Get Updates
Get notified of breaking news, exclusive insights, and must-see stories!

ಓಎಲ್ ನಾಗಭೂಷಣಸ್ವಾಮಿ ಅವರೊಂದಿಗೆ 'ಓದು ರಾಜಕಾರಣ'

ಬೆಂಗಳೂರು, ಜನವರಿ 26: ಸಾವಣ್ಣ ಪ್ರಕಾಶನವು ಜನವರಿ 28 ರಂದು ಓದು ರಾಜಕಾರಣ ಎನ್ನುವ ವಿಷಯ ಕುರಿತ ಸಂವಾದ ಕಾರ್ಯಕ್ರಮವನ್ನು ಬಸವನಗುಡಿಯ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಹಮ್ಮಿಕೊಂಡಿದೆ.

ಯಾರು ಯಾವ ಪುಸ್ತಕ ಓದುತ್ತಾರೆ. ಯಾಕೆ ಓದುತ್ತಾರೆ. ಯಾವುದನ್ನು ಓದುತ್ತಿರುವುದಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಾರೆ. ಗುಟ್ಟಾಗಿ ಯಾವುದನ್ನು ಓದುತ್ತಾರೆ. ಹೇಗೆ ಓದುತ್ತಾರೆ. ಬರೆಯದೇ ಇರುವ ಸಾಲುಗಳನ್ನೂ ಹೇಗೆ ಓದಿಕೊಳ್ಳಲಾಗುತ್ತಿದೆ. ತಮತಮಗೆ ಬೇಕಾದಂತೆ ಓದಿಕೊಳ್ಳುವುದು ಯಾಕೆ?

ಇವೆಲ್ಲದರ ಹಿಂದೊಂದು ರಾಜಕೀಯ ಕೆಲಸ ಮಾಡುತ್ತಿರುತ್ತದೆ. ಅದು ತೀರಾ ಅಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುತ್ತದೆ. ಅದು ನಮಗೆ ಗೊತ್ತಾಗದ ಹೊರತು, ನಮ್ಮ ಓದಿನ ರುಚಿ ನಮಗೆ ಸಿಗುವುದಿಲ್ಲ. ನಾವು ದಿಕ್ಕೆಟ್ಟವರಂತೆ ಓದುತ್ತಿರುತ್ತೇವೆ ಅಷ್ಟೇ.

Reading politics: talk by critic O.L.Nagabhushanaswamy

ಈ ಪಾಲಿಟಿಕ್ಸ್ ಆಫ್ ರೀಡಿಂಗ್ ಕುರಿತು ಹಿರಿಯ ವಿಮರ್ಶಕರೂ, ಅನುವಾದಕರೂ ಲೇಖಕರೂ ಆದ ಓ ಎಲ್ ನಾಗಭೂಷಣ ಸ್ವಾಮಿ ಮಾತಾಡುತ್ತಾರೆ.

ಸಾವಣ್ಣ ಪ್ರಕಾಶನದ ಜಮೀಲ್ ಹೀಗೇನಾದರೊಂದು ಮಾಡೋಣ ಅಂತ ಹೇಳುತ್ತಲೇ ಇದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಂತಿದೆ. ಪ್ರತಿ ತಿಂಗಳೂ ಒಬ್ಬರು ಒಂದು ಉಪನ್ಯಾಸ ನೀಡುವ, ನಂತರ ಎಲ್ಲರೂ ಸೇರಿ ಆ ಕುರಿತು ಚರ್ಚಿಸುವ ಒಂದು ಉಪನ್ಯಾಸ ಮಾಲಿಕೆಯನ್ನು ಶುರುಮಾಡಬಾರದೇಕೆ ಅನ್ನಿಸಿತು. ಹೀಗೆ ಮಾಡಿ ಅಂದರೆ, ನೀವೇ ಅದರ ಸಾರಥ್ಯ ವಹಿಸಿಕೊಳ್ಳಿ ಅಂದರು ಜಮೀಲ್.

ಇದು ಮೊದಲನೆಯ ಉಪನ್ಯಾಸ ಮಾಲೆ. ದಯವಿಟ್ಟು ಗುರುತು ಹಾಕಿಕೊಳ್ಳಿ. ಈ ಭಾನುವಾರ ಸೇರೋಣ ಎಂದು ಎಂದು ಈ ಉಪನ್ಯಾಸ ಮಾಲಿಕೆಯ ಸಂಪಾದಕರು ಹಿರಿಯ ಪತ್ರಕರ್ತ, ಸಾಹಿತಿ ಜೋಗಿ ತಿಳಿಸಿದ್ದಾರೆ.

ಏನು-ಸಾವಣ್ಣ ಉಪನ್ಯಾಸ ಮಾಲಿಕೆ-ಓದು ರಾಜಕಾರಣ
ಎಲ್ಲಿ-ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಯಾವಾಗ-ಜನವರಿ 28, ಭಾನುವಾರ- ಬೆಳಗ್ಗೆ10.30

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+