ಬೆಂಗಳೂರಿಗೆ ಸಿಹಿ ಸುದ್ದಿ ಕೊಡಲಿದೆ ಕೇಂದ್ರ ಸರ್ಕಾರ?

ಬೆಂಗಳೂರು, ಮೇ 03 : ಬೆಂಗಳೂರು ನಗರದಲ್ಲಿ ಕೆಲವು ವಾರ್ಡ್‌ಗಳಲ್ಲಿ ಮಾತ್ರ ಕೊರೊನಾ ಪ್ರಕರಣ ದಾಖಲಾಗಿದೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶವನ್ನು ಕೆಂಪು ವಲಯ ಎಂದು ಗುರುತಿಸಲಾಗಿದೆ.

ಕರ್ನಾಟಕ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳನ್ನು ಕೆಂಪು ವಲಯ ಎಂದು ಗುರುತಿಸುವ ಬದಲು ಕೋವಿಡ್ - 19 ಪ್ರಕರಣಗಳಿಂದಾಗಿ ಕಂಟೈನ್‌ಮೆಂಟ್‌ ವಲಯ ಎಂದು ಘೋಷಣೆ ಮಾಡಿರುವುದನ್ನು ಮಾತ್ರ ಈ ವ್ಯಾಪ್ತಿಗೆ ಸೇರಿಸಬೇಕು ಎಂದು ತೀರ್ಮಾನಿಸಿದೆ.

ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಿದೆ. ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ, ಒಪ್ಪಿಗೆ ನೀಡಿದರೆ ಬೆಂಗಳೂರು ನಗರದಲ್ಲಿ ಕೆಲವು ಬಡಾವಣೆಗಳಿಗೆ ಲಾಕ್ ಡೌನ್‌ನಿಂದ ಹಲವು ವಿನಾಯಿತಿಗಳು ಸಿಗಲಿವೆ.

Red Zones In BBMP Limits Karnataka To Request Union govt

ಬಿಬಿಎಂಪಿ ಕೋವಿಡ್ - 19 ಪ್ರಕಗಳಿರುವ ವಾರ್ಡ್‌ಗಳನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಣೆ ಮಾಡಿದೆ. 198 ವಾರ್ಡ್‌ಗಳನ್ನು ಕೆಂಪು ವಲಯಕ್ಕೆ ಸೇರಿಸಿದರೆ ಆರ್ಥಿಕ ಚಟುವಟಿಕೆಗಳಿಗೆ ಅಡಚಣೆಯಾಗಲಿದೆ ಎಂಬುದು ಸರ್ಕಾರದ ವಾದ.

ಬಿಬಿಎಂಪಿಯ ದಕ್ಷಿಣ, ಪಶ್ಚಿಮ, ಬೊಮ್ಮನಹಳ್ಳಿ, ಪೂರ್ವ, ಮಹದೇವಪುರ, ಆರ್. ಆರ್. ನಗರ ವ್ಯಾಪ್ತಿಯಲ್ಲಿ ಹಲವು ಪ್ರದೇಶಗಳು ಕಂಟೈನ್‌ಮೆಂಟ್ ವಲಯಗಳಾಗಿವೆ. ಇಲ್ಲಿ ಲಾಕ್ ಡೌನ್ ನಿಯಮದಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ.

ಮೇಯರ್ ಗೌತಮ್ ಕುಮಾರ್ ಜೈನ್ ನಗರದಲ್ಲಿನ ಕಂಟೈನ್‌ಮೆಂಟ್ ವಲಯಗಳು ಯಾವುವು?, ಎಲ್ಲಿಯ ತನಕ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ ಎಂಬ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರ ಈ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆಂಪು ವಲಯದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+