದಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳಿಗೆ ಫುಲ್‌ ಡಿಮ್ಯಾಂಡ್‌ ಹೆಚ್ಚಾಗಿದ್ದು, ಬೆಲೆ ಕೂಡ ದಿಢೀರ್‌ ಏರಿಕೆ ಕಂಡಿದೆ. ಅಚ್ಚರಿ ಎಂದರೆ ಈ ಭಾಗದಲ್ಲಿ 2 ಬಿಎಚ್‌ಕೆ ಮನೆ ಖರೀದಿಸುವ ಬೆಲೆಗೆ ಬೇರೆ ಭಾಗದಲ್ಲಿ 3 ಬಿಎಚ್‌ಕೆ ಮನೆ ಖರಿದೀಸಬಹುದು ಎಂದು ಹೋಲಿಕೆ ಮಾಡಲಾಗುತ್ತಿದೆ. ಯಾವುದು ಆ ಇತ್ತೀಚಿನ ದುಬಾರಿ ಏರಿಯಾ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಏರಿಯಾಗಳಲ್ಲಿ ಸರ್ಜಾಪುರ ರಸ್ತೆ ಕೂಡ ಒಂದು. ಈ ಭಾಗದಲ್ಲಿ ಐಟಿಬಿಟಿ ಕಂಪನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಭಾಗವನ್ನು ಟೆಕ್ಕಿಗಳ ಏರಿಯಾ ಎಂದು ಕರೆಯಲಾಗುತ್ತದೆ. ಇತ್ತೀಚಿನ ವರದಿ ಸರ್ಜಾಪುರ ರಸ್ತೆಯಲ್ಲಿನ ಸರಾಸರಿ ಆಸ್ತಿ ಬೆಲೆಗಳು ಪ್ರತಿ ಚದರ ಅಡಿಗೆ ಶೇ 79ರಷ್ಟು ಹೆಚ್ಚಾಗಿದೆಯಂತೆ.

rental-surge-on-sarjapur-road-property-2bhk-apartments-high-demand-bengaluru

2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಬೆಲೆ ₹1.5 ಕೋಟಿ

2021ರಲ್ಲಿ ಪ್ರತಿ ಚದರ ಅಡಿಗೆ ₹6,050 ರೂಪಾಯಿ ದರ ಇತ್ತು. ಆದರೆ ಈಗ ಇಲ್ಲಿನ ಅಪಾರ್ಟ್ಮೆಂಟ್‌ಗಳಲ್ಲಿ ಪ್ರಸ್ತುತ ಬೆಲೆಗಳು ಪ್ರತಿ ಚದರ ಅಡಿಗೆ ₹10,200ರಿಂದ 11,000 ರವರೆಗೆ ನಿಗದಿಪಡಿಸಲಾಗಿದೆ. ಇನ್ನೂ ಉನ್ನತ ಗುಣಮಟ್ಟದ ಜಾಗದಲ್ಲಿ ಪ್ರತಿ ಚದರ ಅಡಿಗೆ ₹12,000ವರೆಗೆ ಇದೆ ಎನ್ನಲಾಗಿದೆ. ಅದರಲ್ಲೂ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳ ಪ್ರಸ್ತುತ ಬೆಲೆ ₹80 ಲಕ್ಷದಿಂದ ₹1.5 ಕೋಟಿಗಳವರೆಗೆ ಇದೆ. ಕಳೆದ ಕೆಲವೇ ವರ್ಷಗಳಲ್ಲಿ ಇಲ್ಲಿನ ಮನೆ ದರವು ನಿರಂತರ ಬೆಳವಣಿಗೆ ಕಾಣುತ್ತಿದೆ. ಐದು ವರ್ಷಗಳಲ್ಲಿ ಬರೋಬ್ಬರಿ ಶೇ 87ರಷ್ಟು ಬೆಲೆ ಏರಿಕೆ ಕಂಡುಬಂದಿದೆ. 2020ರಲ್ಲಿ ಪ್ರತಿ ಚದರ ಅಡಿಗೆ ಸುಮಾರು ₹5000 ರೂಪಾಯಿ ಇದ್ದ ದರವು 2025ರಲ್ಲಿ ₹10,300ಕ್ಕೆ ಏರಿಕೆ ಕಂಡಿದೆ.

ಬೆಂಗಳೂರು ಉತ್ತರದಲ್ಲಿ ಬೆಲೆ ಕಡಿಮೆ

ಸರ್ಜಾಪುರ ರಸ್ತೆಗೆ ಹೋಲಿಸಿದರೆ, ಬೆಂಗಳೂರು ಉತ್ತರ ಭಾಗದಲ್ಲಿರುವ ಯಲಹಂಕ, ಥಣಿಸಂದ್ರ ಮತ್ತು ಹೆಬ್ಬಾಳ ಭಾಗಗಳಲ್ಲಿ 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ ದರಗಳು ಕಡಿಮೆ ಇದೆ. ಇಲ್ಲಿನ 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ₹85 ಲಕ್ಷದಿಂದ ₹1.79 ಕೋಟಿಗಳವರೆಗೆ ಮಾರಾಟವಾಗುತ್ತಿವೆ ಎಂದು ರಿಯಲ್‌ ಎಸ್ಟೇಟ್‌ ತಜ್ಞರು ಪತ್ತೆ ಹಚ್ಚಿದ್ದಾರೆ. ಯಲಹಂಕದಂತಹ ನೆರೆಹೊರೆಗಳಲ್ಲಿ ಪ್ರತಿ ಚದರ ಅಡಿಗೆ ಸರಾಸರಿ ಬೆಲೆ ₹7200ರಿಂದ ₹10,000ವರೆಗೆ ಇದೆ. ಥಣಿಸಂದ್ರದ ಸುತ್ತಮುತ್ತ ಪ್ರತಿ ಚದರ ಅಡಿಗೆ ₹9700 ಇದೆ.

ಹೀಗಾಗಿ ಸರ್ಜಾಪುರ ರಸ್ತೆಗಿಂತ ಇಲ್ಲಿದ ಬೆಲೆ ಹೆಚ್ಚು ಕೈಗೆಟುಕುವಂತಿದೆ. ಸರ್ಜಾಪುರ ಕಾರಿಡಾರ್ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಮತ್ತು ಔಟರ್ ರಿಂಗ್ ರಸ್ತೆಯಂತಹ ಪ್ರಮುಖ ಉದ್ಯೋಗ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಸರ್ಜಾಪುರ ರಸ್ತೆಯಲ್ಲಿನ ಈ ದಿಢೀರ್‌ ಬೆಲೆ ಏರಿಕೆಗೆ ಬೆಂಗಳೂರಿನ ಐಟಿ ವ್ಯವಸ್ಥೆಯೇ ಪ್ರಮುಖ ಕಾರಣ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+