RCB Vs CSK ಮ್ಯಾಚ್ ನೋಡಲು ಬರೋಬ್ಬರಿ 1.46 ಲಕ್ಷ ಕಳೆದುಕೊಂಡ ಕಳೆದುಕೊಂಡ ಟೆಕ್ಕಿ, ಐಪಿಎಲ್ ಅಭಿಮಾನಿಗಳೇ ಹುಷಾರ್

RCB Vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಿಕೆಟ್ ಕೆಲವೇ ಕ್ಷಣಗಳಲ್ಲಿ ಸೋಲ್ಡ್‌ ಔಟ್‌ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಟಿಕೆಟ್ ಕೊಡಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದು ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಆರ್‌ಸಿಬಿ ಅಭಿಮಾನಿಯೊಬ್ಬರಿಗೆ ಟಿಕೆಟ್ ವಿಚಾರದಲ್ಲಿ ಭಾರೀ ಮೋಸವಾಗಿರುವುದು ವರದಿಯಾಗಿದೆ. ಅದರಲ್ಲೂ ಆರ್‌ಸಿಬಿ Vs ಸಿಎಸ್‌ಕೆ ಮ್ಯಾಚ್ ನೋಡುವುದಕ್ಕೆ ಜನ ಕಾತುರದಿಂದ ಕಾಯುತ್ತಿದ್ದರು ದುಬಾರಿ ಮೊತ್ತವನ್ನು ಪಾವತಿ ಮಾಡಿ ಹಲವರು ಟಿಕೆಟ್ ಸಹ ಖರೀದಿ ಮಾಡಿದ್ದರು. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಟಿಕೆಟ್‌ಗಾಗಿ ಮೋಸ ಹೋಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಇದೇನು ಘಟನೆ ಎನ್ನುವ ವಿವರ ಈ ಲೇಖನದಲ್ಲಿದೆ.

ಬೆಂಗಳೂರಿನ 25 ವರ್ಷದ ಟೆಕ್ಕಿಯೊಬ್ಬರಿಗೆ ಐಪಿಎಲ್ ಟಿಕೆಟ್‌ಗಳ ಮೇಲಿನ ವ್ಯಾಮೋಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಟಿಕೆಟ್ ಮಾರಾಟಗಾರನ ಸೋಗಿನಲ್ಲಿ ವಂಚಕನೊಬ್ಬನಿಂದ ಟೆಕ್ಕಿಯಿಂದ ಬರೋಬ್ಬರಿ 1.46 ಲಕ್ಷ ರೂ. ವಂಚನೆ ಮಾಡಿದ್ದಾನೆ. ಬೆಂಗಳೂರಿನ ಬಿ ನಾರಾಯಣಪುರ ನಿವಾಸಿಯಾಗಿರುವ ಟೆಕ್ಕಿ, ಟಿಕೆಟ್ ವಿಚಾರದಲ್ಲಿ ಮೋಸ ಹೋಗಿದ್ದು, ಈ ಸಂಬಂಧ ಬೆಂಗಳೂರಿನ ಮಹದೇವಪುರ ಪೊಲೀಸರಿಗೆ ದೂರು ನೀಡಿದ್ದಾರೆ.

RCB Vs CSK

ಬೆಂಗಳೂರು ಟೆಕ್ಕಿಯು ನೀಡಿದ ದೂರಿನಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್‌ನ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಆಹಾರ ಕೂಪನ್‌ಗಳೊಂದಿಗೆ ಐಪಿಎಲ್ ಟಿಕೆಟ್‌ಗಳನ್ನು ವ್ಯವಸ್ಥೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಟೆಕ್ಕಿನ ತನ್ನ ಖಾತೆಯಿಂದ ಮತ್ತು ಅವರ ತಾಯಿಯ ಖಾತೆಯಿಂದ ಹಲವು ಯುಪಿಐ ವಹಿವಾಟುಗಳ ಮೂಲಕ ಹಣ ವರ್ಗಾಯಿಸಲಾಗಿದೆ. ಈ ರೀತಿ ಮಾಡುವಂತೆ ವಂಚಕ ಮನವೊಲಿಸಿದ್ದ ಎಂದೂ ಅವರು ಹೇಳಿದ್ದಾರೆ.

