Rashmika Mandanna: ನಿಮ್ಮಂಥ ನಾಯಕರಿರುವ ಈ ದೇಶದಲ್ಲಿ 'ನಾನು ಸುರಕ್ಷಿತ': ನಟಿ ರಶ್ಮಿಕಾ
ನವದೆಹಲಿ, ನವೆಂಬರ್ 07: ಬಹುಬೇಡಿಕೆಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು AI ಆಧಾರಿತ ಡೀಪ್‌ಫೇಕ್ ವಿಡಿಯೋ ಸಂಕಷ್ಟಕ್ಕೆ ಸಿಲುಕಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ನಟಿ ಪರವಾಗಿ, ಬೆಂಬಲಕ್ಕೆ ನಿಂತರು. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ ಫೇಸ್ ಎಐ ಎಡಿಟ್ ಮಾಡಿದ್ದ ಡೀಪ್ ಫೇಕ್ (Deepfake Video) ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ ಅಮಿತಾಬ್ ಬಚ್ಚನ್ ಕಾನೂನು ಕ್ರಮಕ್ಕೆ ಕರೆ ನೀಡಿದ್ದರು. ಅವರ X ಪೋಸ್ಟ್ ರೀ ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ ಕೃತಜ್ಞತೆ ತಿಳಿಸಿದ್ದಾರೆ.

ಡೀಪ್ ಫೇಕ್ ಪ್ರಕರಣ ಸಂಬಂಧ ನನ್ನೊಂದಿಗೆ ನಿಂತಿದ್ದಕ್ಕಾಗಿ ಧನ್ಯವಾದಗಳು. ''ನಿಮ್ಮಂಥ ನಾಯಕರು ಇರುವ ಈ ದೇಶದಲ್ಲಿ ನಾನು ಸುರಕ್ಷಿತವಾಗಿದ್ದೇನೆ'' ಎಂದು ರಶ್ಮಿಕಾ ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರೊಂದಿಗೆ ಅಭಿಮಾನಿಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಡೀಪ್ ಫೇಕ್ ವಿಡಿಯೋ ಜೊತೆಗೆ ರಿಯಲ್ (Fake vs Real) ವಿಡಿಯೋವನ್ನು ಶೇರ್ ಮಾಡಿಕೊಂಡು ತನ್ನ ಪರ ನಿಂತವರಿಗೆ ರಶ್ಮಿಕಾ ಕೃತಜ್ಞತೆ ಹೇಳಿದ್ದಾರೆ.
Thankyou for standing up for me sir, I feel safe in a country with leaders like you. https://t.co/rD9umXhKEn
— Rashmika Mandanna (@iamRashmika) November 6, 2023
ತಂತ್ರಜ್ಞಾನದ ದುರಪಯೋಗ ಎಂದ ರಶ್ಮಿಕಾ
ಇನ್‌ಸ್ಟಾಗ್ರಾಮ್‌ನಲ್ಲಿನ ಜಾರಾ ಪಟೇಲ್ ಎಂಬುವವರ ಲಿಫ್ಟ್ ಪ್ರವೇಶದ ಅರೆಬೆತ್ತಲೆ ವಿಡಿಯೋಗೆ ನಟಿ ರಶ್ಮಿಕಾ ಮುಖ ಎಡಿಟ್ ಮಾಡಿದ್ದ ಎಐ ಆಧಾರಿತ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ನಟಿ ರಶ್ಮಿಕಾ ಮಂದಣ್ಣ ಅವರು ಬೇಸರ ವ್ಯಕ್ತಪಡಿಸಿದ್ದರು. ತಂತ್ರಜ್ಞಾನವನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ನೋಡಿದರೆ ಭಯಾನಕ ಅನ್ನಿಸುತ್ತದೆ. ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ ಮತ್ತು ಆನ್‌ಲೈನ್‌ನಲ್ಲಿ ಹರಡುತ್ತಿರುವ ನನ್ನ ಕುರಿತಾದ ನಕಲಿ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ.
ಈ ರೀತಿಯ ವಿಡಿಯೋ/ಸಂಗತಿಯು ನನಗೆ ಮಾತ್ರವಲ್ಲದೆ ದುರ್ಬಲವಾಗಿರುವ ನಮ್ಮಲ್ಲಿ ಪ್ರತಿಯೊಬ್ಬರಿಗೂ ತುಂಬಾ ಭಯಾನಕವೇ ಆಗಿದೆ. ನಾನು ಮಹಿಳೆಯಾಗಿ ಮತ್ತು ನಟಿನಾಗಿ ನನ್ನ ರಕ್ಷಣೆ ಮತ್ತು ಬೆಂಬಲ ವ್ಯವಸ್ಥೆಯಾಗಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ.
ನಾನು ಶಾಲೆ ಅಥವಾ ಕಾಲೇಜು ಸಂದರ್ಭದಲ್ಲಿ ಇಂತಹ ಘಟನೆ ನಡೆದಿದ್ದರೆ ಇದನ್ನು ಹೇಗೆ ನಿಭಾಯಿಸಬಲ್ಲೆ ಎಂದು ನಾನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳ ಪ್ರಭಾವಕ್ಕೆ ಬೇರೆಯವರು ಒಳಲಾಗುವ ಮೊಲದು ಸಮುದಾಯ ಮಟ್ಟದಲ್ಲಿ ತುರ್ತಾಗಿ ಇಂತವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಪರಿಹರಿಸಬೇಕು ಎಂದು ಅವರು ಬರೆದುಕೊಂಡಿದ್ದರು.
ಬಾಲಿವುಡ್‌ನಲ್ಲಿ ಬ್ಯೂಸಿಯಾದ ನಟಿ
ಕನ್ನಡ ಸಿನಿಮಾದಿಂದ ಜನಪ್ರೀಯತೆ ಪಡೆದ ಕರ್ನಾಟಕದ ರಶ್ಮಿಕಾ ಮಂದಣ್ಣ ಅವರು ತೆಲುಗು, ಹಿಂದಿ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದಾರೆ. ಸದ್ಯ ಅವರ ಆನಿಮಲ್ ಸಿನಿಮಾ ಬಿಡುಗಡೆ ಸಜ್ಜಾಗಿದೆ. ನಟ ಅಲ್ಲು ಅರ್ಜುನ್ ಜತೆಗಿನ ಬಹುನಿರೀಕ್ಷೆಯ ಪುಷ್ಪ 2 (Pushpa 2) ಗಾಗಿ ಅವರ ಅಭಿಮಾನಿಗಳು ಕಾತರರದಿಂದ ಕಾಯುತ್ತಿದ್ದಾರೆ.
ಹೀಗೆ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆಯುತ್ತಿರುವ ಹೊತ್ತಿನಲ್ಲಿ ನಟಿ ರಶ್ಮಿಕಾ ಕುರಿತಾದ ವಿಡಿಯೋ ವೈರಲ್ ಆಗಿದ್ದು, ಅವರ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.












Click it and Unblock the Notifications