ಬೆಂಗಳೂರಿನಲ್ಲಿ ಪ್ರಧಾನಿ ಜೊತೆ ಚಂದ್ರಯಾನ ನೋಡಲಿರುವ ರಾಶಿ ಇವಳೇ!
ಲಕ್ನೋ, ಆಗಸ್ಟ್ 30: ಲಕ್ನೋದ ದೆಹಲಿ ಪಬ್ಲಿಕ್ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ರಾಶಿ ವರ್ಮಾ, ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಕಾಲಿಡಲಿರುವ ಚಂದ್ರಯಾನ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರೊಟ್ಟಿಗೆ ವೀಕ್ಷಿಸುವ ಅವಕಾಶ ಪಡೆದಿದ್ದಾಳೆ.
ಸೆಪ್ಟೆಂಬರ್ 7 ರಂದು ಮೋದಿ ಬೆಂಗಳೂರಿನಲ್ಲಿ ಇರಲಿದ್ದು, ಇಲ್ಲಿಯೇ ರಾಶಿ ಮೋದಿಯವರೊಂದಿಗೆ ಚಂದ್ರಯಾನ-2 ಚಂದ್ರನ ಮೇಲೆ ಕಾಲಿಡಲಿರುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾಳೆ.
"ತಾನು ಐಎಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಾಣುತ್ತಿರುವ ರಾಶಿ, ಅವಕಾಶ ಸಿಕ್ಕರೆ ತಾನು ಪ್ರಧಾನಿ ಮೋದಿ ಅವರೊಂದಿಗೆ ಕೆಲಕ್ಷಣವಾದರೂ ಮಾತುಕತೆ ನಡೆಸುತ್ತೇನೆ" ಎನ್ನುತ್ತಾರೆ.

ಪ್ರಧಾನಿಯವರೊಂದಿಗೆ ಚಂದ್ರಯಾನ ವೀಕ್ಷಿಸುವವರನ್ನು ಆನ್ ಲೈನ್ ಕ್ವಿಜ್ ಮೂಲಕ ಆಯ್ಕೆ ಮಾಡಲಾಗಿತ್ತು. ಈ ಕ್ವಿಜ್ ಗೆ ಯಶಸ್ವಿಯಾಗಿ ಉತ್ತರಿಸಿದ ರಾಶಿ ಈ ಅವಕಾಶ ಪಡೆದಿದ್ದಾಳೆ. ಜುಲೈ 22 ರಂದು ಉಡ್ಡಯನಗೊಂಡ ಚಂದ್ರಯಾನ 2 ಮೂನ್ ಮಿಶನ್ ನೌಕೆಯಲ್ಲಿರುವ ವಿಕ್ರಮ್ ಲ್ಯಾಂಡರ್ ಸೆ.2ರಂದು ನೌಕೆಯಿಂದ ಬೇರ್ಪಡಲಿದ್ದು, ಸೆ 7ರಂದು ಮೊದಲು ಚಂದ್ರನ ಮೇಲೆ ಕಾಲಿಡಲಿದೆ.












Click it and Unblock the Notifications