ಮಕ್ಕಳನ್ನು ರಾಜ್ಯ ಪಠ್ಯಕ್ರಮ ಶಾಲೆಗೆ ಸೇರಿಸಲು ಪೋಷಕರ ಹಿಂದೇಟು, ಕಾರಣ ಏನು?, ಇಲ್ಲಿದೆ ವಿವರ
ಕರ್ನಾಟಕ, ಆಗಸ್ಟ್, 10: ಮಕ್ಕಳನ್ನು ರಾಜ್ಯ ಪಠ್ಯಕ್ರಮ ಶಾಲೆಗೆ ಸೇರಿಸಲು ಪಾಲಕರು ಹಿಂದೇಟು ಹಾಕುತ್ತಾ ಇದ್ದಾರಾ ಅನ್ನುವ ಅನುಮಾನಗಳು ಕಾಡುತ್ತಿದೆ. ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ದಾಖಲಾತಿ ಸಂಖ್ಯೆಯಲ್ಲಿ ತುಂಬಾ ಇಳಿಕೆ ಕಂಡಿದ್ದು, ಪೋಷಕರು ಕೂಡ ಈ ವಿಚಾರಕ್ಕೆ ಶಿಕ್ಷಣ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸುತ್ತಾ ಇದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿರುವುದಕ್ಕೆ ಕೇಂದ್ರೀಯ ಶಿಕ್ಷಣದತ್ತ ಮಕ್ಕಳು ಮನಸ್ಸು ಮಾಡಲು ಶಿಕ್ಷಣ ಇಲಾಖೆ ಕಾರಣ ಅಂತ ಕಿಡಿ ಕಾರಿದ್ದಾರೆ.

ಅಷ್ಟಕ್ಕೂ ಈ ಬಾರಿ ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಲಕ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಿಕ್ಷಣ ಇಲಾಖೆ ವ್ಯಾಪ್ತಿಯ ರಾಜ್ಯ ಪಠ್ಯಕ್ರಮ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಆಗುತ್ತಿರುವುದು ಸ್ಯಾಟ್ಸ್ ಅಲ್ಲಿ ಅಪ್ಲೋಡ್ ಮಾಡಿದ ಮಾಹಿತಿಯಲ್ಲಿ ಸಿಕ್ಕಿದೆ.
ಜುಲೈ 31ರವರೆಗೆ 1-10ನೇ ತರಗತಿ ವಿದ್ಯಾರ್ಥಿಗಳ ಮಾಹಿತಿಯನ್ನು ಶಿಕ್ಷಣ ಇಲಾಖೆ ಸಲ್ಲಿಕೆ ಮಾಡಿದ್ದು, ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ 1,01,51,162 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಕಳೆದ ವರ್ಷ 1,06,45,ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ರೀತಿ ದಾಖಲಾತಿ ಕುಸಿಯಲು ಮುಖ್ಯ ಕಾರಣ ಏನೆಂಬುದನ್ನು ಮಕ್ಕಳ ಪೋಷಕರು ಬಿಚ್ಚಿಟ್ಟಿದ್ದಾರೆ.
ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷ ಕೆಲ ಕೇಂದ್ರೀಯ ಶಿಕ್ಷಣ ಅನುಸರಿಸುವ ಶಾಲೆಗಳಲ್ಲಿ ಫೀಸ್ ಒನ್ ಟು ಡಬಲ್ ಇತ್ತು. ಈ ಹಿನ್ನಲೆ ಅನೇಕರು ಕಳೆದ ಬಾರಿ ರಾಜ್ಯ ಪಠ್ಯಕ್ರಮದ ಶಾಲೆಗೆ ದಾಖಲು ಮಾಡಿದ್ದರು. ಈ ವರ್ಷ ಮತ್ತೆ ಫೀಸ್ ಮೊದಲಿನ ಹಾಗೇ ಆಗಿರುವುದರಿಂದ ಕೇಂದ್ರ ಪಠ್ಯ ಕ್ರಮಕ್ಕೆ ಬೇಡಿಕೆ ಜಾಸ್ತಿ ಆಗಿದೆ.
ಇದರ ಜೊತೆಗೆ ಒಂದನೇ ತರಗತಿಗೆ ದಾಖಲಾತಿಗೆ 6 ವರ್ಷ ಕನಿಷ್ಠ ವಯೋಮಾನ ನಿಗದಿ ಮಾಡಿರುವ ಸರ್ಕಾರದ ನಿಯಮ ಕೂಡ ದಾಖಲಾತಿ ಕುಸಿಯಲು ಕಾರಣ ಆಗುತ್ತಿದೆ. ಈ ನಿಯಮ 2025/26ನೇ ಸಾಲಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಆದರೂ ಕೆಲವು ಕಡೆ ಈಗಾಗಲೇ ಜಾರಿ ಮಾಡಿರುವ ಕಾರಣ ಮಕ್ಕಳ ಸಂಖ್ಯೆ ಕುಸಿತಕ್ಕೆ ಕಾರಣ ಆಗುತ್ತಿದೆ.
