Rameshwaram Cafe Blast Impact: ಬಾಂಬ್ ಬ್ಲಾಸ್ಟ್‌ಗೆ ಬೆಚ್ಚಿಬಿದ್ದ ರಾಜಧಾನಿ- ವೀಕ್‌ಎಂಡ್‌ನಲ್ಲೂ ಕೆಫೆಗಳಿಗೆ ಬಾರದ ಜನ
ಬೆಂಗಳೂರು, ಮಾರ್ಚ್ 02: ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (rameshwaram cafe blast) ಶುಕ್ರವಾರ ಬಾಂಬ್ ಸ್ಪೋಟಗೊಂಡಿದೆ. ನಾಲ್ವರ ಬಂಧನವಾಗಿದೆ. ಈ ಘಟನೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಇತರ ಶಾಖೆಗಳಿಗೆ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ.
ಹೌದು, ಸದ್ಯ ಘಟನೆ ನಡೆದಿರುವುದು ಐಟಿಪಿಎಲ್ ಮುಖ್ಯರಸ್ತೆಯ ಶಾಖೆಯಲ್ಲಿ ಆದರೂ ಸಹಿತ ಅವರದ್ದ ಇನ್ನೂ ಮೂರು ಶಾಖೆ ಬೆಂಗಳೂರಿನಲ್ಲಿವೆ. ರಜಾದಿನವಾದರೂ ಇಂದು ಕೆಫೆಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗಿದೆ.

ಭಯೋತ್ಪಾದಕ, ಉಗ್ರರ ಬಾಂಬ್ ಸ್ಪೋಟಕಗಳು, ದಾಳಿಗಳು ಎಂಥವರಲ್ಲಿಯೂ ನಡುಕ ಹುಟ್ಟಿಸುತ್ತಿವೆ. ಇದೀಗ ಆಗಿರುವ ಘಟನೆಯಿಂದ ದೇಶವ್ಯಾಪಿ ಎಲ್ಲರ ಗಮನ ಬೆಂಗಳೂರಿನತ್ತ ನೆಟ್ಟಿದೆ. ಯಾವಾಗ ಏನಾಗಿ ಬಿಡುತ್ತದೋ ಎಂದು ಜನ ಹೆದರುತ್ತಿದ್ದಾರೆ.
ಕೆಫೆಗೆ ಅರ್ಧದಷ್ಟು ಜನರು ಬಂದಿಲ್ಲ
ಅದರಲ್ಲೂ ಪ್ರತಿ ದಿನ, ಶನಿವಾರ ಭಾನುವಾರದಂತಹ ರಜಾ ದಿನಗಳಲ್ಲಿ ರಾಮೇಶ್ವರಂ ಕೆಫೆಯ ರಾಜಾಜಿನಗರ, ಇಂದಿರಾನಗರ ಮತ್ತು ಜೆಪಿ ನಗರದ ಶಾಖೆಗಳಲ್ಲಿ ಜನ ತುಂಬಿರುತ್ತಿದ್ದರು. ಆದರೆ ಶುಕ್ರವಾರ ಘಟನೆಯಿಂದ ಗ್ರಾಹಕರು ಈ ಕೆಪೆಯತ್ತ ತಿರುಗಿಯೂ ನೋಡದಂತಾಗಿದೆ. ಎಂದಿನಂತೆ ಬರುತ್ತಿದ್ದ ಜನ ಅರ್ಧದಷ್ಟು ಜನರು ಇಂದು ಶನಿವಾರ ರಾಜಾಜಿನಗರದಲ್ಲಿ ಕಂಡು ಬಂದಿಲ್ಲ ಎಂದು ವರದಿ ಆಗಿದೆ.

ಶುಕ್ರವಾರ ಐಟಿಪಿಲ್ ರಸ್ತೆಯ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ದುಷ್ಕರ್ಮಿಗಳು ಕಡಿಮೆ ತೀವ್ರತೆಯ ಬಾಂಬ್ ಸ್ಪೋಟಿಸಿದ್ದಾರೆ. ಘಟನೆಯಲ್ಲಿ ಸುಮಾರು ಹತ್ತು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಜನರು ಈಗ ದೇಶದೆಲ್ಲೆಡೆ ಸುದ್ದಿಯಾಗಿದೆ.
ಶೀಘ್ರವೇ ತನಿಖೆಯಿಂದ ಸತ್ಯ ಬಹಿರಂಗ
ಅಗತ್ಯ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆ ಬೆಂಗಳೂರು, ಧಾರವಾಡ, ಹುಬ್ಬಳ್ಳಿ ಯಿಂದ ಒಟ್ಟು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ ಹಿಂದೆ ಯಾರಿದ್ದಾರೆ. ಸ್ಪೋಟಿಸಿದವರ ಉದ್ದೇಶವೇನು? ಎಂಬುದನ್ನು ತನಿಖೆಯಿಂದ ಬಹಿರಂಗವಾಗಬೇಕಿದೆ.
ಸಿಸಿಟಿವಿ ಯಲ್ಲಿನ ದೃಶ್ಯಾವಳಿಗಳನ್ನು ಆಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತ ಸಿಸಿ ಟಿವಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಘಟನೆ ಬಳಿಕ ಕೇವಲ ರಾಮೇಶ್ವರ ಕೆಫೆ ಮಾತ್ರವಲ್ಲದೇ, ಬೇರೆ ಕೆಫೆ ಇನ್ನಿತರ ಜನದಟ್ಟಣೆ ಇರುವ ಸ್ಥಳಗಳಿಗೆ ತೆರಳಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅರವಿಂದ ಬೆಲ್ಲದ್ ಗಂಭೀರ ಆರೋಪ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಅಷ್ಟೇ ಅಲ್ಲಾ ರಾಜ್ಯದಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ದಾಳಿ ನಡೆಯುತ್ತಿದೆ. ಬಾಂಬ್ ಬ್ಲಾಸ್ಟ್ ಪ್ರಕರಣ ಇದೊಂದು ಸರಣಿಯಾಗಿ ನಡೆಯುತ್ತಿದೆ. ಎರಡು ದಿನಗಳ ಹಿಂದೆ ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದರು. ಈ ಹಿಂದೆ ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಅವರು ನಮ್ಮ ಅಣ್ಣ ತಮ್ಮಂದಿರು ಅಂತಾ ಹೇಳಿದ್ದರು ಎಂದು ರಾಜ್ಯ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪಿಎಫ್ ಐ ಚಟುವಟಿಕೆಗಳಲ್ಲಿ ಸಕ್ರಿಯವಾಗುವಂತೆ ಕುಮ್ಮಕ್ಕು ಕೊಡಲಾಗಿದೆ. ಇಂದು ಸಣ್ಣ ಬಾಂಬ್ ಇಟ್ಟಿರುವವರು ನಾಳ ದೊಡ್ಡ ಬಾಂಬ್ ಇಡುತ್ತಾರೆ. ಹೀಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications