ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಂಕರ್ ನಾಗ್ ಕನಸು ಈಗ ನನಸಾಗುತ್ತಿದೆ: ಅರುಂಧತಿ

By Mahesh
|
Google Oneindia Kannada News

ಬೆಂಗಳೂರು, ಜ. 19: ನಟ, ರಂಗಕರ್ಮಿ ಶಂಕರ್‌ನಾಗ್ ಅವರ ಕನಸು ಕೊನೆಗೂ ನನಸಾಗುವ ಕಾಲ ಬಂದಿದೆ. ಹತ್ತು ವರ್ಷಗಳ ಬಳಿಕ 'ರಂಗ ಶಂಕರ' ಕರ್ನಾಟಕದ ಬೇರೆ ಊರುಗಳಿಗೆ ಸಂಚರಿಸಲು ಸಿದ್ಧವಾಗಿದೆ. ಜನವರಿ 21 ರಿಂದ ರಂಗಶಂಕರ ಲೋಕ ಸಂಚಾರ ಆರಂಭಗೊಳ್ಳಲಿದೆ.

ಜನವರಿ 21ರಿಂದ ರಂಗ ಶಂಕರ ಲೋಕಸಂಚಾರ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ತಾಲೂಕುಗಳು, ಜಿಲ್ಲಾ ಕೇಂದ್ರಗಳಲ್ಲೂ ನಾಟಕ ಪ್ರದರ್ಶನ ನೀಡುವ ಉದ್ದೇಶ ಹೊಂದಲಾಗಿದೆ. ಸದ್ಯಕ್ಕೆ ತುಮಕೂರು, ಚಿತ್ರದುರ್ಗ, ಹಾವೇರಿ ಹಾಗೂ ದಾವಣಗೆರೆಯಲ್ಲಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಕೇತ್ ಟ್ರಸ್ಟ್ ನ ಎಸ್ ಸುರೇಂದ್ರ ನಾಥ್ ಹೇಳಿದರು.

ಬೆಂಗಳೂರಿನ ಹೊರಗಡೆ ಎರಡನೇ ಸ್ತರದ ನಗರಗಳಲ್ಲಿ ನಾಟಕ ಪ್ರದರ್ಶನ, ರಂಗ ಶಿಬಿರಗಳನ್ನು ಆಯೋಜಿಸುವುದು ಶಂಕರ್ ಕನಸಾಗಿತ್ತು. ಈ ತಿಂಗಳ ರಂಗಶಂಕರ ಲೋಕ ಸಂಚಾರ ಬಳಿಕ ಫೆಬ್ರವರಿಯಲ್ಲಿ ಮೈಸೂರು, ಮಂಡ್ಯ, ಕೆ.ಆರ್ ಪೇಟೆಗಳಲ್ಲಿ ಲೋಕ ಸಂಚಾರ ಮುಂದುವರೆಯಲಿದೆ. ಒಟ್ಟು 15 ಜನರ ಎರಡು ತಂಡ ನಾಟಕ ಪ್ರದರ್ಶನ ನೀಡಲಿದೆ. ಇವರಿಗೆ ರಂಗಶಂಕರ ವತಿಯಿಂದ ವೇತನ ನೀಡಲಾಗುತ್ತದೆ ಎಂದು ನಟಿ, ಸಂಕೇತ್ ಟ್ರಪ್ಟ್ ವ್ಯವಸ್ಥಾಪಕಿ ಅರುಂಧತಿ ನಾಗ್ ತಿಳಿಸಿದರು.

Ranga Shankara Loka Sanchara in Karnataka's Cities

ಎಲ್ಲೆಲ್ಲಿ ಯಾವ ಯಾವ ನಾಟಕ ವಿವರ :

ದಾವಣಗೆರೆ
ಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ
* ಜನವರಿ 21ರಂದು ಮುಲ್ಲಾ ನಾಸಿರುದ್ದೀನ್
* ಜನವರಿ 22ರಂದು ದ್ವೀಪ
* ಜನವರಿ 23ರಂದು ಗುಮ್ಮ ಬಂದ ಗುಮ್ಮ
* ಜನವರಿ.24ರಂದು ಮರ್ಯಾದೆ ಪ್ರಶ್ನೆ ನಾಟಕ

ಹಾವೇರಿ ಜಿಲ್ಲೆಯ ಶೇಷಗಿರಿಯ ಸಿಎಂ ಉದಾಸಿ ಕಲಾಕ್ಷೇತ್ರದಲ್ಲಿ
* ಜನವರಿ 22 ರಂದು ಗುಮ್ಮ ಬಂದ ಗುಮ್ಮ
* ಜನವರಿ 23ರಂದು ಮರ್ಯಾದೆ ಪ್ರಶ್ನೆ ನಾಟಕ ಪ್ರದರ್ಶನ

ತುಮಕೂರಿನ ಎಸ್‌ಐಟಿ ಬಿರ್ಲಾ ರಂಗಮಂದಿರದಲ್ಲಿ.
* ಜನವರಿ 22 ರಂದು ಮರ್ಯಾದೆ ಪ್ರಶ್ನೆ
* ಜನವರಿ 23 ರಂದು ದ್ವೀಪ
* ಜನವರಿ 24 ರಂದು ಗುಮ್ಮ ಬಂದ ಗುಮ್ಮ ನಾಟಕ ಪ್ರದರ್ಶನವಿದೆ.

ಚಿತ್ರದುರ್ಗದ ಸಾಣೇಹಳ್ಳಿಯಲ್ಲಿ
* ಜನವರಿ 21ರಂದು ಗುಮ್ಮ ಬಂದ ಗುಮ್ಮ ನಾಟಕ ಏರ್ಪಡಿಸಲಾಗಿದೆ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಂಗಭೂಮಿಯನ್ನು ಪಠ್ಯೇತರ ಚಟವಟಿಕೆಯಾಗಿ ಆಳವಡಿಸಲು ಶಿಕ್ಷಕರಿಗೆ ನಾಟಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಶಂಕರ್‌ನಾಗ್‌ರ ಆಶಯದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ನಾಟಕ ಪ್ರದರ್ಶನ ಕೊಂಡೊಯ್ಯುವುದು ನಮ್ಮ ಉದ್ದೇಶ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್, ರಂಗಕರ್ಮಿ ಸುರೇಶ್, ನಿರ್ದೇಶಕ ಎಸ್ ಸುರೇಂದ್ರನಾಥ್ ಉಪಸ್ಥಿತರಿದ್ದರು.

English summary
Ranga Shankara Loka Sanchara in Karnataka's Cities Davangere, Haveri, Tamakuru, Chitradurga. Ranga Shankara Born from a dream envisioned by actor – director Shankar Nag the theatre is a celebration of artistic excellence Ranga Shankara is a commitment to the art of theatre, to the cultural fabric of our country and its people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X