ವಯೋಮಿತಿ ಕಾರಣಕ್ಕೆ ನರ್ಸರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಉಳಿಯುವಂತಾಗಿದೆ. ಇನ್ನು ಸರ್ಕಾರಿ ಶಾಲೆ ಮಧ್ಯಾಹ್ನದ ಬಿಸಿಯೂಟ ಸಮವಸ್ತ್ರ ಸರ್ಕಾರಿ ಸೌಲಭ್ಯ ಪಡೆಯಲು ನಕಲುವಿದ್ಯಾರ್ಥಿಗಳ ಮಾಹಿತಿ ಸಲ್ಲಿಕೆ ಮಾಡುತ್ತಿದ್ದರು. ಆದರೆ ಈಗ ಸೇರ್ಪಡೆಯಾಗುವ ಪ್ರತೀ ವಿದ್ಯಾರ್ಥಿಗೂ ಆಧಾರ್ ನಂಬರ್ ಕಡ್ಡಾಯ ಮಾಡಿರುವುದರಿಂದ ಹಾಗೂ ವಿದ್ಯಾರ್ಥಿಗಳಿಗೆ ಸ್ಯಾಟ್ಸ್ ನಂಬರ್ ನೀಡುವುದರಿಂದ ನಕಲಿ ಮಾಹಿತಿಗೆ ಬ್ರೇಕ್ ಬಿದ್ದಿದೆ.
ಇನ್ನೂ ಕೊರೊನಾ ಬಳಿಕ ಬದಲಾದ ಜೀವನ ಶೈಲಿ ವೃತ್ತಿಯಿಂದ ವಲಸೆ ನೀತಿ ಹೆಚ್ಚಳವಾಗಿದೆ. ಈ ಕಾರಣದಿಂದ ಮಕ್ಕಳು ಶಾಲೆಗೆ ಸೇರ್ಪಡೆಯಾಗುವು ಕೂಡ ವ್ಯತ್ಯಯ ಆಗಿರುವ ಸಾದ್ಯತೆಯೂ ಇದೆ ಎನ್ನಲಾಗಿದೆ.
ಈ ರೀತಿ ದಾಖಲಾತಿ ಪ್ರಮಾಣ ಕುಸಿಯುವುದಕ್ಕೆ ಏನು ಕಾರಣ ಅಂತಾ ಶಿಕ್ಷಣ ಇಲಾಖೆಗೆ ಇನ್ನೂ ಸ್ಪಷ್ಟವಾದ ಮಾಹಿತಿ ಇಲ್ಲ. ಈ ಬಗ್ಗೆ ಕಾರಣ ಕಂಡುಹಿಡಿಯಲು ಕೂಡ ಶಿಕ್ಷಣ ಇಲಾಖೆ ಮುಂದಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಮಾಹಿತಿ ನೀಡುವ ಅವಧಿಯನ್ನು ಈಗ ವಿಸ್ತರಣೆ ಮಾಡಲಾಗಿದೆ.
ಎಲ್ಲಾದರೂ ಅಂಕಿ-ಅಂಶಗಳ ವ್ಯತ್ಯಯ ಆಗಿದೆಯಾ ಅಂತಾ ಪರಿಶೀಲನೆ ಮಾಡಲು ಮತ್ತೊಂದು ಅವಕಾಶ ಕೊಡಲಾಗಿದೆ. ಇದೀಗ ಆಗಸ್ಟ್ 31ರವರೆಗೆ ಮಾಹಿತಿ ಸಲ್ಲಿಕೆ ಮಾಡಲು ಅವಧಿ ವಿಸ್ತರಣೆ ಮಾಡಿದೆ. ಇದರಿಣದ ಏನಾದರೂ ಅಂಕಿ-ಅಂಶ ಬದಲಾವಣೆ ಆಗುತ್ತಾ ಕಾದುನೋಡಬೇಕಿದೆ.
-
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
School Land Bill: ಸರ್ಕಾರಿ ಶಾಲೆಗಳ ಭೂರಕ್ಷಣ ವಿಧೇಯಕ ಜಾರಿ; ಕನ್ನಡದ ಹಿತದೃಷ್ಠಿಯಿಂದ ಮಹತ್ವದ ಹೆಜ್ಜೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು












Click it and Unblock the Notifications