ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಪೂರ್ಣ ಚಂದಿರನ ದರ್ಶನ, ಅಪಶಕುನವೂ ಇದೆಯಂತೆ

By Srinath
|
Google Oneindia Kannada News

ಬೆಂಗಳೂರು, ಜೂನ್ 13: ಇಂದು ಶುಕ್ರವಾರ ಪೂರ್ಣ ಚಂದಿರನ ದರ್ಶನವಾಗಲಿದೆ. ಇಂದಿನ ಚಂದ್ರ ದರ್ಶನದಿಂದ ಅಪಶಕುನವೂ ಇದೆಯಂತೆ! ಅಂದಹಾಗೆ ಹುಣ್ಣಿಮೆ ನಿನ್ನೆಯೇ ಪ್ರಾರಂಭವಾಗಿದೆ. ಹಾಗಾಗಿಯೇ, ಜನ ನಿನ್ನೆ ಅಚಾನಕ್ಕಾಗಿಯಾದರೂ ಹಾಲು ಚೆಲ್ಲಿದಂತಹ ಚಂದ್ರನನ್ನು ನೋಡಿ ಆಹ್ಲಾದಿಸಿದ್ದಾರೆ.

ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಪೂರ್ಣ ಚಂದ್ರ ಗೋಚರಿಸುವುದು ಸಾಮಾನ್ಯ. ಆದರೆ ಇಂದಿನ ಪೌರ್ಣಮಿ ರಾತ್ರಿಯಲ್ಲಿ ಬಾನಂಗಳದಲ್ಲಿ ಗೋಚರಿಸಲಿರುವ ಚಂದಿರ ಸೂಪರ್ ಮೂನ್ ಆಗಿರುತ್ತಾನಂತೆ. ಭೂಮಿಗೆ ಅತೀ ಸಮೀಪದಲ್ಲಿ ಗೋಚರಿಸಲಿರುವ ಸೂಪರ್ ಮೂನ್ ಕಾಣಿಸಿಕೊಳ್ಳುವುದು ಗುರುವಾರದಿಂದ ಶುಕ್ರವಾರದ ಮಧ್ಯರಾತ್ರಿ ಮಾತ್ರ. (ಹೊಸ ಪ್ರಳಯದ ದಿನಾಂಕ ಬಂತು!)

ಇಂದು ರಾತ್ರಿ ಹುಣ್ಣಿಮೆಯ ಚಂದಿರ ಭೂಮಿಗೆ ಅತೀ ಸಮೀಪದಲ್ಲಿ ಗೋಚರಿಸಲಿರುವುದರಿಂದ ಮಾಮೂಲಿ ಹುಣ್ಣಿಮೆಗಿಂತ ದುಪ್ಪಟ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದ್ದಾನೆ ಈ ಸೂಪರ್ ಮೂನ್‌. ಇಂತಹ ಸೂಪರ್ ಮೂನ್‌ ಮತ್ತೊಮ್ಮೆ ಕಾಣಬೇಕೆಂದರೆ ಮುಂದಿನ 2043ನೇ ಇಸ್ವಿವರೆಗೂ ಕಾಯಬೇಕು ಅನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು.

rare-full-moon-phenomenon-to-happen-on-june-13-2014

ಅದರಲ್ಲೂ ಶುಕ್ರವಾರದ 13ನೇ ತಾರೀಖಿನಂದು ಹುಣ್ಣಿಮೆ ಬಂದಿರುವುದು ಈ ಬಾರಿಯ ವಿಶೇಷ. ಜತೆಗೆ, ಮನುಕುಲ ಸೃಷ್ಟಿಗೆ ಕಾರಣರಾದ ಅಡಂ ಮತ್ತು ಈವ್ ಈ ದಿನವೇ ದೇವಸೃಷ್ಟಿಯ ಸೇಬಿನ ಹಣ್ಣು ತಿಂದು ಜೀವಸೃಷ್ಟಿಗೆ ಕಾರಣರಾದರು ಎಂಬುದು ವಿಶೇಷವಾಗಿದೆ. ಕಳೆದ ಬಾರಿ 2000 ನೇ ಅಕ್ಟೋಬರಿನಲ್ಲಿ ಇಂತಹುದೇ ದಿನ ಬಂದಿತ್ತು. (ಶುಕ್ರವಾರ, 13 : ಹಿಂದೂಗಳಿಗೆ ಶುಭ, ಪಾಶ್ಚಾತ್ಯರಿಗೆ ಅಶುಭ)

ಜ್ಯೋತಿಷಿಗಳು ಹೇಳುವಂತೆ ಅಪಶಕುನವಾ!?:
ಸಂಖ್ಯೆ 13 ಅಪಶಕುನ ಎಂಬುದು ಬಹುತೇಕ ಜನರ ನಂಬಿಕೆ. ಹಾಗಾಗಿ 13ನೇ ತಾರೀಖಿನಂದೇ ಶುಕ್ರವಾರ ಬಂದಿರುವುದು. ಅದರ ಜತೆಗೆ ಹುಣ್ಣಿಮೆ ಬಂದಿರುವುದೂ ಭೂಮಂಡಲದಲ್ಲಿ ಹಲವಾರು ಅನಾಹುತಗಳು ನಡೆಯಲಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಅನೇಕ ಭಾಗಗಳಲ್ಲಿ 13ರಂದು ಹಲವಾರು ಗಂಡಾಂತರಗಳು ಸಂಭವಿಸುತ್ತಾ ಬಂದಿದೆ. ಆದ್ದರಿಂದ ಈ ಸಂಖ್ಯೆಯನ್ನು ಅಪಶಕುನದ ಸಂಖ್ಯೆ ಎಂದೇ ಪರಿಗಣಿಸಲಾಗಿದೆ. ಇಂತಹ ಹುಣ್ಣಿಮೆಯಂದು ಭೂಕಂಪ ಸಂಭವಿಸಿದ ನಿದರ್ಶನಗಳೂ ಇವೆಯಂತೆ. ಹೀಗಾಗಿ ಇದೊಂದು ಕರಾಳ ಹುಣ್ಣಿಮೆಯಾಗಿಯೂ ಪರಿಣಮಿಸುವ ಸಾಧ್ಯತೆ ಇದೆಯಾ? ಅಪಘಾತ, ಆಕಸ್ಮಿಕ ಘಟನೆಗಳು ಸಂಭವಿಸುವ ಸಾಧ್ಯತೆ ಇದೆಯಾ?

English summary
Rare Full Moon phenomenon to Happen on June 13 2014. A rare phenomenon is set to take place on Friday, June 13. Superstitious people already consider Friday the 13th as an unlucky day. The moon turns astronomically full – resides most directly opposite the sun for this month – on June 13, 2014 at 4:11 UTC. The Full Moon happening on Friday is described to be an extraordinary combination of the modern calendar and the lunar phases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X