RCB Vs CSK: 1.46 ಲಕ್ಷ ರೂ. ವಂಚನೆ

ಇನ್ನು ಬೆಂಗಳೂರಿನ ಆರ್‌ಸಿಬಿ Vs ಸಿಎಸ್‌ಕೆ ಮ್ಯಾಚ್‌ಗೆ ಟಿಕೆಟ್ ಕೊಡುವುದಾಗಿ ಟೆಕ್ಕಿಯಿಂದ ಬರೋಬ್ಬರಿ 1.46 ಲಕ್ಷ ರೂ.ಗಳನ್ನು ಪಡೆದಿದ್ದರು. ಆದರೆ ಟಿಕೆಟ್ ಕೊಡಲಿಲ್ಲ ಅಥವಾ ಮೊತ್ತವನ್ನು ಮರುಪಾವತಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಾನುವಾರ ನಡೆದ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕಾಗಿ ಆರೋಪಿಗಳು ಟಿಕೆಟ್‌ಗಳನ್ನು ಹೊಂದಿಸುವುದಲ್ಲದೆ, ಆಹಾರ ಕೂಪನ್‌ಗಳು ಮತ್ತು ಸ್ನೇಹಿತರಿಗೆ ಹೆಚ್ಚುವರಿ ಐಡಿ ಕಾರ್ಡ್‌ಗಳಂತಹ 'ವಿಐಪಿ ಸೇವೆ' ಕೊಡಿಸುವ ಭರವಸೆ ನೀಡಿದ್ದರು ಎಂದೂ ಹೇಳಲಾಗಿದೆ.

ಟಿಕೆಟ್ ನೀಡುವ ಮೋಸ ಜಾಲ ಹೇಗಿದೆ ?

ಇನ್ನು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳಿಗೆ ಟಿಕೆಟ್ ನೀಡುವ ಮೋಸ ಜಾಲ ಹೇಗಿದೆ ಎನ್ನುವುದನ್ನು ಈ ಘಟನೆ ಬಹಿರಂಗಪಡಿಸಿದೆ. ಹಣ ಪಡೆದವರು ಕ್ರೀಡಾಂಗಣದ ಗೇಟ್ ಸಂಖ್ಯೆ 10 ರ ಬಳಿ ಬರಲು ನನಗೆ ಹೇಳಿದರು. ಯಾರಾದರೂ ನಿಮಿಷಗಳಲ್ಲಿ ಟಿಕೆಟ್‌ಗಳನ್ನು ತಲುಪಿಸುತ್ತಾರೆ ಎಂದು ಹೇಳಿದರು ಮತ್ತು ನನ್ನ ವಿಶ್ವಾಸ ಗಳಿಸಲು ಇಮೇಲ್ ದೃಢೀಕರಣವನ್ನು ಸಹ ಕಳುಹಿಸಿದರು ಎಂದು ಹೇಳಿರುವುದಾಗಿ DH ವರದಿ ಮಾಡಿದೆ.

ಆರಂಭದಲ್ಲಿ ನಾನು ತಲಾ 3,700 ರೂ.ಗೆ ಎರಡು ಟಿಕೆಟ್‌ಗಳನ್ನು ಖರೀದಿಸಲು ಒಪ್ಪಿಕೊಂಡಿದ್ದೆ. ಆದರೆ ಮರುಪಾವತಿಸಬಹುದಾದ ಭದ್ರತಾ ಠೇವಣಿ, ಹೆಚ್ಚುವರಿ ಗುರುತಿನ ಚೀಟಿಗಳು ಮತ್ತು ಆಹಾರ ಕೂಪನ್‌ಗಳನ್ನು ಕೊಡುತ್ತೇವೆ ಇದಕ್ಕಾಗಿ ಹೆಚ್ಚಿನ ಹಣ ಪಾವತಿ ಮಾಡಬೇಕು ಎಂದು ಹೇಳಿದ್ದರು. ಅವರನ್ನು ನಂಬಿ, ನಾನು ಹಣ ಪಾವತಿ ಮಾಡಿದ್ದೇನೆ. ನನ್ನ ಅಕೌಂಟ್‌ನಲ್ಲಿ ಹಣ ಖಾಲಿಯಾದ ಮೇಲೆ ನನ್ನ ತಾಯಿಯ ಬ್ಯಾಂಕ್ ಖಾತೆಯನ್ನು ಬಳಸಿಯೂ ಸಹ ಹಣ ಕಳುಹಿಸಿದ್ದು, ಒಟ್ಟಾರೆ ಟಿಕೆಟ್ ಹಾಗೂ ಬೇರೆ ಬೇರೆ ಸೇವೆಗಾಗಿ ಒಟ್ಟಾರೆ 1.46 ಲಕ್ಷ ರೂ. ಹಣ ಪಾವತಿ ಮಾಡಿರುವುದಾಗಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+