ಮರ್ಯಾದೆ ಪ್ರಶ್ನೆ : ಯುವ ಪೀಳಿಗೆ ತಲ್ಲಣಗಳ ನಾಟಕ ನೋಡಿ

ಬೆಂಗಳೂರು, ಜ.2:ರಂಗಾಸಕ್ತರಿಗೆ ರಂಗ ಶಂಕರ ದ ಪರಿಚಯ ಮಾಡಿಕೊಡಬೇಕಾಗಿಲ್ಲ. ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನ ನಾಟಕದ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ರಂಗ ಶಂಕರ, ರಂಗ ಪ್ರಯೋಗಗಳಿಗೆ ಸ್ಥಳಾವಕಾಶ ಮಾಡಿಕೊಡುವುದಲ್ಲದೇ ತನ್ನ ಸ್ವತಂತ್ರ ರಂಗ ಪ್ರಯೋಗಗಳನ್ನೂ ಪ್ರಸ್ತುತ ಪಡಿಸುತ್ತಾ ಬಂದಿದೆ.

ಕಳೆದ ವರ್ಷ ಜೂನ್ ನಲ್ಲಿ ಮೊದಲ ಪ್ರಯೋಗ ಕಂಡ 'ಮರ್ಯಾದೆ ಪ್ರಶ್ನೆ' ನಾಟಕ ಯುವ ಪೀಳಿಗೆಯ ಮನಸಿನ ತೊಳಲಾಟಗಳನ್ನು ಮತ್ತು ಸಮಾಜದ ಮೌಲ್ಯ ಗಳು ಅವರ ಮೇಲೆ ಬೀರುವ ಪರಿಣಾಮಗಳನ್ನು ಮತ್ತು ಅವರ ಆಸೆ ಹಂಬಲ, ಆಕಾಂಕ್ಷೆ, ತಲ್ಲಣ, ಪ್ರೀತಿ-ಪ್ರೇಮಗಳನ್ನು ಬಿಂಬಿಸುವ ನಾಟಕವಾಗಿದೆ.
ಜರ್ಮನ್‌ ಮೂಲದ ನಾಟಕಕಾರ ಲ್ಯುಟ್ಸ್‌ ಹ್ಯುಬ್ನರ್‌ ರಚಿಸಿದ ಈ ನಾಟಕವನ್ನು ಎಸ್‌ ಸುರೇಂದ್ರನಾಥ್‌ ಕನ್ನಡಕ್ಕೆ ತಂದು ನಿರ್ದೇಶಿಸಿದ್ದಾರೆ.

Maryade Prashne

ಜರ್ಮನಿಯ ಲ್ಯುಟ್ಸ್‌ ಹ್ಯುಬ್ನರ್‌ ರವರು, ಯುವಕರ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ರಚಿಸುವವರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಹಲವಾರು ನಾಟಕಗಳಲ್ಲಿ RESPECT ಒಂದು ಮುಖ್ಯ ನಾಟಕ. ಅದರ ಕನ್ನಡ ಅವತರಣಿಕೆಯೇ ಮರ್ಯಾದೆ ಪ್ರಶ್ನೆ. ಯುವ ಸಮಸ್ಯೆಗಳ ಕುರಿತಾದ ರಂಗಶಂಕರದ ಮೊದಲ ಪ್ರಯೋಗವಿದು.
Maryade Prashne Play

ಈ ನಾಟಕದ ಪ್ರದರ್ಶನ ಇದೇ ಜನವರಿ 2 (ಶುಕ್ರವಾರ) ಮತ್ತು ಜನವರಿ 3 (ಶನಿವಾರ) ರಂದು ರಂಗ ಶಂಕರದಲ್ಲಿ ನಡೆಯಲಿದೆ.

ಮರ್ಯಾದೆ ಪ್ರಶ್ನೆ

ರಚನೆ ಮೂಲ :
ಜರ್ಮನ್‌ ಮೂಲದ ನಾಟಕಕಾರ ಲ್ಯುಟ್ಸ್‌ ಹ್ಯುಬ್ನರ್‌

ಕನ್ನಡ ಅನುವಾದ ಮತ್ತು ನಿರ್ದೇಶನ :
ಎಸ್‌. ಸುರೇಂದ್ರನಾಥ್‌ :

ಅಭಿನಯ :
ರಂಗ ಶಂಕರ

Maryade Prashne at Rangashankara


ಸ್ಥಳ :
ರಂಗಶಂಕರ

ದಿನಾಂಕ ಮತ್ತು ಸಮಯ :
02/01/2015 ಸಂಜೆ 7:30 ಕ್ಕೆ
03/01/2015 ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 7:30 ಕ್ಕೆ

ಟಿಕೆಟ್ ದರ :
ರೂ. 100/-

online booking : www.bookmyshow.com
ಟಿಕೆಟ್ ಗಳು ರಂಗ ಶಂಕರ ದಲ್ಲಿ ದೊರೆಯುತ್ತವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+