ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ದುರಂತ: ಸಂಭ್ರಮಾಚರಣೆ ರದ್ದು!
ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಆರ್‌ಸಿಬಿ ಸಂಭ್ರಮಾಚರಣೆಯನ್ನು ರದ್ದು ಮಾಡುವ ಬಗ್ಗೆ ಮಹತ್ವದ ಅಪ್ಡೇಟ್ಸ್ ಬಂದಿದೆ. ಆರ್‌ಸಿಬಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಭಾರೀ ದುರಂತ ಸಂಭವಿಸಿದ್ದು 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ, ಆರ್‌ಸಿಬಿ ಸಂಭ್ರಮಾಚರಣೆ ರದ್ದು ಮಾಡುವ ಬಗ್ಗೆ ಐಪಿಎಲ್ ಚೇರ್ಮನ್ ಅವರು ಬಿಗ್ ಅಪ್ಡೇಟ್ಸ್ ಕೊಟ್ಟಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಸಂಭ್ರಮಾಚರಣೆ ಜೋರಾಗುತ್ತಿರುವ ಬೆನ್ನಲ್ಲೇ ಭಾರೀ ದುರಂತ ಸಂಭವಿಸಿತ್ತು. ಆರ್‌ಸಿಬಿಯ ಚೊಚ್ಚಲ ಕಪ್‌ನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಭಾರೀ ದುರಂತ ಸಂಭವಿಸಿದ್ದು 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲ್ತುಳಿತ ದುರಂತದಲ್ಲಿ ಗಾಯಗೊಂಡಿರುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಐಪಿಎಲ್‌ನ ಚೇರ್ಮನ್ ಅರುಣ್ ಧುಮಾಲ್ ಅವರು ನಾವು ಸಂಭ್ರಮಾಚರಣೆಗೆ ಅವಕಾಶವನ್ನೇ ನೀಡಿಲ್ಲ ಎಂದು ಹೇಳಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಇದು ಕರಾಳ ಕಪ್ಪು ಚುಕ್ಕೆಯಾಗಿ ಬದಲಾಗಿದೆ.

ಈ ದುರಂತದ ಬಗ್ಗೆ ಮಾತನಾಡಿರುವ ಐಪಿಎಲ್‌ನ ಚೇರ್ಮನ್ ಅರುಣ್ ಧುಮಾಲ್ ಅವರು, ಆರ್‌ಸಿಬಿಯ ಸಂಭ್ರಮಾಚರಣೆಗೆ ನಾವು ಯಾವುದೇ ಅನುಮತಿಯನ್ನು ನೀಡಿರಲಿಲ್ಲ. ಅಲ್ಲದೇ ಎಲ್ಲಾ ಆಟಗಾರರು ಅವರ ತವರಿಗೆ ಹೋಗಲಿದ್ದಾರೆ ಎಂದು ಹೇಳಿದ್ದರು. ಆರ್‌ಸಿಬಿ ಮ್ಯಾನೇಜ್ಮೆಂಟ್‌ನೊಂದಿಗೆ ಮಾತನಾಡಿ ಕಾರ್ಯಕ್ರವನ್ನು ರದ್ದುಪಡಿಸುವುದಕ್ಕೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
15 ನಿಮಿಷಗಳಿಗೆ ಮುಕ್ತಾಯ: ಇನ್ನು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರವನ್ನು ಮೊಟಕುಗೊಳಿಸಲಾಯಿತು. ಕೇವಲ 15 ನಿಮಿಷಗಳಿಗೆ ಮುಕ್ತಾಯವಾಯಿತು. ಆರ್‌ಸಿಬಿಯ ಚೊಚ್ಚಲ ಕಪ್‌ಗೆ ಈ ದುರಂತವು ಕಪ್ಪು ಚುಕ್ಕಿಯಾಗಿದೆ.
ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರಿದ್ದರು. ದುರಂತದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಹೆಚ್ಚು ನಡೆಸಲಿಲ್ಲ. ಸಂಭ್ರಮಾಚರಣೆಯು ಕೇವಲ ಔಪಚಾರಿಕವಾಗಿ ನಡೆಯಿತು. ಈ ಸಂಭ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಕನ್ನಡಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳು ಸುದೀರ್ಘ 18 ವರ್ಷಗಳು ಕಾದಿದ್ದರು. ಆದರೆ ಒಂದೇ ದಿನದಲ್ಲಿ ಆ ಕನಸೆಲ್ಲವೂ ನುಚ್ಚು ನೂರಾಯಿತು.
ಈ ದುರಂತವು ಕರ್ನಾಟಕಕ್ಕೆ ಒಂದು ಕಪ್ಪು ಚುಕ್ಕಿಯಾಗಿ ಮಾರ್ಪಟ್ಟಿದೆ. ಮೃತಪಟ್ಟವರ ಕುಟುಂಬದವರ ಆಕ್ರಂದನವು ಮುಗಿಲು ಮುಟ್ಟಿದೆ. ಈ ರೀತಿ ದುರಂತ ಸಂಭವಿಸಬಾರದಿತ್ತು. ಈ ದುರಂತವನ್ನು ತಪ್ಪಿಸುವುದಕ್ಕೆ ರಾಜ್ಯ ಸರ್ಕಾರದಿಂದ ಸಾಧ್ಯವಿತ್ತು ಅಥವಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ, ದುರಂತವನ್ನು ತಪ್ಪಿಸಬಹುದಾಗಿತ್ತು ಎಂದು ಕನ್ನಡಿಗರು ಹೇಳುತ್ತಿದ್ದಾರೆ.












Click it and Unblock the Notifications