ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲಿಕಾನ್ ಸಿಟಿಯಲ್ಲಿ ಹೊರ ರಾಜ್ಯದಿಂದ ವಿಧ್ಯಾಭ್ಯಾಸಕ್ಕಾಗಿ ಬಂದಿದ್ದ ಯುವತಿಯ ಅತ್ಯಾಚಾರ, ಕೊಲೆ!

By ನ್ಯೂಸ್ ಡೆಸ್ಕ್‌
|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಸಿಲಿಕಾನ್ ಸಿಟಿಯಲ್ಲಿ ಯುವತಿಯನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆಯು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊರ ರಾಜ್ಯದಿಂದ ವಿಧ್ಯಾಭ್ಯಾಸಕ್ಕಾಗಿ ಬಂದಿದ್ದ ಯುವತಿಯನ್ನ ಆರೋಪಿಯು ತನ್ನ ರೂಂನಲ್ಲಿಯೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಆರೋಪಿ ಹಾಗೂ ಮೃತಳ ಅಣ್ಣನಿಗೆ ಪರಿಚಯವಿತ್ತು. ಹೀಗಾಗಿ ಕಾಲೇಜಿಗೆ ಅಡ್ಮೀಶನ್ ಮಾಡಿಸುತ್ತೇನೆ ಅಂತಾ ಮೃತ ಯುವತಿಗೆ ಕಾಲ್ ಮಾಡಿ ತನ್ನ ರೂಂಗೆ ಕರೆಸಿಕೊಂಡಿದ್ದ ಆರೋಪಿಯು ಆಕೆಯನ್ನ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾನೆ.

ಮಹಿಳೆ ಅತ್ಯಾಚಾರ ನಡೆಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಯೂಟ್ಯೂಬರ್ ಬಂಧನಮಹಿಳೆ ಅತ್ಯಾಚಾರ ನಡೆಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಯೂಟ್ಯೂಬರ್ ಬಂಧನ

ಬೆಂಗಳೂರಿನಲ್ಲಿ ಖಾಸಗಿ ಕಾಲೇಜ್ ವೊಂದರಲ್ಲಿ ಅಡ್ಮಿಶನ್ ಪಡೆದಿದ್ದ ಮೃತ ವಿಧ್ಯಾರ್ಥಿನಿ , ಬಾಕಿ ಉಳಿದಿದ್ದ ಒಂದು ಕಂತಿನ ಹಣವನ್ನು ಕಟ್ಟಲು ನಗರಕ್ಕೆ ಬಂದಿದ್ದಳು. ಈ ವೇಳೆ ತನ್ನದೇ ರಾಜ್ಯದ ಕಾಲೇಜು ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದಾಳೆ.

Rape and murder of young woman in Silicon City Bengaluru

ಕಾಲೇಜ್ ಫೀಸ್ ಕಟ್ಟಲು ವಿದ್ಯಾರ್ಥಿನಿ ತನ್ನ ತನಗೆ ಪರಿಚಯವಿದ್ದ ಆರೋಪಿಗೆ ಕರೆ ಮಾಡಿದ್ದಳು. ಈ ವೇಳೆ ತನ್ನ ರೂಂ ಗೆ ಬರುವಂತೆ ಆರೋಪಿ ತಿಳಿಸಿದ್ದಾನೆ. ಆಟೋ ಮಾಡಿಕೊಂಡು ಆತನ ರೂಂಗೆ ತೆರಳಿದ್ದ ಆರೋಪಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ.

ಘಟನೆ ನಡೆದ ಬಳಿಕ ಆರೋಪಿಯು ಅದೇ ಬಿಲ್ಡಿಂಗ್ ನ ಕೆಳ ಮಹಡಿಗೆ ಬಂದು ತನ್ನ ಸ್ನೇಹಿತರ ಬಳಿ ತನ್ನ ಸ್ನೇಹಿತೆ ಪ್ರಜ್ಞೆ ಕಳೆದು ಕೊಂಡು ಬಿದಿದ್ದಾಳೆ ಎಂದ ಸುಳ್ಳು ಹೇಳಿದ್ದಾನೆ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆ ತರುವ ಮೊದಲೇ ಆಕೆಯು ಮೃತಪಟ್ಟಿರುವುದು ಸಾಭೀತಾಗಿದೆ.

Recommended Video

ಬೆಂಗಳೂರು:ಟ್ರಾಫಿಕ್ ಕ್ಲಿಯರ್ ಮಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ | Oneindia Kannada

ಈ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

English summary
The incident of rape and murder of a young woman in Silicon City took place at Badarahalli Police Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X