• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2014ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನೆನಪು

|

ಬೆಂಗಳೂರು, ನವೆಂಬರ್ 12 : ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ವಿಧಿವಶರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆದಿತ್ತು.

1996 ರಿಂದ ಅನಂತ್ ಕುಮಾರ್ ಅವರು 6 ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅವರನ್ನು ಸೋಲಿಸಲು ಕಾಂಗ್ರೆಸ್ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಅನಂತ್ ಕುಮಾರ್ ಆ ಮಟ್ಟದ ಪ್ರಭಾವವನ್ನು ಹೊಂದಿದ್ದರು.

ಅನಂತ್ ಕುಮಾರ್ ನಿಧನ : ಕರ್ನಾಟಕ ಬಿಜೆಪಿಗೆ ದೊಡ್ಡ ನಷ್ಟ

2014ರ ಲೋಕಸಭಾ ಚುನಾವಣೆಯಲ್ಲಿ ಅವರು 6,33,816 ಮತಗಳನ್ನು ಪಡೆದು ಲೋಕಸಭೆಗೆ ಮತ್ತೊಮ್ಮೆ ಆಯ್ಕೆಯಾಗಿದ್ದರು. ಈ ಚುನಾವಣೆಯನ್ನು ಕರ್ನಾಟಕ ಕಾಂಗ್ರೆಸ್ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿತ್ತು. ರಾಷ್ಟ್ರೀಯ ಮಾಧ್ಯಮಗಳು ಸಹ ಕ್ಷೇತ್ರದ ಚುನಾವಣೆಯನ್ನು ಕುತೂಹಲದಿಂದ ನೋಡುತ್ತಿದ್ದವು.

ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ಹೈಕಮಾಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರು ಗೆಲ್ಲಲೇಬೇಕು ಎಂದು ಸೂಚಿಸಿತ್ತು. 2014ರ ಚುನಾವಣೆಯ ನೆನಪು ಇಲ್ಲಿದೆ....

ಅನಂತ್ ಕುಮಾರ್ v/s ನಿಲೇಕಣಿ

ಅನಂತ್ ಕುಮಾರ್ v/s ನಿಲೇಕಣಿ

2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್ ಕುಮಾರ್ ಮತ್ತು ನಂದನ್ ನಿಲೇಕಣಿ ಮುಖಾಮುಖಿಯಾಗಿದ್ದರು. ಅನಂತ್ ಕುಮಾರ್ ಅವರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿದ್ದ ಕಾಂಗ್ರೆಸ್ ನಂದನ್ ನಿಲೇಕಣಿ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಅನಂತ್ ಕುಮಾರ್ ಗೆದ್ದು ಬಂದಿದ್ದರು.

ಮಾಜಿ ಸಚಿವ, ನಂದನ್ ನಿಲೇಕಣಿ

ಮಾಜಿ ಸಚಿವ, ನಂದನ್ ನಿಲೇಕಣಿ

ಅನಂತ್ ಕುಮಾರ್ ಕೇಂದ್ರದ ಮಾಜಿ ಸಚಿವರು. ಆಗ ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿತ್ತು. ಆಧಾರ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ಅವರ ಮನವೊಲಿಸಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅನಂತ್ ಕುಮಾರ್ ಮತ್ತು ನಂದನ್ ನಿಲೇಕಣಿ ಸ್ಪರ್ಧೆಯ ಕಾರಣದಿಂದಾಗಿ ಬೆಂಗಳೂರು ದಕ್ಷಿಣ ಕ್ಷೇತ್ರ ದೇಶಾದ್ಯಂತ ಕುತೂಹಲ ಮೂಡಿಸಿತ್ತು.

ಸಿದ್ದರಾಮಯ್ಯಗೆ ಟಾಸ್ಕ್‌

ಸಿದ್ದರಾಮಯ್ಯಗೆ ಟಾಸ್ಕ್‌

2013ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲೇಬೇಕು ಎಂದು ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಸ್ಕ್ ನೀಡಿದ್ದರು. ಆದರೆ, ಯಾವ ತಂತ್ರವೂ ಅನಂತ್ ಕುಮಾರ್ ಗೆಲ್ಲದಂತೆ ತಡೆಯಲು ಸಾಧ್ಯವಾಗಿಲ್ಲ.

2014ರ ಚುನಾವಣಾ ಫಲಿತಾಂಶ

2014ರ ಚುನಾವಣಾ ಫಲಿತಾಂಶ

2014ರ ಲೋಕಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್, ನಂದನ್ ನಿಲೇಕಣಿ ಸೇರಿ 23 ಅಭ್ಯರ್ಥಿಗಳು ಬೆಂಗಳೂರು ದಕ್ಷಿಣ ಕ್ಷೇತ್ರದ ಚುನಾವಣಾ ಕಣದಲ್ಲಿದ್ದರು. ಫಲಿತಾಂಶ ಕೆಳಗಿನಂತಿದೆ

* ಅನಂತ್ ಕುಮಾರ್ 633816 ಮತ

* ನಂದನ್ ನಿಲೇಕಣಿ 405241 ಮತಗಳು

ಅನಂತ್ ಕುಮಾರ್ ಅವರು228575 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಅನಂತ್ ಕುಮಾರ್ ಎದುರಾಳಿಗಳು

ಅನಂತ್ ಕುಮಾರ್ ಎದುರಾಳಿಗಳು

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್ ಕುಮಾರ್ ಅವರು 6 ಬಾರಿ ಗೆಲುವು ಸಾಧಿಸಿದ್ದಾರೆ.

* 2009ರಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಎದುರಾಳಿ ಆಗಿದ್ದರು 400341 ಮತ ಪಡೆದಿದ್ದರು

* 1999ರ ಚುನಾವಣೆಯಲ್ಲಿ ಬಿ.ಕೆ.ಹರಿಪ್ರಸಾದ್ ಎದುರಾಳಿ ಆಗಿದ್ದರು 344107 ಮತ ಪಡೆದಿದ್ದರು

* 2014ರ ಚುನಾವಣೆಯಲ್ಲಿ ನಂದನ್ ನಿಲೇಕಣಿ ಎದುರಾಳಿ ಆಗಿದ್ದರು 405241 ಮತ ಪಡೆದಿದ್ದರು.

English summary
Bengaluru South constituency MP and Union minister Ananth Kumar no more. Here is a re call of the 2014 Bengaluru South constituency Lok Sabha election. Nandan Nilekani contested against Ananth Kumar in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X