ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ "ಕರಿಮಣಿ ಮಾಲಿಕ ನೀನಲ್ಲ.. ರಾಹುಲ್ಲಾ" ಹಾಡಿಗೆ ರೀಲ್ಸ್.. ಮುಂದೇನಾಯ್ತು?
ಬೆಂಗಳೂರು, ಮಾರ್ಚ್, 05: ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಯಾವುದೇ ತಪ್ಪುಗಳನ್ನು ಮಾಡದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಬಿಎಂಆರ್‌ಸಿಎಲ್ ಹೊರಡಿಸಿದೆ. ಇದನ್ನು ಮೀರಿ ಕೆಲವು ಪ್ರಯಾಣಿಕರು ಪದೇ ಪದೇ ಈ ನಿಯಮಗಳನ್ನು ಮೀರಿ ಪೇಚಿಗೆ ಸಿಲುಕುತ್ತಿರುವ ಘಟನೆಗಳು ನಡೆಯುತ್ತಿವೆ. ಮತ್ತೆ ಇದೀಗ ಇಂತಹದ್ದೇ ಒಂದು ಘಟನೆ ನಡೆದಿದೆ.
ಸದ್ಯ ಇದೀಗ "ಕರಿಮಣಿ ಮಾಲಿಕ ನೀನಲ್ಲ.. ರಾಹುಲ್ಲಾ", ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಂದಿರ ಬಾಯಲ್ಲೂ ಕೂಡ ಈ ಹಾಡು ಕೇಳಿಬರುತ್ತಿದೆ. ಅದರಲ್ಲೂ ಮದುವೆ ಕಾರ್ಯಕ್ರಮಗಳಲ್ಲೂ ಕೂಡ ಈ ಹಾಡು ಮತ್ತಷ್ಟು ಫೇಮಸ್ ಆಗುತ್ತಿದೆ. ಆದರೆ ಇದೇ ಹಾಡಿಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯುವಕರು ರೀಲ್ಸ್ ಮಾಡಿ ಹುಚ್ಚಾಟ ಮೆರೆದು ಪೇಚಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.

ನಿಯಮದ ಪ್ರಕಾರ ಮೆಟ್ರೋದಲ್ಲಿ ಯಾವುದೇ ರೀಲ್ಸ್ ಮಾಡುವಂತಿಲ್ಲ. ಹೀಗೆ ಮಾಡಿದರೆ ವೃದ್ಧರು ಚಿಕ್ಕ ಮಕ್ಕಳು ಹೆದರುವ ಸಾಧ್ಯತೆಗಳಿರುತ್ತವೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ನಮ್ಮ ಮೆಟ್ರೋ ರೈಲಿನಲ್ಲಿ ಯುವಕರ ಗುಂಪೊಂದು ಕಿರುಚುವ ಮೂಲಕ ಕರಿಮಣಿ ಮಾಲಿಕ ಹಾಡು ಹೇಳಿ ಪುಂಡಾಟ ಮೆರೆದಿದ್ದಾರೆ. ಇದು ಕಿರಿಕಿರಿ ಆಗಿದ್ದು, ರೀಲ್ಸ್ ಮಾಡಿದವರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
Crazy scene's in @OfficialBMRCL 😂🔥
— ದರ್ಶನ್ ಎ KAATERA💥🗡️ (@DarshanBoss05) March 4, 2024
And yes @RCBTweets won 🥵❤️🔥#RCBvUPW pic.twitter.com/o9CF6jDQOH
ಇನ್ನು ನಮ್ಮ ಮೆಟ್ರೋದಲ್ಲಿ ಯುವಕರು ರೀಲ್ಸ್ ಮಾಡಿದ ವಿಡಿಯೋ ಭಾರೀ ವೈರಲ್ ಆಗಿದ್ದು, ಬಿಎಂಆರ್‌ಸಿಎಲ್ ಅನ್ನು ಟ್ಯಾಗ್ ಮಾಡಿ ಪ್ರಯಾಣಿಕರು ಟ್ವೀಟ್ ಮೂಲಕ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಈ ಘಟನೆ ಯಾವ ಮಾರ್ಗದಲ್ಲಿ ಆಗಿದೆ ಎನ್ನುವ ಮಾಹಿತಿ ಇನ್ನೂ ತಿಳಿದುಬರಬೇಕಿದೆ.












Click it and Unblock the Notifications